ಇಸ್ತಾಂಬುಲ್: ಸೋಮವಾರ ಟರ್ಕಿಯಲ್ಲಿ 6.0 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ, ಇದು ಕಳೆದ 24 ಗಂಟೆಗಳಲ್ಲಿ ದಾಖಲಾದ ಮೂರನೇ ಕಂಪನವಾಗಿದೆ. ಸೋಮವಾರ 7.6 ತೀವ್ರತೆಯ ಭೂಕಂಪ ಮತ್ತು 7.8 ತೀವ್ರತೆಯ ಭೂಕಂಪದ ನಂತರ ಈ ಕಂಪನವು ದಾಖಲಾಗಿದೆ.
ಸೋಮವಾರ ಬೆಳಗ್ಗೆ ಆಗ್ನೇಯ ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ ಕಂಪನಗಳು ಅಪ್ಪಳಿಸಿ, 1,800 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ.
ಸೋಮವಾರ ಬೆಳಗ್ಗೆ ಸಂಭವಿಸಿದ 7.8 ತೀವ್ರತೆಯ ಭೂಕಂಪದಿಂದ ಟರ್ಕಿಯಲ್ಲಿ ಕನಿಷ್ಠ 1,042 ಜನರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ. ಸಿರಿಯಾದಲ್ಲಿ, ಭೂಕಂಪದಿಂದ ಕನಿಷ್ಠ 783 ಜನರು ಸಾವನ್ನಪ್ಪಿದ್ದಾರೆ. ಈ ವಿಪತ್ತನ್ನು ಸುಮಾರು ಒಂದು ಶತಮಾನದಲ್ಲೇ ಅತ್ಯಂತ ಶಕ್ತಿಶಾಲಿ ಕಂಪನ ಎಂದು ಕರೆಯಲಾಗಿದೆ.
ಟರ್ಕಿಯ ಅಧ್ಯಕ್ಷ ಎರ್ಡೊಗನ್ ಸೋಮವಾರದ ಮುಂಜಾನೆ ಭೂಕಂಪವನ್ನು ಕಳೆದ ಶತಮಾನದಲ್ಲಿ ದೇಶವು ಅನುಭವಿಸಿದ “ಅತಿದೊಡ್ಡ ವಿಪತ್ತು” ಎಂದು ಕರೆದಿದ್ದಾರೆ.
Related Articles
ಮೂರು ದಿನಗಳ ಹಿಂದೆ ಮುನ್ಸೂಚನೆ
ಸಂಶೋಧಕರು ಮೂರು ದಿನಗಳ ಹಿಂದೆಯೇ ಟರ್ಕಿ, ಸಿರಿಯಾ ಭೂಕಂಪದ ಭವಿಷ್ಯ ನುಡಿದಿದ್ದರು. ಫೆಬ್ರವರಿ 3 ರಂದು ನೆದರ್ಲ್ಯಾಂಡ್ಸ್‌ನ ಸಂಶೋಧಕ ಫ್ರಾಂಕ್ ಹೂಗರ್‌ಬೀಟ್ಸ್ ಅವರು ಟ್ವೀಟ್‌ನಲ್ಲಿ 7.5 ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪವು ಈ ಪ್ರದೇಶವನ್ನು ಅಪ್ಪಳಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಟರ್ಕಿ ಮತ್ತು ಸಿರಿಯಾದಲ್ಲಿ ಕಂಪನವು 1,400 ಕ್ಕೂ ಹೆಚ್ಚು ಜನರ ಬಲಿ ಪಡೆದಿದ್ದು, ಮೂರು ದಿನಗಳ ನಂತರ ಸೋಮವಾರ ಅವರ ಭವಿಷ್ಯ ನಿಜವಾಗಿದೆ. ಅವರು ತಮ್ಮ ಸಂಶೋಧನಾ ಸಂಸ್ಥೆಯ ಪೋಸ್ಟ್ ಅನ್ನು ಮರುಟ್ವೀಟ್ ಮಾಡಿದ್ದು, ಅದು ಮೊದಲ ಭೂಕಂಪದ ನಂತರ ಮತ್ತೊಂದು ದೊಡ್ಡ ಕಂಪನವನ್ನು ಮುನ್ಸೂಚಿಸಿದ್ದು, ಅದೂ ನಿಜವಾಗಿದೆ.