ನವದೆಹಲಿ: ಕೋವಿಡ್ ಇಂಜೆಕ್ಷನ್ ಈಗ ನೀಡಲಾಗುತ್ತಿದ್ದು, ಏತನ್ಮಧ್ಯೆ ಇಂಜೆಕ್ಷನ್ ಬದಲು ಮೂಗಿಗೆ ಹಾಕುವ ಹನಿ ಲಸಿಕೆಯ ಕುರಿತ ಸಂಶೋಧನೆ ಪ್ರಗತಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ(ಜೂನ್ 07) ತಿಳಿಸಿದ್ದಾರೆ.
ಇದನ್ನೂ ಓದಿ:ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಬೆಲೆ 150 ರೂ. ನಿಗದಿಪಡಿಸಲಾಗಿದೆ: ಪ್ರಧಾನಿ ಮೋದಿ
ಕೋವಿಡ್ ಸೋಂಕು ತಡೆಯಲು ಮೂಗಿನ ಮೂಲಕ ಹಾಕಬಹುದಾದ (ಇಂಟ್ರಾನಾಸಲ್ ವ್ಯಾಕ್ಸಿನ್) ಲಸಿಕೆ ಸಂಶೋಧನೆ ಭಾರತದಲ್ಲಿ ನಡೆಯುತ್ತಿದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಹೇಳಿದರು. ಇದು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಉತ್ತೇಜನ ನೀಡುವ ಮೂಲಕ “ಗೇಮ್ ಚೇಂಜರ್” ಆಗಲಿದೆ ಎಂದರು.
ಭಾರತದಲ್ಲಿ ಶೀಘ್ರವೇ ಬಿಬಿವಿ154 ಮೂಗಿಗೆ ಹಾಕವ ಲಸಿಕೆಯನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿರುವುದಾಗಿ ಭಾರತ ಬಯೋಟೆಕ್ ತಿಳಿಸಿದ್ದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಹೇಳಿಕೆಯನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:80 ಕೋಟಿ ಜನರಿಗೆ ದೀಪಾವಳಿಯವರೆಗೆ ಉಚಿತ ಪಡಿತರ : ದೇಶಕ್ಕೆ ಮೋದಿ ಅಭಯ
ಭಾರತ್ ಬಯೋಟೆಕ್ ಫೆಬ್ರುವರಿ, ಮಾರ್ಚ್ ನಲ್ಲಿ ಇಂಟ್ರಾನೇಸಲ್ ಕೋವಿಡ್ ಲಸಿಕೆಯ ಮೊದಲ ಹಂತದ ಪ್ರಯೋಗ ನಡೆಸುವುದಾಗಿ ತಿಳಿಸಿತ್ತು. ಇದು ಮೂಗಿನ ಎರಡು ಹೊಳ್ಳೆಗಳಲ್ಲಿ ಒಂದೇ ಸಮಯದಲ್ಲಿ (ಸಿಂಗಲ್ ಡೋಸ್) ಎರಡು ಕೋವಿಡ್ ಲಸಿಕೆಯ ಹನಿಗಳನ್ನು ಹಾಕುವುದೇ ಈ ಇಂಟ್ರಾನೇಸಲ್ ಕೋವಿಡ್ ಲಸಿಕೆ ಎಂದು ಕರೆಯಲಾಗುತ್ತಿದೆ ಎಂದು ವರದಿ ವಿವರಿಸಿದೆ.