ಸುಳ್ಯ: ಆಯುರ್ವೇದ ಚಿಕಿತ್ಸಾ ಪದ್ಧತಿಯ ಮೌಲ್ಯ ತಿಳಿಯದೆ ನಿರ್ಲಕ್ಷ್ಯ ತಾಳಿದ್ದರಿಂದ ಅಲೋಪತಿ ಎದುರು ಆಯುರ್ವೇದ ತಲೆ ತಗ್ಗಿಸುವಂತಾಯಿತು. ಹಲವಾರು ಸಂಶೋಧನೆಗಳು ನಡೆದು ಈಗ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಿದೆ. ದೇಶದ ಭವಿಷ್ಯ, ಸಂಪತ್ತು, ಸಂಶೋಧನೆಯಲ್ಲಿ ಅಡಗಿದೆ ಎಂದು ಶ್ರೀ ಆದಿಚುಂಚನ ಗಿರಿ ಮಠದ ಜಗದ್ಗುರು ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಹೇಳಿದರು.
ಅವರು ಗುರುವಾರ ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಂಗ ಸಂಸ್ಥೆ ಕೆವಿಜಿ ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್ ಅನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪ್ರಕೃತಿಯನ್ನು ಅರ್ಥಮಾಡಿಕೊಂಡು ಬದುಕಿದರೆ ರೋಗರುಜಿನಗಳ ಕಾಟ ವಿಲ್ಲ. ದೀರ್ಘಾಯುವಾಗಿ ಬಾಳಬಹುದು. ಇದನ್ನು ಹಿಂದಿನ ಋಷಿ ಮುನಿಗಳು ಸಾಧಿಸಿ ತೋರಿಸಿದ್ದಾರೆ. ಇಂದು ಪ್ರಕೃತಿ ವಿಕೋಪದಿಂದ ರೋಗರುಜಿನ ಗಳ ಕಾಟ ಹೆಚ್ಚಾಗಿದೆ. ದೇಹದ ಆರೋಗ್ಯ ಕಾಪಾಡು ವುದರೊಂದಿಗೆ ಮನಸ್ಸಿನ ಸ್ವಾಸ್ಥÂವನ್ನು ಕಾಪಾಡುವಲ್ಲಿ ಕಾಳಜಿ ವಹಿಸಿದರೆ ಸಮಾಜದಲ್ಲಿ ಸ್ವಾಸ್ಥ é ನೆಲೆಸುತ್ತದೆ ಎಂದು ಶ್ರೀಗಳವರು ತಿಳಿಸಿದರು.
ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತರಿದ್ದರು.
ಅಕಾಡೆಮಿ ಆಫ್ ಲಿಬರಲ್‌ಎಜುಕೇಶನ್‌ನ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಅವರು ಸಭಾಧ್ಯಕ್ಷತೆ ವಹಿಸಿ, ನೂತನ ಆಯುರ್ವೇದ ಫಾರ್ಮಸಿ ಅತ್ಯಾಧುನಿಕ ತಂತ್ರಜ್ಞಾನ ಸವಲತ್ತು ಗಳನ್ನು ಹೊಂದಿದೆ. ಸುಮಾರು 50ಕ್ಕೂ ಮಿಕ್ಕಿ ಔಷಧಿಗಳು ಹೊರ ಬರಲಿದೆ ಎಂದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಡಾ| ರೇಣುಕಾಪ್ರಸಾದ್ ಕೆ.ವಿ., ಖಜಾಂಚಿ ಶೋಭಾ ಚಿದಾನಂದ, ನಿರ್ದೇಶಕರಾದ ಡಾ| ಐಶ್ವರ್ಯಾ ಕೆ.ಸಿ. ಮತ್ತು ಅಕ್ಷಯ್ ಕೆ.ಸಿ., ಡಾ| ಗೌತಮ್, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ ಮಡಪ್ಪಾಡಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ಎನ್.ಎಸ್.ಶೆಟ್ಟರ್, ಆಡಳಿತಾಧಿ ಕಾರಿ ಡಾ| ಲೀಲಾಧರ್ ಡಿ.ವಿ. ಉಪಸ್ಥಿತರಿದ್ದರು.
ಫಾರ್ಮಸಿಯ ಕಾರ್ಯನಿರ್ವ ಹಣಾಧಿಕಾರಿ ಡಾ| ಪುರುಷೋತ್ತಮ ಕೆ.ಜಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ರೋಹಿಣಿ ಭಾರದ್ವಾಜ ಅವರು ಸ್ವಾಗತಿಸಿದರು. ಡಾ| ಹರ್ಷಿತಾ ಎಂ. ಮತ್ತು ಪದ್ಮನಯನಾ ನಿರೂಪಿಸಿದರು.