Advertisement

ಕಲ್ಲಿದ್ದಲು ಗಣಿಯಲ್ಲಿ ಭಾರೀ ದುರಂತ, 23 ಮಂದಿ ದಾರುಣ ಸಾವು, ಓರ್ವ ಪಾರು

03:56 PM Dec 06, 2020 | Adarsha |

ಚೀನಾ: ಚೀನಾದ ಕಲ್ಲಿದ್ದಲು ಗಣಿಯಲ್ಲಿ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾದ ಪರಿಣಾಮ 23 ಜನರು ಮೃತಪಟ್ಟಿದ್ದು, ಓರ್ವನನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

Advertisement

ಚೀನಾದ ಚಾಂಗ್ಕಂಗ್ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಯೋಂಗ್ಚುವಾನ್ ಜಿಲ್ಲೆಯ ಡಯೋಶುಯಿಡಾಂಗ್ ನಲ್ಲಿ ಶುಕ್ರವಾರ (ಡಿ.5) ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಕಲ್ಲಿದ್ದಲು ಗಣಿಯಲ್ಲಿ ಒಟ್ಟು 24 ಜನ ಕಾರ್ಮಿಕರು ಕಾರ್ಯನಿರ್ವಹಿಸುತಿದ್ದರು ಎಂದು ತಿಳಿದು ಬಂದಿದ್ದು, ಈ ವೇಳೆ ಅತೀಯಾದ ಇಂಗಾಲದ ಮೋನಾಕ್ಸೈಡ್  ಸೋರಿಕೆ ಪರಿಣಾಮದಿಂದ  ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಈ ಗಣಿಯನ್ನು ಕಳೆದ 2 ತಿಂಗಳ ಹಿಂದೆ ಮುಚ್ಚಲಾಗಿತ್ತು.  ಈ ಘಟನೆಗೆ ನಿಖರ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ ಎಂದು ಚೀನಾದ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಇದನ್ನೂ ಓದಿ: ಮತ್ತೆ ಕರ್ನಾಟಕ ಬಂದ್! ಮತ್ತೊಂದು ಬಂದ್ ಗೆ ಕರೆಕೊಟ್ಟ ರಾಜ್ಯ ರೈತ ಸಂಘ

Advertisement

ಡಯೋಶುಯಿಡಾಂಗ್ ಕಲ್ಲಿದ್ದಲು ಗಣಿ 1975ರಲ್ಲಿ ಆರಂಭಗೊಂಡು 1998 ರಲ್ಲಿ ಖಾಸಗಿ ಒಡೆತನದ ಪಾಲಾಗಿತ್ತು. ಇಲ್ಲಿ ವಾರ್ಷಿಕ ಬರೊಬ್ಬರಿ 120,000 ಟನ್ ಗಳಷ್ಟು ಕಲ್ಲಿದ್ದಲನ್ನು ಉತ್ಪಾದಿಸಲಾಗುತ್ತಿತ್ತು ಎಂದು  ಸ್ಥಳೀಯ ತುರ್ತು ಸ್ಥಿತಿ ನಿರ್ವಾಹಣಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವದಲ್ಲಿಯೇ  ಅತೀ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ದೇಶ ಎಂಬ ಕೀರ್ತಿಗೆ ಪಾತ್ರವಾಗಿರುವ ಚೀನಾದಲ್ಲಿ 2020ರಲ್ಲಿ 100 ಕ್ಕೂ ಹೆಚ್ಚು ಕಲ್ಲಿದ್ದಲು ಅಪಘಾತಗಳು ಸಂಭವಿಸಿದೆ. ಕಳೆದ ನವೆಂಬರ್ ನಲ್ಲಿ ಈ ಕುರಿತಾಗಿ ಚೀನಾ ಸರ್ಕಾರ ಪರಿಶೀಲನೆ ನಡೆಸಿ,  ಮೂಲ ಸೌಕರ್ಯ, ಅಪಘಾತ ನಿರ್ವಾಹಣೆ ಇತ್ಯಾದಿಗಳ ಕುರಿತಾಗಿ ನಿಗಾ ವಹಿಸುವಂತೆ ತಿಳಿಸಿತ್ತು ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next