Advertisement

Goa ಕಡಲ ತೀರದಲ್ಲಿ ಸಾವಿರಾರು ಕಡಲಾಮೆ ಮೊಟ್ಟೆ ರಕ್ಷಣೆ

03:26 PM Feb 24, 2024 | Team Udayavani |

ಪಣಜಿ: ಆಮೆಗಳಿಗೆ ಮೀಸಲಿರುವ ಸಮುದ್ರ ತೀರದಲ್ಲಿ ಈವರೆಗೆ 88 ಸಮುದ್ರ ಆಮೆಗಳು ಆಗಮಿಸಿ ಕಂಕೋಣನಲ್ಲಿರುವ ಎರಡು ಸಮುದ್ರ ಆಮೆ ಮೀಸಲು ಬೀಚ್‍ಗಳಲ್ಲಿ ಮೊಟ್ಟೆ ಇಟ್ಟಿವೆ.

Advertisement

ಇವುಗಳಲ್ಲಿ ಗಾಲ್ಜಿಬಾಗ್ ಬೀಚ್‍ನಲ್ಲಿ 21 ಗೂಡುಗಳಲ್ಲಿ 2,042 ಮೊಟ್ಟೆಗಳಿದ್ದರೆ, ಆಗೋಂಡ ಸಮುದ್ರ ಆಮೆ ಯೋಜನೆಯಲ್ಲಿ 67 ಗೂಡುಗಳಲ್ಲಿ 7,172 ಮೊಟ್ಟೆಗಳಿವೆ. ಆದ್ದರಿಂದ ಎರಡೂ ಕರಾವಳಿಯ ಸಮುದ್ರ ಆಮೆ ಸಂರಕ್ಷಣಾ ಕೇಂದ್ರದಲ್ಲಿ 88 ಗೂಡುಗಳಲ್ಲಿ 9,213 ಮೊಟ್ಟೆಗಳಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.

ಕಳೆದ ಸಾಲಿನ ಹಂಗಾಮಿನಲ್ಲಿ 89 ಕಡಲಾಮೆಗಳು ಬಂದಿದ್ದು, ಕಡಲಾಮೆಗಳ ಆಗಮನಕ್ಕೆ ಇನ್ನೂ ಎರಡು ತಿಂಗಳ ಕಾಲಾವಕಾಶವಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಕಡಲಾಮೆಗಳು ಬರುವ ನಿರೀಕ್ಷೆಯನ್ನು ಸಾಗರ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಬುಧವಾರ 9 ಆಲಿವ್ ರಿಡ್ಲಿ ಸಮುದ್ರ ಆಮೆಗಳು ವಿವಿಧ ಬೀಚ್‍ಗಳಿಗೆ ಆಗಮಿಸಿ 1,044 ಮೊಟ್ಟೆಗಳನ್ನು ಇಟ್ಟವು. ಅವುಗಳಲ್ಲಿ ಮೂರು ಆಮೆಗಳು ಗಲ್ಜಿಬಾಗ್ ಬೀಚ್‍ನಲ್ಲಿ 347 ಮೊಟ್ಟೆಗಳನ್ನು ಮತ್ತು 5 ಆಮೆಗಳು ಆಗೋಂಡ ಬೀಚ್‍ಗೆ ಆಗಮಿಸಿ 581 ಮೊಟ್ಟೆಗಳನ್ನು ಇಟ್ಟಿವೆ. ಇದಲ್ಲದೆ, ಪಾಟ್ನೆ ಕೊಲಂಬೊ ಕರಾವಳಿಯಲ್ಲಿ ಸಮುದ್ರ ಆಮೆ 116 ಮೊಟ್ಟೆಗಳನ್ನು ಇಟ್ಟಿವೆ.

ಪ್ರಸ್ತುತ ಗಲ್ಜಿಬಾಗ್ ಸಮುದ್ರ ಆಮೆ ಸಂರಕ್ಷಣಾ ಯೋಜನೆಯಲ್ಲಿ 20 ಕಡಲಾಮೆ ಮೊಟ್ಟೆ ಗೂಡುಗಳಿದ್ದು, ಒಟ್ಟು 1,962 ಮೊಟ್ಟೆಗಳಿವೆ ಎಂದು ದಕ್ಷಿಣ ಗೋವಾ ಪ್ರಾದೇಶಿಕ ಅಧಿಕಾರಿ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.

Advertisement

ಆಗೊಂದ ಯೋಜನೆಯಲ್ಲಿ ಗೂಡಿನಿಂದ ಹೊರಬಂದ ಮರಿಗಳು!

ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಗೂಡಿನ ಸಂಖ್ಯೆ 2 ರಿಂದ ಮರಿಗಳು ಹೊರಬಂದವು. ಆ ಗೂಡಿನಲ್ಲಿ ಒಟ್ಟು 103 ಮೊಟ್ಟೆಗಳಿದ್ದರೂ 75 ಮರಿಗಳು ಜೀವಂತವಾಗಿ ಹೊರಬಂದವು. ತಕ್ಷಣ ಅವುಗಳನ್ನು ಸಮುದ್ರಕ್ಕೆ ಬಿಡಲಾಯಿತು ಎಂದು ಪ್ರಾದೇಶಿಕ ಅರಣ್ಯಾಧಿಕಾರಿ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.

ಮರಿಗಳು ಗೂಡಿನಿಂದ ಹೊರಬರಲು 45 ರಿಂದ 55 ದಿನಗಳು ಬೇಕಾಗುತ್ತದೆ. ಆಗೊಂದ್ ಮತ್ತು ಗಲ್ಜಿಬಾಗ್ ಬೀಚ್‍ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next