Advertisement

ಜನಪ್ರತಿನಿಧಿ-ಅಧಿಕಾರಿ ಸಮನ್ವಯ ಅವಶ್ಯ

12:40 PM Jan 05, 2017 | Team Udayavani |

ಕಲಬುರಗಿ: ಜನರಿಗೆ ದೊರೆಯಬೇಕಾಗಿರುವ ಸೌಲಭ್ಯ ಒದಗಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮಧ್ಯೆ ಸಮನ್ವಯ ಇರಬೇಕಾಗಿರುವುದು ಅತೀ ಮುಖ್ಯವಾಗಿದೆ ಎಂದು ನಾಲ್ಕನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜೆ. ಚಿನ್ನಸ್ವಾಮಿ ಹೇಳಿದರು. 

Advertisement

ಬುಧವಾರ ಇಲ್ಲಿನ ಇಂದಿರಾ ಸ್ಮಾರಕ ಭವನದಲ್ಲಿ ಮಹಾನಗರ ಪಾಲಿಕೆ ಮೇಯರ್‌, ಉಪ ಮೇಯರ್‌, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರು ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ರಸ್ತೆ, ಕುಡಿಯುವ ನೀರು, ವಿದ್ಯುದ್ದೀಪ ಮತ್ತು ತ್ಯಾಜ್ಯಗಳ ನಿರ್ವಹಣೆ ಮುಂತಾದ ಮೂಲ ಸೌಲಭ್ಯಗಳನ್ನು ಜನರಿಗೆ ಕಲ್ಪಿಸಲು ಸಮನ್ವಯದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಆಯೋಗ ನೀಡಿದ ಪ್ರಶ್ನಾವಳಿಗೆ ವಿಳಂಬ ಮಾಡದೆ ಅಧಿಕಾರಿಗಳು ಉತ್ತರಗಳನ್ನು ಆನ್‌  ಲೈನ್‌ನಲ್ಲಿ ನೀಡಬೇಕು ಎಂದರು. 

ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಡೆಲಿಗೇಷನ್‌ ಆಫ್‌ ಪಾವರ್ ಹಾಗೂ ಇದಕ್ಕೆ ಸರ್ಕಾರದಿಂದ ಪೂರಕ ಆದೇಶಗಳು ಬಂದಿರುವುದು ಅನುಕೂಲವಾಗಿದೆ. ಆಯೋಗವು ಈ ಸಂಸ್ಥೆಗಳ ಹಣಕಾಸು ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 25 ಜಿಲ್ಲೆಗಳಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದೆ.

ಈಗ ಕಲಬುರಗಿ 26ನೇ ಜಿಲ್ಲೆಯಾಗಿದೆ. ಮೂಲಭೂತ ಸೌಕರ್ಯದೊಂದಿಗೆ ಅಂತರ್ಜಲಮಟ್ಟ ಹೆಚ್ಚಿಸುವ ಹಾಗೂ ಪರ್ಫಾರ್‌ವೆುನ್ಸ್‌ ಗ್ರಾoಟ್‌ ರೀತಿ ನೀತಿಯ ಪ್ರಸ್ತಾವನೆಗಳನ್ನು ನೀಡಲು ಕೋರಿದರು. 

Advertisement

ರಾಜ್ಯದ ಮೂರನೇ ಹಣಕಾಸು ಆಯೋಗವು ರಾಜ್ಯದ ತೆರಿಗೆ, ಶುಲ್ಕ ಮತ್ತು ಜಕಾತಿ ಮುಂತಾದ ಆದಾಯ ಮೂಲಗಳ ಮೂಲಕ ಸಂಗ್ರಹಿಸುವ ಹಣದಲ್ಲಿ ಸಂಬಳ ಮತ್ತು ಸಾರಿಗೆ ತೆಗೆದು ಉಳಿದ ಹಣದಲ್ಲಿ ಶೇ. 10ರಷ್ಟು ಮಹಾನಗರ ಪಾಲಿಕೆ ಮತ್ತಿತರ ನಗರ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಶೇ.32ರಷ್ಟು ಹಣವನ್ನು ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಒದಗಿಸಲು ಶಿಫಾರಸು ಮಾಡಿತ್ತು.

ಈಗ 4ನೇ ಹಣಕಾಸು ಆಯೋಗವು ಹಣಕಾಸು ವ್ಯವಸ್ಥೆ ಮತ್ತು ಎಲ್ಲ ಜಿಲ್ಲೆಗಳ ಪರಿಶೀಲನೆ ಮಾಡಿ ಅಂತಿಮ ನಿರ್ಧಾರ ಮಾಡಿ ಶಿಫಾರಸು ಮಾಡಬೇಕಾಗಿದೆ ಎಂದರು. ಆಯೋಗದ ಸದಸ್ಯ ಎಚ್‌.ಡಿ.ಅಮರನಾಥ ಮಾತನಾಡಿ, ಹೈದ್ರಾಬಾದ ಕರ್ನಾಟಕ ಭಾಗದ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ 371(ಜೆ) ನೇ ಕಲಂ ಜಾರಿಯಾಗಿರುವ ಪ್ರಯುಕ್ತ ಹೆಚ್ಚು ಹಣ ಲಭ್ಯವಾಗಲಿದೆ.

ಇದಕ್ಕಾಗಿ ದೂರದೃಷ್ಟಿತ್ವದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕಲ್ಲದೆ ಸಂವಿಧಾನದ 12ನೇ ಅನುಸೂಚಿ ಅನ್ವಯ ಕಲಬುರಗಿ ನಗರದ ಸೌಂದಯೀìಕರಣಕ್ಕೆ ಆದ್ಯತೆ ನೀಡಬೇಕೆಂದರು. ಆಯೋಗದ ಇನ್ನೊಬ್ಬ ಸದಸ್ಯ ಶಶಿಧರ ಮಾತನಾಡಿದರು.  

Advertisement

Udayavani is now on Telegram. Click here to join our channel and stay updated with the latest news.

Next