ಬನ್ನೂರು: ಗ್ರಾಮದ ಅಭಿವೃದ್ಧಿಯಿಂದ ಮಾತ್ರ ಪಟ್ಟಣದ ಅಭಿವೃದ್ಧಿ ಸಾಧ್ಯವಿದ್ದು ಗ್ರಾಮದ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ವಿವಿಧ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ಬನ್ನೂರಿನ ಸಮೀಪದ ಬೋಳೆಗೌಡನಹುಂಡಿ ಗ್ರಾಮದಲ್ಲಿ ಭಾನುವಾರ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಹಳ್ಳಿಯ ಉದ್ಧಾರಕ್ಕಾಗಿ ಅಗತ್ಯ ಸೌಕರ್ಯ ನೀಡುವ ಸಲುವಾಗಿ ರಸ್ತೆ, ಚರಂಡಿ, ಕುಡಿಯುವ ನೀರು, ಸಮುದಾಯ ಭವನ, ವ್ಯವಸಾಯಕ್ಕೆ ನೀರು ನೀಡುವ ಮೂಲಕ ಗ್ರಾಮೀಣ ಅಭ್ಯುದಯಕ್ಕೆ ನಿರಂತರವಾಗಿ ಶ್ರಮಿಸಲಾಗಿದೆ ಎಂದು ತಿಳಿಸಿದರು.
ಗ್ರಾಮದ ವಿವಿಧ ರಸ್ತೆ ಕಾಮಗಾರಿಗಳಿಗಾಗಿ 3.70 ಕೋಟಿ ರೂ. ಅನುದಾನ ನೀಡಲಾಗಿದ್ದು ಎಲ್ಲಾ ರಸ್ತೆಗಳನ್ನು ಉತ್ತಮ ರಸ್ತೆಯಾಗಿ ಮಾಡಲಾಗುತ್ತಿದೆ. ಶಿಥಿಲವಾಗಿರುವ ಅಂಗನವಾಡಿ ಕಟ್ಟಡಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಶೀಘ್ರದಲ್ಲೇ ನೂತನ ಕಟ್ಟಡ ನಿರ್ಮಾಣ ಮಾಡಲು ಅನುದಾನ ನೀಡಲಾಗುವುದು ಎಂದರು.
ಸ್ಥಳೀಯರು ಸಮುದಾಯ ಭವನವನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಂಡು ನೂತನವಾಗಿ ಸಮುದಾಯ ಭವನ ನಿರ್ಮಿಸಿಕೊಡಲಾಗಿದೆ ಎಂದು ಹೇಳಿದರು. ಡಾ.ಅಂಬೇಡ್ಕರ್ ವಸತಿ ಯೋಜನಾ ಅಧ್ಯಕ್ಷ ಸುನಿಲ್‌ಬೋಸ್, ಜಿಪಂ ಸದಸ್ಯ ಮಂಜುನಾಥ್, ತಾಪಂ ಅಧ್ಯಕ್ಷ ಚಾಮೇಗೌಡ, ತಾಪಂ ಸದಸ್ಯ ಚಲುವರಾಜು, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೆಗೌಡ,
ಎಪಿಎಂಸಿ ನಿರ್ದೇಶಕ ಚಿಕ್ಕಣ್ಣ, ಕಾರ್ಯಪಾಲಕ ಅಭಿಯಂತರರಾದ ಸಿದ್ದರಾಜು, ನಂಜುಂಡಯ್ಯ, ವಿನಯ್, ಮಂಜುನಾಥ್, ವಿನೋದ್‌ಕುಮಾರ್, ಮಹದೇವನಾಯಕ್, ವಿನಯ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಸಚಿವರ ಆಪ್ತ ಸಹಾಯಕ ಬಸವರಾಜು, ವೃತ್ತ ನಿರೀಕ್ಷಕ ಮನೋಜ್‌ಕುಮಾರ್, ಪಿಎಸ್‌ಐ ಲತೇಶ್‌ಕುಮಾರ್, ಶಿವಕುಮಾರ್, ನಾಗರಾಜು, ನಂದಿನಿ ಮತ್ತಿತರರಿದ್ದರು.