Advertisement

ಪಕ್ಷ ನಿಷ್ಠರಿಗೆ ಟಿಕೆಟ್‌ ನೀಡಲು ಆಗ್ರಹ

06:12 PM May 06, 2022 | Team Udayavani |

ಕೋಲಾರ: ಜೆಡಿಎಸ್‌,ಕಾಂಗ್ರೆಸ್‌ಗೆ ಬೇಡವಾದ ಮಾಜಿ ಶಾಸಕ ಮಂಜುನಾಥಗೌಡ ಅಥವಾ ಹೊರಗಿನವರಿಗೆ ಬಿಜೆಪಿ ಟಿಕೆಟ್‌ ನೀಡಿದಲ್ಲಿ ನಮ್ಮ ಪ್ರತಿರೋಧ ಖಚಿತ. ಪಕ್ಷದ ನಿಷ್ಠಾವಂತರಿಗೆ ಟಿಕೆಟ್‌ ನೀಡಬೇಕು ಎಂದು ಮಾಲೂರು ತಾಲೂಕು ಬಿಜೆಪಿ ಅಧ್ಯಕ್ಷ ಪುರ ನಾರಾಯಣಸ್ವಾಮಿ ಆಗ್ರಹಿಸಿದರು.

Advertisement

ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಕರೆದಿದ್ದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮಾಲೂರಿನಲ್ಲಿ ಬಿಜೆಪಿ ಸದೃಢವಾಗಿ ಬೆಳೆದಿದೆ. ಮುಂದಿನ ದಿನಗಳಲ್ಲಿ ಯಾವುದೇ ಚುನಾವಣೆ ಬಂದರೂ ಬಿಜೆಪಿಗೆ ಗೆಲ್ಲುವ ತಾಕತ್ತು ಇದೆ. ಸದ್ಯ ಮಾಲೂರಿನ ಬಿಜೆಪಿಯಲ್ಲಿ ಹಲವರು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ ಎಂದರು.

ಸಂಸದ ಎಸ್‌.ಮುನಿಸ್ವಾಮಿ ಅವರು ಜೆಡಿಎಸ್‌ ಪಕ್ಷದ ಮಾಜಿ ಶಾಸಕ ಮಂಜುನಾಥ್‌ಗೌಡರನ್ನು ಪಕ್ಷಕ್ಕೆ ಸೇರಿಸಿ ಕೊಂಡು ಅವರಿಗೆ ಟಿಕೆಟ್‌ ಕೊಡಿಸಿ ಋಣ ತೀರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಯಾವ ನ್ಯಾಯ ಸಂಸದರ ಮಾತುಗಳಿಗೆ ನಮ್ಮ ವಿರೋಧವಿದೆ ಇದರ ಬಗ್ಗೆ ಕೋರ್‌ ಕಮಿಟಿಯಲ್ಲೂ ವರಿಷ್ಠರ ಗಮನಕ್ಕೆ ತಂದಿದ್ದೇವೆ ಎಂದರು.

ಬಿಜೆಪಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ರಾಜ್ಯ ಸಮಿತಿ ಸದಸ್ಯ ಆರ್‌. ಪ್ರಭಾಕರ್‌ ಮಾತನಾಡಿ, ಸಂಸದ ಮುನಿಸ್ವಾಮಿ ಹಾಗೂ ಸಚಿವ ಮುನಿರತ್ನ ಅವರು ಪಕ್ಷ ಕಟ್ಟಲು ದುಡಿದ ನಿಷ್ಠಾವಂತ ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿ ಜೆ.ಡಿ.ಎಸ್‌ನ ಮಂಜುನಾಥಗೌಡರಿಗೆ ಬಿಜೆಪಿ ಟಿಕೆಟ್‌ ನೀಡಿದಲ್ಲಿ ನಿಷ್ಠಾವಂತರ ವಿರೋಧ ಖಚಿತ ಎಂದರು.

ಸಂಸದರು ಹಾಗೂ ಉಸ್ತುವಾರಿ ಸಚಿವರು ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಮೂಲ ಬಿಜೆಪಿ ಮುಖಂಡರ, ಕಾರ್ಯಕರ್ತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ದೂರಿದರಲ್ಲದೆ, ಇತ್ತೀಚೆಗೆ ಮಾಲೂರು ತಾಲೂಕಿನ ಟೇಕಲ್‌ನಲ್ಲಿ ನಡೆದ ಕಲ್ಲುಕುಟಿಕರ ಸಮಸ್ಯೆಗಳ ಕುರಿತು ಕರೆದಿದ್ದ ಸಭೆ ಸರ್ಕಾರಿ ಕಾರ್ಯಕ್ರಮ ವಾಗಿದ್ದರೂ ಮಾಜಿ ಶಾಸಕ ಮಂಜುನಾಥ್‌ ಗೌಡರನ್ನು ವೇದಿಕೆಗೆ ಆಹ್ವಾನಿಸಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ.

Advertisement

ಜತೆಗೆ ಮಾಜಿ ಶಾಸಕರ ಕರೆ ಮೇರೆಗೆ ಕಾರ್ಯಕ್ರಮಕ್ಕೆ ಆಗಮಿಸಿರುವುದಾಗಿ ಸಚಿವರು ಹೇಳಿಕೆ ನೀಡಿರುವ ಬಗ್ಗೆ ಹಾಗೂ ಸಚಿವರ ಮತ್ತು ಸಂಸದರ ನಡೆ ವಿರುದ್ಧ ಹೆ„ಕಮಾಂಡ್‌ ಗೆ ಸ್ಥಳೀಯ ಮುಖಂಡರು ದೂರು ನೀಡಿದ್ದೇವೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುನಾಥರೆಡ್ಡಿ, ಮುಖಂಡರಾದ ಸುಬ್ರಹ್ಮಣ್ಯರೆಡ್ಡಿ, ನಿಕಟ ಪೂರ್ವ ತಾಲೂಕು ಅಧ್ಯಕ್ಷ ವೆಂಕಟೇಶ್‌, ದೀಕ್ಷಾ ಸಮಿತಿ ಸದಸ್ಯ ನಾರಾಯಣ ಸ್ವಾಮಿ, ಮುಖಂಡರಾದ ರಾಜಾರಾಂ, ವೆಂಕಟೇಶ ಗೌಡ ಉಪಸ್ಥಿತರಿದ್ದರು.

ಸಂಸದರಿಗೆ ತಾಕೀತು
ಹೊರಗಿನ ವ್ಯಕ್ತಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಕೈಬಿಡಬೇಕು. ಸ್ಥಳೀಯ ಬಿಜೆಪಿ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಾತನಾಡುವುದು ಸರಿಯಲ್ಲ. ನೀವು ಪಕ್ಷದ ಕಾರ್ಯಕರ್ತರಿಗೆ ದ್ರೋಹ ಮಾಡುವ ಕೆಲಸ ಮಾಡಬೇಡಿ ಎಂದು ಮಾಲೂರು ತಾಲೂಕು ಬಿಜೆಪಿ ಅಧ್ಯಕ್ಷ ಪುರ ನಾರಾಯಣಸ್ವಾಮಿ ಸಂಸದರ ವಿರುದ್ಧ ಕಿಡಿಕಾರಿದರು. ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿದಿರುವ ನಾನೂ ಒಳಗೊಂಡಂತೆ ಹೂಡಿ ವಿಜಯಕುಮಾರ್‌, ಪ್ರಭಾಕರ್‌ ಮುಂತಾದವರು ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದು, ನಮ್ಮನ್ನು ಹೊರತುಪಡಿಸಿ ಬೇರೆಯವರಿಗೆ ಪಕ್ಷದ ವರಿಷ್ಠರು ಅವಕಾಶ ಮಾಡಿ ಕೊಡಬಾರದು ಎಂದು ಆಗ್ರಹಿಸಿದರು.

ಇದೇ ತಿಂಗಳ 13 ಪ್ರಕೋಷ್ಠಗಳ ಸಮಾವೇಶ
ಮಾಲೂರಿನಲ್ಲಿ ಮೇ.13 ರಂದು ಪಕ್ಷದ ಎಲ್ಲಾ ಪ್ರಕೋಷ್ಠಗಳ ಸಮಾವೇಶ ನಡೆಸುತ್ತಿದ್ದು, ಸುಮಾರು 25-30 ಸಾವಿರ ಜನ ಫಲಾನುಭವಿಗಳ ಸಮಾವೇಶ ನಡೆಸಲಾಗುವುದು. ಸಮಾವೇಶದಲ್ಲಿ ರಾಜ್ಯದ ಮಖಂಡರುಗಳಾದ ಸಿ.ಟಿ.ರವಿ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್‌.ಮುನಿಸ್ವಾಮಿ ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸದಸ್ಯ ಪ್ರಭಾಕರ್‌ ಮಾಹಿತಿ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next