Advertisement

ಪಂಪ್‌ಸೆಟ್‌ಗಳಿಗೆ ತ್ರಿಫೇಸ್‌ ವಿದ್ಯುತ್‌ ಪೂರೈಕೆಗೆ ಮನವಿ

06:14 PM Jan 23, 2022 | Team Udayavani |

ರಾಯಚೂರು: ರೈತರ ಪಂಪ್‌ಸೆಟ್‌ಗಳಿಗೆ 12 ಗಂಟೆ ತ್ರಿಪೇಸ್‌ ವಿದ್ಯುತ್‌ ಪೂರೈಸುವ ಮೂಲಕ ಬೆಳೆಗಳ ರಕ್ಷಣೆಗೆ ಮುಂದಾಗುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ನಗರದ ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಗೆ ಮನವಿ ಸಲ್ಲಿಸಿದರು.

Advertisement

ತಾಲೂಕಿನ ವಡವಾಟಿ ಮತ್ತು ಚಂದ್ರಬಂಡಾ ಸಬ್‌ ಸ್ಟೇಶನ್‌ ವ್ಯಾಪ್ತಿಯಲ್ಲಿ ಸರಿಯಾಗಿ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ. 12 ಗಂಟೆ ವಿದ್ಯುತ್‌ ಪೂರೈಸಬೇಕಿದ್ದು ಕೇವಲ ಎಂಟು ಗಂಟೆ ಮಾತ್ರ ಪೂರೈಸಲಾಗುತ್ತಿದೆ. ಚಂದ್ರಬಂಡಾ ಹಾಗೂ ವಡವಾಟಿ ಸಬ್‌ ಸ್ಟೇಶನ್‌ ವ್ಯಾಪ್ತಿಯಲ್ಲಿನ ವಿದ್ಯುತ್‌ ಲೈನ್‌ ಗಳು ಜೋತು ಬಿದ್ದಿದ್ದು, ಜನ, ಜಾನುವಾರು ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಚಂದ್ರಬಂಡಾ ಗ್ರಾಮದ ಕೆರೆಯ ಮೇಲೆ ವಿದ್ಯುತ್‌ ಕಂಬಗಳನ್ನು ಅಳವಡಿಸಿದ್ದು, ಗಯಾ ವೈರನ್ನು ದಾರಿ ಮಧ್ಯೆ ಹಾಕಲಾಗಿದೆ. ಇದರಿಂದ ರೈತರಿಗೆ ಓಡಾಡಲು ಸಮಸ್ಯೆಯಾಗುತ್ತಿದೆ. ಕೂಡಲೇ ಬೇರೆಡೆ ಸ್ಥಳಾಂತರಿಸಬೇಕು. ಬಾಪೂರು ಮತ್ತು ಬಾಯಿದೊಡ್ಡಿ ಮಧ್ಯೆ ಮಾರೆಮ್ಮ ದೇವಸ್ಥಾನದ ಹತ್ತಿರದ 63 ಕೆ.ವಿ. ಟಿ.ಸಿ ಕಂಬಗಳು ಬೀಳುವ ಹಂತದಲ್ಲಿದ್ದು, ಇವುಗಳನ್ನು ಕೂಡಲೇ ಬದಲಾಯಿಸಬೇಕು. ಜಿಲ್ಲೆಯ ಗ್ರಾಮಗಳಲ್ಲಿ ಹಲವಾರು ಹಳೆಯ ಕಂಬಗಳು ಬೀಳುವ ಹಂತದಲ್ಲಿದ್ದು ಮಳೆಗಾಲದ ಮುಂಚೆ ಹೊಸ ಕಂಬಗಳನ್ನು ಅಳವಡಿಸಬೇಕು. ರೈತರು ಅಳವಡಿಸಿಕೊಂಡ ಮೀಟರ್‌ಗಳಿಗೆ ಆರ್‌ಆರ್‌ ನಂಬರ್‌ಗಳನ್ನು ನೀಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಎನ್‌.ಲಕ್ಷ್ಮಣಗೌಡ ಕಡಗಂದೊಡ್ಡಿ, ತಾಲೂಕು ಅಧ್ಯಕ್ಷ ಜಿ.ರಮೇಶ, ಈರೇಶ ಕಡಗಂದೊಡ್ಡಿ, ಚಾಂದ್‌ ಸಾಬ್‌ ಕಡಗಂದೊಡ್ಡಿ, ಹುಲಿಗಪ್ಪ, ತಿಮ್ಮಪ್ಪ ಬಾಪೂರು ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next