Advertisement

ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಆಗ್ರಹ

04:55 PM May 29, 2022 | Team Udayavani |

ಕುರುಗೋಡು: ಕೋಳೂರು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರ ಮಾಡಬೇಕು ಎಂದು ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ನಾಗರಿಕರು ಒತ್ತಾಯಿಸಿದರು. ಗ್ರಾಮದಲ್ಲಿ 50ಕ್ಕೂ ಅಧಿಕ ಜನರು ವಾಸವಿರುವ ಸ್ಥಳಕ್ಕೆ ದಶಕಗಳು ಕಳೆದರೂ ಪಟ್ಟಾ ದೊರೆತಿಲ್ಲ. ಕೂಡಲೇ ಪಟ್ಟಾನೀಡಿ ಆಶ್ರಯ ಮನೆ ಕಟ್ಟಿಸಿಕೊಳ್ಳುವ ಅವಕಾಶ ನೀಡಬೇಕು ಎಂದು ಜನರು ಒತ್ತಾಯಿಸಿದರು.

Advertisement

ಗ್ರಾಮದಲ್ಲಿ 50ಕ್ಕೂ ಅಧಿಕ ವಿದ್ಯುತ್‌ ಕಂಬಗಳು ದುರಸ್ತಿಯಲ್ಲಿವೆ. ಕೂಡಲೇ ಕಂಬ ಬದಲಿಸಲು ಕ್ರಮಕೈಗೊಳ್ಳಿ ಎಂದು ತಹಶೀಲ್ದಾರ್‌ ಕೆ.ರಾಘವೇಂದ್ರ ರಾವ್‌ ಜೆಸ್ಕಾಂ ಜೆಇ ಚಂದ್ರಶೇಖರ್‌ಗೆ ಸೂಚಿಸಿದರು. ಗ್ರಾಮದಲ್ಲಿ ಅಕ್ರಮ ಮದ್ಯಮಾರಾಟ ಮಾಡುತ್ತಿದ್ದಾರೆ. ಯುವಕರು ಕುಡಿತದ ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಿಯಂತ್ರಿಸಿ ಎಂದು ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಅಳಲು ತೋಡಿಕೊಂಡರು.

ಅಕ್ರಮ ಮದ್ಯ ಮಾರಾಟ ಕುರಿತು ಅಬಕಾರಿ ಇಲಾಖೆ ಅಧಿಕಾರಿ ತರಾಟೆಗೆ ತೆಗೆದುಕೊಂಡ ತಹಶೀಲ್ದಾರ್‌ ಎಲ್ಲ ಅಂಗಡಿಗಳನ್ನು ತಪಾಸಣೆ ಮಾಡಿ ಮಾರಾಟ ಮಾಡುವುದು ಕಂಡುಬಂದರೆ ಅವರ ವಿರುದ್ಧ ದೂರು ದಾಖಲಿಸಿ ಎಂದು ಸೂಚಿಸಿದರು. ತಾಪಂ ಇಒ ನಿರ್ಮಲಾ ಮಾತನಾಡಿ, ವೈಯಕ್ತಿಕ ಶೌಚಾಲಯ ಮತ್ತು ಗುಂಪು ಶೌಚಾಲಯ ನಿರ್ಮಿಸಿ ಕೊಡಲು ಯೋಜನೆ ಇದೆ. ಸರ್ಕಾರ ಅರ್ಧ, ಫಲಾನುಭವಿ ಅರ್ಧ ಹಣ ನೀಡಬೇಕಾಗುತ್ತದೆ. ಆಮೀನುಗಳಿಗೆ ಹೋಗುವ ರಸ್ತೆ ನರೇಗಾ ಯೋಜನೆಯಲ್ಲಿ ನಿರ್ಮಿಸಲು ಅವಕಾಶವಿದೆ. ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು. ಅಂಗನವಾಡಿ ಮತ್ತು ಶಾಲೆ ಕಟ್ಟಡ ದುರಸ್ಥಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.

ಗ್ರೇಡ್‌-2 ತಹಶೀಲ್ದಾರ್‌ ಮಲ್ಲೇಶಪ್ಪ, ತಾಪಂ ಇಒ ವಿ.ನಿರ್ಮಲಾ, ಉಪ ತಹಶೀಲ್ದಾರ್‌ ಯಾಕೂಬ್‌ ಅಲಿ ಮತ್ತು ವಿಜಯಕುಮಾರ್‌, ಡಾ| ಶ್ರೀಕರ ಗೌಡ, ಅಬಕಾರಿ ಇಲಾಖೆ ರುದ್ರಗೌಡ, ಅಧ್ಯಕ್ಷೆ ಕೆ. ಹುಲಿಗೆಮ್ಮ, ಮಾರುತಿ, ಅಂಗನವಾಡಿ ಮೇಲ್ವಿಚಾರಕಿ ಮೌಲುಂಬಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next