Advertisement

ಮಳೆಗಾಲದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಆಗ್ರಹ

10:59 PM May 13, 2020 | Sriram |

ಬೆಳ್ಮಣ್‌ : ಇಲ್ಲಿನ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ನಂದಳಿಕೆ, ಬೆಳ್ಮಣ್‌, ಇನ್ನಾ, ಬೋಳ ಹಾಗೂ ಮುಂಡ್ಕೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಮಳೆಗಾಲದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸಿದ್ದಾರೆ.

Advertisement

ಪ್ರತೀ ವರ್ಷ ಎಪ್ರಿಲ್‌ ಮೇ ತಿಂಗಳಲ್ಲಿ ಮಳೆಗಾಲಕ್ಕಾಗಿ ತಯಾರಾಗುತ್ತಿದ್ದ ಗ್ರಾಮ ಪಂಚಾಯತ್‌ಗಳಲ್ಲಿ, ಈ ಬಾರಿ ಕೋವಿಡ್- 19 ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಕಾರ್ಮಿಕರ ಕೊರತೆಯಿಂದ ಮಳೆಗಾಲಕ್ಕೆ ಬೇಕಾದ ಚರಂಡಿ ನಿರ್ಮಾಣ ಕಾಮಗಾರಿಗಳು ಬಹುತೇಕ ವಿಳಂಬವಾಗಿದೆ.

ಮಳೆಗಾಲ ಸಿದ್ದತೆಯ ಬಗ್ಗೆ ಹಲವು ಗ್ರಾಮ ಪಂಚಾಯತ್‌ಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇನ್ನೂ ಪೂರ್ವ ತಯಾರಿಯನ್ನು ಕೋವಿಡ್- 19 ಪರಿಣಾಮದಿಂದ ಇನ್ನೂ ಆರಂಭಿಸಿಲ್ಲ.

ಮಳೆಗಾಲ ಆರಂಭವಾಗಿ ತೊಂದರೆಯನ್ನು ಅನುಭವಿಸುವುದಕ್ಕಿಂತ ಮೊದಲೇ ಪೂರ್ವ ತಯಾರಿಯನ್ನು ಮಾಡಿಕೊಂಡರೆ ಸುಲಭವಾಗುತ್ತದೆ ಎಂದು ಪ್ರಗತಿಪರ ಕೃಷಿಕ ಜಯರಾಮ ಶೆಟ್ಟಿ ಪೊಸ್ರಾಲು ಹೇಳುತ್ತಾರೆ.

ಕೆಲಸ ಆರಂಭ
ಕೋವಿಡ್- 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಳೆಗಾಲ ಮುನ್ನೆಚ್ಚರಿಕೆ ವಿಳಂಬವಾಗಿದೆ. ಈಗಾಗಲೇ ಲಾಕ್‌ಡೌನ್‌ ಸಡಿಲಿಕೆಯಾಗಿದ್ದು ಕಾರ್ಮಿಕರನ್ನು ಬಳಸಿ ಚರಂಡಿ ನಿರ್ವಹಣೆಯನ್ನು ಮಾಡುತ್ತೇವೆ.
-ಶುಭಾ ಪಿ.ಶೆಟ್ಟಿ,
ಮುಂಡ್ಕೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ

Advertisement
Advertisement

Udayavani is now on Telegram. Click here to join our channel and stay updated with the latest news.

Next