Advertisement

ಗೋವಿನಜೋಳಕ್ಕೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಮನವಿ

11:18 AM Mar 18, 2020 | Suhan S |

ಕಲಘಟಗಿ: ಗೋವಿನ ಜೋಳಕ್ಕೆ ಸರ್ಕಾರ ಘೋಷಣೆ ಮಾಡಿದ ಬೆಂಬಲ ಬೆಲೆಯನ್ನು ನೀಡಬೇಕು ಮತ್ತು ತಾಲೂಕಿನ ರೈತರು ಬೆಳೆದ ಗೋವಿನಜೋಳವನ್ನು ಖರೀದಿಸುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಬ್ಲಾಕ್‌ ಕಾಂಗ್ರೆಸ್‌ ತಾಲೂಕಾಧ್ಯಕ್ಷ ಮಂಜುನಾಥಗೌಡ ಮುರಳ್ಳಿ ನೇತೃತ್ವದಲ್ಲಿ ತಹಶೀಲ್ದಾರ್‌ ಅಶೋಕ ಶಿಗ್ಗಾವಿ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಗೋವಿನ ಜೋಳಕ್ಕೆ ಸೂಕ್ತ ಬೆಲೆ ದೊರಕದೆ ಇರುವುದರಿಂದ ರೈತರ ಪರಿಸ್ಥಿತಿ ಚಿಂತಾ ಜನಕವಾಗಿದೆ. ಗೋವಿನ ಜೋಳದ ಬೆಲೆ ತೀವ್ರ ಕುಸಿತದಿಂದಾಗಿ ದಲ್ಲಾಳಿಗಳು ಕೇಳಿದ ಬೆಲೆಗೆ ಕೊಡುವಂತಾಗಿದೆ. ಕೂಡಲೇ ಕೇಂದ್ರ ಹಾಗೂರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಬೆಂಬಲ ಬೆಲೆ ಯೋಜನೆಯಡಿ ಗೋವಿನ ಜೋಳದ ಖರೀದಿ ಪ್ರಕ್ರಿಯೆ ಆರಂಭಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇತ್ತೀಚೆಗೆ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಪಟ್ಟಣದ ಹಲವು ಸ್ಥಳಗಳಲ್ಲಿ ಮರಾಠಾ ಸಮುದಾಯದವರು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಶುಭಾಶಯ ಕೊರುವ ಬ್ಯಾನರ್‌ಗಳನ್ನು ಹಾಕಿದ್ದರು. ಕಿಡಿಗೇಡಿಗಳು ಬ್ಯಾನರ್‌ಗಳನ್ನು ಹರಿದು ಅವಮಾನಗೊಳಿಸಿದ್ದು, ಆರೋಪಿಗಳನ್ನು ತಕ್ಷಣ ಬಂಧಿ ಸಿ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಎಸ್‌.ಆರ್‌. ಪಾಟೀಲ, ಲಿಂಗರೆಡ್ಡಿ ನಡುವಿನಮನಿ, ಹರಿಶಂಕರ ಎನ್‌.ಎಂ, ಸೋಮಣ್ಣ ಬೆನ್ನೂರ, ಶಿವನಗೌಡ ಪಾಟೀಲ, ಚನ್ನಬಸಯ್ಯ ಹಿರೇಮಠ, ಭೋಜಪ್ಪ ಲಮಾಣಿ, ಶಂಕರಗೌಡ ಪಾಟೀಲ, ಫಕ್ಕೀರಪ್ಪ ಗೌಳಿ, ಮಂಜುನಾಥ ಮೂಗಣ್ಣವರ, ಬಾಳು ಖಾನಾಪುರ, ರಾಜು ಶೀಲವಂತರ, ಬಸವರಾಜ ದಾಸನಕೊಪ್ಪ, ಸಾತಪ್ಪ ಕುಂಕುರು, ಚನ್ನಬಸಪ್ಪ ಸಂಗೇದೇವರಕೊಪ್ಪ, ಶಿವಲಿಂಗ ಮೂಗನ್ನವರ, ಹನುಮಂತ ಚವರಗುಡ್ಡ, ಗಿರೀಶ ಸೂರ್ಯವಂಶಿ, ಶಿವಯ್ಯ ಹಿರೇಮಠ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next