Advertisement
ನಗರಸಭೆ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡನಾಯಕ ತಾತಾ ಮಾತನಾಡಿ, ನಗರಸಭೆಗೆ ಸೇರಿದ ಈ ಸರ್ವೇ ನಂಬರ್‌ನಲ್ಲಿ 1995-96ರಲ್ಲಿ ವಸತಿ ಯೋಜನೆಯಡಿ ನಿವೇಶನ ರಹಿತ 196 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಲಾಗಿದೆ. ಅಲ್ಲಿಂದ ಇಲ್ಲಿವರೆಗೆ ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿಲ್ಲ ಎಂದು ದೂರಿದರು.
ಹಾಲಿ ಮನೆಗಳ ಕಾಮಗಾರಿ ಕೂಡಲೇ ತಡೆಹಿಡಿಯಬೇಕು. ಮೊದಲು ಹಕ್ಕುಪತ್ರ ವಿತರಿಸಿದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು. ನಿರ್ಲಕ್ಷ್ಯ ವಹಿಸಿದ್ದಲ್ಲಿ ನಗರಸಭೆ ಕಾಂಗ್ರೆಸ್ ಸದಸ್ಯರ ನೇತೃತ್ವದಲ್ಲಿ ಹಕ್ಕುಪತ್ರ ಪಡೆದ ಫಲಾನುಭವಿಗಳೊಂದಿಗೆ ಅ.5ರಂದು ನಗರಸಭೆ ಕಾರ್ಯಾಲಯ ಎದುರು ಅಹೋರಾತ್ರಿ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ನಂತರ ನಗರಸಭೆ ಎಂಜಿನಿಯರ್ ಶಾಂತಪ್ಪ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಸದಸ್ಯರಾದ ನಾಸೀರಹುಸೇನ್ ಕುಂಡಾಲೆ, ಸೋಮನಾಥ ಡೊಣ್ಣಿಗೇರಿ, ಜುಮ್ಮಣ್ಣ ಕೆಂಗುರಿ, ಮುಖಂಡರಾದ ಮಲ್ಲು ಬಿಲ್ಲವ್, ಧರ್ಮರಾಜ ಮಡಿವಾಳರ, ಸಿದ್ರಾಮ ಎಲಿಗಾರ, ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ಡೊಣ್ಣಿಗೇರಿ ಇತರರಿದ್ದರು.