Advertisement

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಮನವಿ

12:12 PM Apr 12, 2021 | Team Udayavani |

ಕುದೂರು: ಅಕ್ರಮ ಮದ್ಯ ಮಾರಾಟ ತಡೆಯುವ ಮೂಲಕ ದಲಿತರುನೆಮ್ಮದಿಯಾಗಿ ಬದುಕಲು ಅವಕಾಶನೀಡಬೇಕು ಎಂದು ಡಿಎಸ್‌ಎಸ್‌ ಜಿಲ್ಲಾಧ್ಯಕ್ಷತೊರೆ ರಾಮನಹಳ್ಳಿ ನರಸಿಂಹಮೂರ್ತಿ ಮನವಿ ಮಾಡಿದರು.

Advertisement

ಕುದೂರು ಪೊಲೀಸ್‌ ಠಾಣೆಯಲ್ಲಿಏರ್ಪಡಿಸಿದ್ದ ಪರಿಶಿಷ್ಟರ ಕುಂದು-ಕೊರತೆಸಭೆಯಲ್ಲಿ ಮಾತನಾಡಿ, ತಾಲೂಕಿನ ದಲಿತಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟಮಾಡಲಾಗುತ್ತಿದೆ. ಆದಕ್ಕೆ ಕಡಿವಾಣಹಾಕಬೇಕು. ಇವರಿಗೆ ಮದ್ಯ ಪೂರೈಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಕುದೂರಿನ ಶಿವಗಂಗೆ ರಸ್ತೆ, ಸಂತೆಸರ್ಕಲ್‌ನಲ್ಲಿ ಬೆಳಗಿನ ಜಾವ ಕಾಫಿಗಿಂತ ಮೊದಲೇ ಮದ್ಯ ಮಾರಾಟರಾಜಾರೋಷವಾಗಿ ನಡೆಯುತ್ತದೆ. ಹೀಗಾಗಿಬೆಳಗಿನ ಜಾವವೇ ಮದ್ಯ ಮಾರಾಟಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಹಾಪ್‌ ಕಾಮ್ಸ್‌ ಮಾಜಿ ಅಧ್ಯಕ್ಷಮಂಜೇಶ್‌ಕುಮಾರ್‌ ಮಾತನಾಡಿ,ಗ್ರಾಮೀಣ ಭಾಗದಲ್ಲಿ ಪೊಲೀಸರ ಬೀಟ್‌ವ್ಯವಸ್ಥೆ ಮರು ಆರಂಭಿಸಬೇಕು. ಅಕ್ರಮಮದ್ಯ ಮಾರಾಟ ಮಾಡುವವರನ್ನುಅಬಕಾರಿ ಅಧಿ ಕಾರಿಗಳು ಪತ್ತೆ ಹಚ್ಚಿ ಶಿಸ್ತುಕ್ರಮ ಕೈಗೊಳ್ಳಬೇಕು. ಇದು ತಪ್ಪಿದರೆಅಬಕಾರಿ ಕಚೇರಿ ಎದುರು ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ದಲಿತ ಮುಖಂಡ ನಾಗರಾಜು ಮಾತನಾಡಿ, ಗುಡೇಮಾರನಹಳ್ಳಿ ವ್ಯಾಪ್ತಿಯಲ್ಲಿಎಗ್ಗಿಲ್ಲದೆ ಜೂಜಾಟ ನಡೆಯುತ್ತಿದೆ. ಇದಕ್ಕೆಕಡಿವಾಣ ಹಾಕಬೇಕು ಎಂದು ಮನವಿಮಾಡಿದರು. ಪಿಎಸ್‌ಐ ಪುಟ್ಟೇಗೌಡಮಾತನಾಡಿ, ನಿಮ್ಮ ಸಮಸ್ಯೆಗಳು ಏನೇ ಇದ್ದರೂ, ಕಾನೂನು ವಿರೋಧಿಚಟುವಟಿಕೆಗಳು ಇದ್ದರೆ ತಮ್ಮ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಚಂದ್ರು, ಚೌಡಪ್ಪ,ಸೀನಪ್ಪ, ಸುರೇಶ, ನಾಗರಾಜು, ದೊರೆ, ವೆಂಕಟೇಶ, ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next