Advertisement

ಮೂರು ಮೆಸ್ಕಾಂ ಶಾಖೆ ಆರಂಭಿಸಲು ಆಗ್ರಹ

08:58 PM Sep 27, 2019 | mahesh |

ಮೂಡುಬಿದಿರೆ: ಮೂಡು ಬಿದಿರೆಯ ಮೆಸ್ಕಾಂ ಜನ ಸಂಪರ್ಕ ಸಭೆಯು ಮೆಸ್ಕಾಂ ಮಂಗ ಳೂರು ವೃತ್ತದ ಅಧೀಕ್ಷಕ ಎಂಜಿನಿಯರ್‌ ಮಂಜಪ್ಪ ಅಧ್ಯಕ್ಷತೆಯಲ್ಲಿ ನಗರದ ಸಮಾಜ ಮಂದಿರದಲ್ಲಿ ಶುಕ್ರವಾರ ಜರಗಿತು.

Advertisement

ಮೂಡುಬಿದಿರೆ ಪುರಸಭಾ ಸದಸ್ಯ ಪ್ರಸಾದ್‌ ಕುಮಾರ್‌ ಸಭೆ ಯಲ್ಲಿ ಮಾತ ನಾಡಿ, ಮೂಡುಬಿದಿರೆಯ ಮೆಸ್ಕಾಂ ವ್ಯಾಪ್ತಿಯಲ್ಲಿ 28,000ಕ್ಕೂ ಅಧಿಕ ಸಂಪರ್ಕ, ಬೆಳುವಾಯಿ-ಶಿರ್ತಾಡಿಯಲ್ಲಿ 13,000 ಸಂಪರ್ಕಗಳು ಇರುವುದರಿಂದ ಕಾರ್ಯಬಾಹುಳ್ಯ ಸಹಜವಾಗಿ ಹೆಚ್ಚಿದೆ. ಹಾಗಾಗಿ ಮೂಡುಬಿದಿರೆಯಲ್ಲಿ ಮೂರು ಹಾಗೂ ಬೆಳುವಾಯಿ-ಶಿರ್ತಾಡಿಯಲ್ಲಿ ಎರಡು ಶಾಖೆಗಳನ್ನು ಆರಂಭಿ ಸುವ ಅಗ ತ್ಯ ವಿದೆ ಎಂದರು.

ಕಾವೂರು ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕೃಷ್ಣರಾಜ್‌, ಸಹಾಯಕ ಕಾ.ನಿ. ಎಂಜಿನಿಯರ್‌ ಪ್ರೀತಿ, ಮೂಡುಬಿದಿರೆ ಉಪವಿಭಾಗದ ಸ.ಕಾ.ನಿ. ಎಂಜಿನಿಯರ್‌ ಡಿ.ಆರ್‌. ಸತೀಶ್‌, ಸಹಾಯಕ ಲೆಕ್ಕಾಧಿಕಾರಿ ಉಷಾ ಕಿರಣ್‌, ಸಹಾಯಕ ಎಂಜಿನಿಯರ್‌ (ತಾಂತ್ರಿಕ) ಕ್ಲೆಮೆಂಟ್‌ ಬೆಂಜಮಿನ್‌ ಬ್ರಾಗ್ಸ್‌, ಶಾಖಾಧಿಕಾರಿ ಮಮತಾ, ಬೆಳುವಾಯಿ ಶಾಖಾಧಿಕಾರಿ ಅಮಿತ್‌, ಕಲ್ಲಮುಂಡ್ಕೂರು ಶಾಖಾಧಿಕಾರಿ ಸುಭಾಷ್‌, ಮೂಡುಬಿದಿರೆ ಶಾಖಾ ಮೇಲ್ವಿಚಾರಕ ಬಾಲಕೃಷ್ಣ, ಕೆ.ಪಿ.ಟಿ.ಸಿ.ಎಲ್‌. ಸ.ಕಾ.ನಿ. ಎಂಜಿನಿಯರ್‌ ಕುಮಾರ್‌, ಬೆಳುವಾಯಿ ಮೇಲ್ವಿಚಾರಕ ಗೇಮ ನಾಯ್ಕ ಅವರ ಉಪಸ್ಥಿತಿಯಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಮಂಡಿಸಿದರು. ಮೂಡುಬಿದಿರೆ ಮೆಸ್ಕಾಂನಲ್ಲಿ ತೆರ ವಾದ ಹೊಸ ಸಹಾಯಕ ಎಂಜಿನಿಯರ್‌ ಹುದ್ದೆಯನ್ನು ಒದಗಿಸಬೇಕು ಎಂದು ಪ್ರಸಾದ್‌ ಕುಮಾರ್‌ ಆಗ್ರಹಿಸಿದರು.

ಟಿ.ಸಿ. ಬದಲಾವಣೆಗೆ ಆಗ್ರಹ
ನಿಡ್ಡೋಡಿ ಕಾಯರ್‌ಮುಗೇರ್‌ನಲ್ಲಿ 50 ವರ್ಷಗಳಷ್ಟು ಹಳೆಯದಾದ ಟಿ.ಸಿ. ಯನ್ನು ಬದಲಾಯಿಸಬೇಕಾಗಿದೆ, ಇಲ್ಲಿ ಡಿಸೆಂಬರ್‌ನಿಂದ ಮೇ ವರೆಗೆ ಲೋ ವೋಲ್ಟೆಜ್‌ ಸಮಸ್ಯೆ ಇದೆ ಎಂದು ಅಶೋಕ, ಮುಕ್ತಾನಂದ ಶೆಟ್ಟಿ ಅಧಿಕಾರಿಗಳ ಗಮನಸೆಳೆದರು.

ಮಾರೂರು 5 ಸೆಂಟ್ಸ್‌ ಜಾಗದಲ್ಲಿ ಅಪಾಯಕಾರಿಯಾಗಿರುವ ಕಂಬವನ್ನು ಸ್ಥಳಾಂತರಿಸಬೇಕು ಎಂದು ಪುಷ್ಪಾ ಶೆಟ್ಟಿ ಮನವಿ ಮಾಡಿದರು. ಹೊಸಬೆಟ್ಟು ಶ್ಯಾಮ ಎಂ. ಅವರು ತೋಟದ ನಡುವೆ ಹಾದುಹೋಗಿರುವ ವಿದ್ಯುತ್‌ ತಂತಿಗೆ ಮರಗಳಿಂದಾಗುವ ತೊಂದರೆಗಳನ್ನು ನಿವಾರಿಸಲು ವಿನಂತಿಸಿದರು.

Advertisement

ಇಂಥ ಹಲವು ಪ್ರಕರಣಗಳು ಗಮನಕ್ಕೆ ಬಂದಿವೆ. ಅದಕ್ಕಾಗಿ ಇಂಥ ಜಾಗದವರು ಕಾರಿಡಾರ್‌ ಮಾಡಿಕೊಡದೇ ಇದ್ದರೆ ನಾವು ಹೇಗೆ ಕೆಲಸ ಮಾಡುವುದು? ಎಂದು ಮಂಜಪ್ಪ ಕೇಳಿದರು.

ಹಳೇ ತಂತಿ ಬದಲಾವಣೆಗೆ ಮನವಿ
ನಿಡ್ಡೋಡಿಯಲ್ಲಿ ಪಟ್ಲ ದಾಟಿ ಹೋಗುವ ಹಳೇ ತಂತಿಗಳನ್ನು ಬದಲಾಯಿಸುವ ಅಗತ್ಯವಿದೆ ಎಂದು 17 ಮಂದಿ ಗ್ರಾಮಸ್ಥರು ಸಹಿ ಮಾಡಿದ ಮನವಿಯನ್ನು ಸಲ್ಲಿಸಿದರು. ಈ ಬಗ್ಗೆ ಕೂಡಲೇ ಗಮನ ಹರಿಸಿ, ಈ ಕಾರ್ಯವನ್ನು ನೆರವೇರಿಸಬೇಕು ಎಂದು ಮಂಜಪ್ಪ ಆದೇಶಿಸಿದರು.

ಎನಿಕ್ರಿಪಲ್ಲದಲ್ಲಿ ಟಿ.ಸಿ. ಹಂದರ ತುಕು ಹಿಡಿದು ಅಪಾಯಕಾರಿಯಾಗಿದೆ, ಅದನ್ನು ಬದಲಾಯಿಸಬೇಕು ಎಂದು 17 ಮಂದಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಜೆಸ್ಸಿ ಮಿನೇಜಸ್‌ ಅವರು ಕಲ್ಲ ಬೆಟ್ಟು ಮಾರಿಗುಡಿ ಬಳಿ ಸಿಟಿಸಿ ತಂತಿ ಬದಲಾಯಿಸಬೇಕು; ತಾಕೊಡೆ ಕರಿಂಜೆ ತೋಟದ ನಡುವೆ ಎಲ್‌ಟಿಲೈನ್‌ ಸರಿಪಡಿಸಬೇಕಾಗಿದೆ ಎಂದು ವಿನಂತಿಸಿದರು.

ಮೆಸ್ಕಾಂಗೆ ತಿಳಿಸದೆ ಕೊಂಬೆ ಕಡಿಯಲು ಮುಂದಾಗಬೇಡಿ ವಿದ್ಯುತ್‌ ತಂತಿಗಳಿಗೆ ತಾಗುತ್ತಿರುವ ಮರದ ಕೊಂಬೆಗಳನ್ನು ಮೆಸ್ಕಾಂಗೆ ತಿಳಿಸದೆ ನೀವೇ ಕಡಿಯಲು ಮುಂದಾಗಬೇಡಿ ಎಂದು ಮಂಜಪ್ಪ ಅವರು ಗ್ರಾಹಕರಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಮನವಿಗಾಗಿ ಕಾಯಬೇಡಿ; ಪರಿವೀಕ್ಷಿಸಿ, ಕಾರ್ಯಪ್ರವೃತ್ತರಾಗಿ
ಹಲವು ಗ್ರಾಮಗಳ ಗ್ರಾಮ ಸ್ಥರು ತಮ್ಮ ಅಹವಾಲುಗಳನ್ನು ಮಂಡಿಸತೊಡಗಿದಾಗ ಮಂಜಪ್ಪ ಅವರು, ಎಲ್ಲವನ್ನೂ ಗ್ರಾಹಕರು ದೂರು ಕೊಟ್ಟ ಬಳಿಕವಷ್ಟೇ ಕೆಲಸ ಮಾಡುವುದಲ್ಲ, ಮನವಿಗಾಗಿ ಕಾಯಬೇಡಿ. ಎಲ್ಲೆಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ಪರಿವೀಕ್ಷಿಸಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾರ್ಯಪ್ರವೃತ್ತರಾಗಿ. ಸಾಮಗ್ರಿ, ಜನದ ಕೊರತೆ ಇದೆ ಎಂದು ಮುಂದೂಡುತ್ತಲೇ ಇರಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಬೆಳುವಾಯಿ ಅಂಬೂರಿಯಲ್ಲಿ ಹೆಚ್ಚು ವರಿ ಟಿ.ಸಿ. ಹಾಕಬೇಕು, ಅ. 1ನೇ ತಾರೀಕಿಗೆ ಸ್ಥಳ ವೀಕ್ಷಣೆಗೈದು ಕಾಮಗಾರಿ ನಡೆಸಬೇಕು ಎಂದು ನಾಗರಾಜ ಶೆಟ್ಟಿ ಅವರ ಕೋರಿಕೆಗೆ ಮಂಜಪ್ಪ ಸ್ಪಂದಿಸಿದರು.

ಮರದ ಗೆಲ್ಲುಗಳ ತೆರವಿಗೆ ಸೂಚನೆ
ನಿಡ್ಡೋಡಿ ಬಂಗೇರಪದವಿನಲ್ಲಿ ಮರದ ಗೆಲ್ಲು ಕಡಿಯಲು ಅಧಿಕಾರಿಗಳಿಗೆ ಸೂಚಿಸಿದರೂ ಇನ್ನೂ ಆಗಿಲ್ಲ, ಈ ಮರ ಬಿದ್ದರೆ ನಾಲ್ಕು ವಿದ್ಯುತ್‌ ಕಂಬಗಳು ಉರುಳಿಬೀಳುವ ಅಪಾಯವಿದೆ ಎಂದು ಗ್ರಾಮಸ್ಥರು ಎಚ್ಚರಿಸಿದರು. ಇದಕ್ಕೆ ಕೂಡಲೇ ಅಂದರೆ ಅ. 4ರಂದು ಸ್ಥಳಕ್ಕೆ ಹೋಗಿ ಸೂಕ್ತ ಕ್ರಮ ಜರಗಿಸಲು ಮಂಜಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next