Advertisement

ಸೇತುವೆ ನಿರ್ಮಾಣ ಆರಂಭಿಸಲು ಮನವಿ

12:22 PM Nov 29, 2018 | |

ಬೆಂಗಳೂರು: ಸಿಗಂಧೂರು ಚೌಡೇಶ್ವರಿ ದೇವಾಲಯಕ್ಕೆ ತೆರಳಲು ಅನುಕೂಲ ವಾಗು ವಂತೆ ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣ ಯೋಜನೆಯನ್ನು ಶೀಘ್ರವೇ ಆರಂಭಿಸುವಂತೆ ಜಲ ಸಂಪ ನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವ ರಿಗೆ ಪ್ರತಿಪಕ್ಷದ ನಾಯಕ ಬಿ.ಎಸ್‌ .ಯಡಿಯೂರಪ್ಪ ಮನವಿ ಮಾಡಿದ್ದಾರೆ. 

Advertisement

ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರ ಜತೆ ಕ್ರೆಸೆಂಟ್‌ ರಸ್ತೆಯ ಸರ್ಕಾರಿ ನಿವಾಸದಲ್ಲಿ ಡಿ. ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದ ಅವರು, ಸಿಗಂಧೂರು ಸೇತುವೆ ಕಾಮಗಾರಿ ಯೋಜನೆಗೆ ಈಗಾಗಲೇ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಗುದ್ದಲಿ ಪೂಜೆ ಮಾಡಿದ್ದು, ಕೇಂದ್ರ ಸರ್ಕಾರ 280 ಕೋಟಿ ರೂ. ಅನುದಾನ ವನ್ನೂ ನೀಡಿದೆ. ಆದರೆ, ಅರಣ್ಯ ಇಲಾಖೆಯ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಯೋಜನೆ ಸ್ಥಗಿತ ಗೊಂಡಿದ್ದು, ತಕ್ಷಣವೇ ಅರಣ್ಯ ಇಲಾಖೆ ಯಿಂದ ಒಪ್ಪಿಗೆ ಪಡೆದು ಯೋಜನೆ ಆರಂಭಿಸುವಂತೆ ಕೋರಿದರು. 

ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸಿರುವ ಸಚಿವ ಡಿ.ಕೆ.ಶಿವಕುಮಾರ್‌, ತಕ್ಷಣವೇ ಅರಣ್ಯ ಸಚಿವ ಆರ್‌.ಶಂಕರ್‌ ಅವರನ್ನೂ ತಮ್ಮ ನಿವಾಸಕ್ಕೆ ಕರೆಸಿ ಅವರಿಂದ ವಿವರಣೆ ಪಡೆದು ಶೀಘ್ರವೇ ಅರಣ್ಯ ಇಲಾಖೆಯಿಂದ ಒಪ್ಪಿಗೆ ಪಡೆದು ಯೋಜನೆ ಕಾಮಗಾರಿ
ಆರಂಭಿಸುವ ಭರವಸೆ ನೀಡಿದರು. ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ ತಾಲೂಕುಗಳಲ್ಲಿಯೂ ನೆನೆಗುದಿಗೆ ಬಿದ್ದಿರುವ ಏತ
ನೀರಾವರಿ ಯೋಜನೆ ಗಳನ್ನು ಶೀಘ್ರವೇ ಕಾರ್ಯಾರಂಭ ಮಾಡು ವಂತೆ ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿ ಯೋಜನೆಗಳಿಗೂ ಮನವಿ: ವಿಧಾನ ಪರಿಷತ್‌ನ ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ್‌ ಕವಟಗಿ ಮಠ ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ್‌ ಕೋರೆ ಅವರು ಮೂರು ಯೋಜನೆ ಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು.

ಕೃಷ್ಣಾ ನದಿಯಿಂದ ಕೃಷಿಗೆ ನೀರುಣಿ ಸುವ ಬೆಳಗಾವಿ ಜಿಲ್ಲೆಯ ಮಹಾಲಕ್ಷ್ಮೀ ಏತ ನೀರಾವರಿ, ಶಿವಶಕ್ತಿ ಏತ ನೀರಾವರಿ, ಕರಗಾಂವ್‌ ಏತ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಈಗಾಗಲೇ ಮೂರು ಯೋಜನೆಗಳಿಗೆ ಕೃಷ್ಣಾ ನದಿ ಯಿಂದ ನೀರು ಹಂಚಿಕೆ
ಮಾಡಲಾಗಿದ್ದು, ಯೋಜನಾ ವರದಿಯನ್ನೂ ಸಿದ್ದಪಡಿಸಲಾಗಿದೆ.

Advertisement

ಮಹಾಲಕ್ಷ್ಮಿ ಏತ ನೀರಾವರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಸುಮಾರು 12 ಸಾವಿರ ಎಕರೆ
ಜಮೀನಿಗೆ ನೀರುಣಿಸಬಹುವುದಾಗಿದೆ. ಕರಗಾಂವ್‌ ಏತ ನೀರಾವರಿ ಯೋಜನೆ ಕೈಗೆತ್ತಿ ಕೊಳ್ಳುವಂತೆ ರೈತರು ಉಪವಾಸ ಸತ್ಯಾ ಗ್ರಹ ಮಾಡಿದ್ದರು. ತಕ್ಷಣ ಈಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಸಚಿವ ಡಿ.ಕೆ.ಶಿವಕುಮಾರ್‌ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತ ನಾಡಿದ ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ, ಸಿಗಂಧೂರು ಸೇತುವೆ ನಿರ್ಮಾಣ ಹಾಗೂ ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅರಣ್ಯ ಸಚಿವರೂ ಕೂಡ ಪೂರಕವಾಗಿ ಮಾತನಾಡಿದ್ದಾರೆ. ಮಾತು ಕತೆ ಸಮಾಧಾನ ತಂದಿದ್ದು, ಬೇರೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಹೇಳಿದರು. ಸಂಸದ ಬಿ.ವೈ, ರಾಘ ವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಪ್ರೀತಂ ಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next