Advertisement

ಟ್ರಾಫಿಕ್‌ ಸಮಸ್ಯೆ ಪರಿಹರಿಸಲು ಕರವೇ ಆಗ್ರಹ

03:57 PM May 17, 2019 | Suhan S |

ಗೋಕಾಕ: ನಗರದಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸುವುದನ್ನು ತಡೆಗಟ್ಟಬೇಕು. ವಾಹನ ಸವಾರರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿ ಕರವೇ ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪಿಎಸ್‌ಐ ಶ್ರೀಶೈಲ್ ಬ್ಯಾಕೂಡ ಅವರ ಮುಖಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಕಳೆದ ಹಲವಾರು ತಿಂಗಳುಗಳಿಂದ ಗೋಕಾಕ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬ್ಯಾಳಿಕಾಟಾವರೆಗೆ ಮತ್ತು ಬಸವೇಶ್ವರ ವೃತ್ತದಿಂದ ಅಜಂತಾ ಖೂಟವರೆಗಿನ ರಸ್ತೆ ಅಗಲೀಕರಣಗೊಂಡು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಈ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ನಾಲ್ಕು ಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ಎಲ್ಲಿ ಬೇಕೆಂದರಲ್ಲಿ ನಿಲ್ಲಿಸಿ ತಮ್ಮ ಬೇಜವಾಬ್ದಾರಿ ತೋರುತ್ತಿದ್ದಾರೆ. ಇದರಿಂದ ಈ ಎರಡೂ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಪಾದಚಾರಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇದರ ಪರಿಣಾಮ ಈ ಎರಡೂ ರಸ್ತೆಗಳು ಅಗಲೀಕರಣಗೊಂಡರೂ ಯಾವುದೇ ಪ್ರಯೋಜನವಾಗದೆ ಟ್ರಾಫಿಕ್‌ ಸಮಸ್ಯೆ ಎದುರಿಸಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ಸಾಧಿಕ್‌ ಹಲ್ಯಾಳ, ದೀಪಕ್‌ ಹಂಜಿ, ಹನೀಪಸಾಬ ಸನದಿ, ರಮೇಶ ಕಮತಿ, ರೆಹಮಾನ ಮೊಕಾಶಿ, ಮುಗುಟ ಪೈಲವಾನ, ನಿಜಾಮ ನದಾಫ್‌, ಸುರೇಶ ಪತ್ತಾರ, ಮಲ್ಲು ಸಂಪಗಾರ, ನಿಯಾಜ ಪಟೇಲ್, ಮಹಾದೇವ ಮಕ್ಕಳಗೇರಿ, ದುರ್ಗಪ್ಪ ಗಾಡಿವಡ್ಡರ, ಬಸು ಹುಲಕುಂದ, ರಾಜೇಶ್ವರಿ ವಡೇರ, ಶೆಟ್ಟೆಪ್ಪ ಗಾಡಿವಡ್ಡರ, ದಸ್ತಗೀರ ಮುಲ್ಲಾ, ಫಕೀರಪ್ಪ ಗಣಾಚಾರಿ, ಬಸು ಗಾಡಿವಡ್ಡರ, ಅಮೀರಖಾನ ಜಗದಾಳೆ, ಹಣಮಂತ ಕಮತೆ, ಯಲ್ಲಪ್ಪ ಧರ್ಮಟ್ಟಿ, ಮಹಾಂತೇಶ ಮರಿಕಟ್ಟಿ, ಅಪ್ಪಯ್ಯ ತಿಗಡಿ, ವಿಠuಲ ಕಮತಿ, ಸಂತು ಕೋಲಕಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next