Advertisement

ಶಿಕ್ಷಕರಿಗೆ ವೇತನ ಪಾವತಿಸಲು ಮನವಿ

10:47 AM Jul 21, 2020 | Suhan S |

ಚಿತ್ರದುರ್ಗ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ನಡೆಯುತ್ತಿರುವ ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಹೊರಗುತ್ತಿಗೆ ಪ್ರಾಚಾರ್ಯರು, ಶಿಕ್ಷಕರಿಗೆ ವೇತನ ಪಾವತಿಸಲು ರಾಜ್ಯ ಕ್ರೈಸ್‌ ಶಾಲೆಗಳ ಹೊರ ಸಂಪನ್ಮೂಲ ಪ್ರಾಂಶುಪಾಲರ ಹಾಗೂ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಧ್ಯಕ್ಷ ಗುಂಡಯ್ಯ ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10-15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರು ಹಾಗೂ ನ್ಯಾಯಾಲಯದ ಆದೇಶದ ಮೇರೆಗೆ ಮುಂದುವರಿದ 532 ಪ್ರಾಂಶುಪಾಲರು, ಶಿಕ್ಷಕರಿಗೆ ಅಕ್ಟೋಬರ್‌, ಏಪ್ರಿಲ್‌ ಹಾಗೂ ಮೇ ತಿಂಗಳ ವೇತನ ಪಾವತಿಸಿಲ್ಲ. ಕೋವಿಡ್‌ -19 ಕಾರಣಕ್ಕೆ ಈಗ ಶಾಲೆಗಳು ಮುಚ್ಚಿದ್ದು, ಈಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಡೆಸುತ್ತಿರುವ ಆನ್‌ ಲೈನ್‌ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ಮಾರ್ಗದರ್ಶನ ನೀಡಲಾಗುತ್ತಿದೆ. ಆದರೂ ಈವರೆಗಿನ ವೇತನ ಪಾವತಿಸಿಲ್ಲ. ಜೂನ್‌ ತಿಂಗಳಿಂದ ಶೈಕ್ಷಣಿಕ ಚಟುವಟಿಕೆ ಆರಂಭವಾಗಿದ್ದು, ಇದಕ್ಕೆ ಕಾಯಂ ಶಿಕ್ಷಕರು ಮಾತ್ರ ಹಾಜರಾಗುವಂತೆ ಸೂಚಿಸಲಾಗಿದೆ.  ನ್ಯಾಯಾಲಯ ಆದೇಶ ಮಾಡಿದ್ದರೂ ನಮ್ಮನ್ನು ಸೇವೆಗೆ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.

ಸದ್ಯ ಕೆಲಸ ಮಾಡುವ ಶೇ.80 ಜನರಿಗೆ ವಯೋಮಿತಿ ಮೀರುತ್ತಿದ್ದು, ಬೇರೆ ಯಾವ ಕೆಲಸವನ್ನು ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ನಮ್ಮಿಂದ ಸೇವೆ ಪಡೆಯುವವರು ಅದಕ್ಕೆ ತಕ್ಕಂತೆ ವೇತನ ನೀಡಬೇಕು. ಅದರೆ ಅದನ್ನು ಮಾಡುತ್ತಿಲ್ಲ, ವಸತಿ ಸೌಲಭ್ಯ, ವೇತನ ಪರಿಷ್ಕರಣೆ ಮಾಡುವಲ್ಲಿ ವಿಫಲವಾಗಿದ್ದಾರೆ. ಇವರು ನೀಡುವ ಕಡಿಮೆ ವೇತನದಿಂದ ಬದುಕು ಸಾಗಿಸುವುದು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಹನುಮಂತಪ್ಪ, ಯರ್ರಿಸ್ವಾಮಿ, ರೂಪ, ಪುಷ್ಪಾವತಿ, ಸಬೀನ, ಸುಹಾಸ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next