Advertisement

ಶೈಕ್ಷಣಿಕ ಸಾಲಮನ್ನಾಕ್ಕಾಗಿ ದೆಹಲಿಧರಣಿಯಲ್ಲಿ ಭಾಗವಹಿಸಲು ಮನವಿ

10:48 AM Dec 11, 2018 | Team Udayavani |

ಕಲಬುರಗಿ: ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳ ಬಡ್ಡಿ ಹಣ ಬಿಡುಗಡೆ ಮಾಡಬೇಕು ಹಾಗೂ ಹೈ.ಕ.ವ್ಯಾಪ್ತಿಯಲ್ಲಿನ ಜಿಲ್ಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲವನ್ನು 371 (ಜೆ) ಅಡಿ ಸಂಪೂರ್ಣ ಸಾಲ ಮನ್ನಾ ಮಾಡಲು ಒತ್ತಾಯಿಸಿ ಈಶಾನ್ಯ ವಲಯದ ಶಿಕ್ಷಕರ ವೇದಿಕೆ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುವ ಸತ್ಯಾಗ್ರಹದಲ್ಲಿ ಭಾಗವಹಿಸುವಂತೆ ಪಾಲಕರಲ್ಲಿ ವೇದಿಕೆ ಅಧ್ಯಕ್ಷ ಎಂ.ಬಿ.ಅಂಬಲಗಿ ಮನವಿ ಮಾಡಿದರು.

Advertisement

ನಗರದಲ್ಲಿ ನಡೆದ ಶೈಕ್ಷಣಿಕ ಸಾಲ ಪಡೆದ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು. ವಾರ್ಷಿಕ ಆದಾಯ 4.5 ಲಕ್ಷಕ್ಕಿಂತ ಕಡಿಮೆಯಿರುವ ಉನ್ನತ ವ್ಯಾಸಂಗಕ್ಕಾಗಿ ಪಡೆದ ಶೈಕ್ಷಣಿಕ ಸಾಲಕ್ಕಾದ ಬಡ್ಡಿ ಕೇಂದ್ರ ಸರಕಾರ 2009 ಮತ್ತು 2014ರಲ್ಲಿ ತುಂಬುವುದಾಗಿ ಆದೇಶ ನೀಡಿ ಹಣ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಮತ್ತು ಹೈದ್ರಾಬಾದ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಪಡೆದ ಶೈಕ್ಷಣಿಕ ಸಾಲವನ್ನು 371 (ಜೆ) ಅಡಿ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ವೇದಿಕೆ ನೇತೃತ್ವದಲ್ಲಿ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳ ಪಾಲಕರು ಡಿ. 12 ಮತ್ತು 13ರಂದು ದೆಹಲಿ ಜಂತರ-ಮಂತರನಲ್ಲಿ ನಡೆಯುವ ಸತ್ಯಾಗ್ರಹದಲ್ಲಿ ಭಾಗವಹಿಸಿ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ಪಾಲಕರಲ್ಲಿ ಅವರು ಮನವಿ ಮಾಡಿದರು.

ಡಿ. 10 ಮತ್ತು 11ರಂದು ಬೀದರ, ಕಲಬುರಗಿ, ಹೈದ್ರಾಬಾದ, ಮುಂತಾದ ಸ್ಥಳಗಳಿಂದ ರೈಲ್ವೆ ಮೂಲಕ ದೆಹಲಿಗೆ ಹೋಗಲು ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಎಲ್ಲ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಜಂತರ-ಮಂತರನಲ್ಲಿ ನಡೆಯುವ ಹೋರಾಟಕ್ಕೆ ಬೆಂಬಲಿಸಿ ಕೇಂದ್ರ ಸರಕಾರ ಶೈಕ್ಷಣಿಕ ಸಾಲಮನ್ನಾ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹಾಕುವಂತೆ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಲ್ಲಿ ವೇದಿಕೆ ಮನವಿ ಮಾಡುತ್ತದೆ ಎಂದು ಹೇಳಿದರು.

ಸೂರ್ಯಕಾಂತ ಜೀವಣಗಿ, ಬಸವರಾಜ ರಾಜಾಪುರ, ಕೃಷ್ಣ ಭಟ್‌ ಜೋಶಿ, ಜಗನ್ನಾಥರೆಡ್ಡಿ ಯಾದಗಿರಿ, ರವಿ ಶಾಸ್ತ್ರೀ, ಪ್ರಭು ಪಾಟಿಲ. ಮೊಹಮ್ಮದ್‌ ಜಾಫರ್‌, ಆರ್‌. ಎಸ್‌. ಪಾಟಿಲ, ದಿಲೀಪ ಸೇರಿದಂತೆ ನೂರಾರು ಪಾಲಕರು ಉಪಸ್ತಿತರಿದ್ದರು. ದೆಹಲಿಗೆ ಬರಬಯಸುವ ಪಾಲಕರು
9880169907ಗೆ ಸಂಪರ್ಕಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next