Advertisement

ಪರಿಶಿಷ್ಟ ಪಂಗಡಕ್ಟೆ ಮೀಸಲಾತಿ ಹೆಚ್ಚಿಸಲು ಮನವಿ

02:42 PM Jan 12, 2020 | Suhan S |

ಹಾವೇರಿ: ಪರಿಶಿಷ್ಟ ಪಂಗಡಕ್ಕೆ ಉದ್ಯೋಗ ಮತ್ತು ಶೈಕ್ಷಣಿಕ, ಆರ್ಥಿಕವಾಗಿ ಶೇ.7.5ರಷ್ಟು ಮೀಸಲಾತಿ ನೀಡಬೇಕು ಎಂದು ಜಿಲ್ಲಾ ವಾಲ್ಮೀಕಿ ನಾಯಕ ಮಹಾಸಭಾ ನ್ಯಾಯಮೂರ್ತಿ ಎಚ್‌.ಎನ್‌. ಮೋಹನ್‌ದಾಸ್‌ ಆಯೋಗದ ಸಭೆಯಲ್ಲಿ ಮನವಿ ಸಲ್ಲಿಸಿತು.

Advertisement

ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಿಂದ ಜಿಲ್ಲಾ ಹಾಗೂ ತಾಲೂಕಿನ ವಾಲ್ಮೀಕಿ ನಾಯಕ ಮಹಾಸಭಾದ ಪದಾಧಿಕಾರಿಗಳು ಭಾಗವಹಿಸಿ ಆಯೋಗಕ್ಕೆ ಮನವಿ ನೀಡಿದರು.

ರಾಜಕೀಯದಲ್ಲಿ ಸಮುದಾಯಕ್ಕೆ ಶೇ. 7.5ರಷ್ಟು ಮೀಸಲಾತಿ ಸಿಕ್ಕಿದೆ. ಅದೇ ರೀತಿಯಲ್ಲಿ ಶಿಕ್ಷಣ-ಉದ್ಯೋಗದಲ್ಲಿ ಹಾಗೂ ಆರ್ಥಿಕ ಮೀಸಲಾತಿ ನೀಡಬೇಕು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆಯನ್ನು ಆಧರಿಸಿ ಜನಗಣತಿಯಾಗಿದ್ದು, ವಿವಿಧ ವರ್ಗಗಳ ಜನಸಂಖ್ಯೆಯ ಅಂಕಿ ಅಂಶಗಳನ್ನು ಕ್ರೋಢೀಕರಿಸುವಕೆಲಸ ಆಗಿದ್ದರೂ ಅದು ಸರಕಾರದಾದ ಮಟ್ಟದಲ್ಲಿ ಇನ್ನು ಪ್ರಕಟಗೊಂಡಿಲ್ಲ. ಇದರಿಂದ ಪರಿಶಿಷ್ಟ ಪಂಗಡಗಳ ಇಂದಿನ ವಾಸ್ತವಿಕ ಜನಸಂಖ್ಯೆ ಅ ಧಿಕೃತ ಮಾಹಿತಿ ಲಭ್ಯ ಇಲ್ಲ. ಈ ನಡುವಿನ ಅವಧಿ ಯಲ್ಲಿ ಅನೇಕ ಜಾತಿ, ಉಪಜಾತಿಗಳನ್ನು ಈಗಾಗಲೇ ಪರಿಶಿಷ್ಟ ಪಂಗಡದಲ್ಲಿರುವ ಜಾತಿಗಳಿಗೆ ಸಮಾನಾಂತರವೆಂದು ಪರಿಗಣಿಸಿ ಪರಿಶಿಷ್ಟ ಪಂಗಡಗಳ ಸೇರ್ಪಡೆ ಮಾಡಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಪಂಗಡದಲ್ಲಿ ಜಾತಿ, ಉಪಜಾತಿಗಳೆಲ್ಲಾ ಸೇರಿ ಒಟ್ಟು 106 ಇದ್ದು, 50 ಗುಂಪುಗಳಾಗಿ ವಿಂಗಡಿಸಲಾಗಿವೆ. ಈ ಎಲ್ಲ ಜಾತಿ ಉಪಜಾತಿಗಳು ಬೇರೆ ಬೇರೆ ವರ್ಗಗಳಿಂದ ಪರಿಶಿಷ್ಟ ಪಂಗಡಕ್ಕೆ ವರ್ಗಾಯಿಸಲ್ಪಟ್ಟಿದ್ದರೂ ಅವುಗಳ ಮೀಸಲಾತಿ ಪ್ರಮಾಣ ಮಾತ್ರ ಅವುಗಳೊಂದಿಗೆ ವರ್ಗಾವಣೆಯಾಗಿಲ್ಲ. ರಾಜ್ಯದಲ್ಲಿ ಪರಿಶಿಷ್ಟಪಂಗಡಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಸಾಮಾಜಿಕವಾಗಿ ಅತೀ ಹಿಂದುಳಿದಿರುತ್ತವೆ. ಪರಿಶಿಷ್ಟ ಪಂಗಡದ ಮೀಸಲಾತಿ ಸುಮಾರು 60 ವರ್ಷಗಳಿಂದ ಶೇ. 3ರಷ್ಟು ಇದೆ. ಜನಸಂಖ್ಯೆಗನುಗುಣವಾಗಿ ಈಗ ಮೀಸಲಾತಿ ಶೇ. 3ರಷ್ಟು ಶೇ.7.5ಕ್ಕೆ ಏರಿಕೆಯಾಗಬೇಕಾಗಿದೆ. ಈ ಲೋಪದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಸರ್ಕಾರ, ಸರ್ಕಾರೇತರ ಶಾಲಾ ಕಾಲೇಜುಗಳಲ್ಲಿ ಪ್ರವೇಶದಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ, ವಿದ್ಯಾರ್ಥಿ ವೇತನ, ಶುಲ್ಕ ವಿನಾಯತಿ ಸೌಲಭ್ಯ ವೃತ್ತಿ ಶಿಕ್ಷಣಗಳಾದ ಡಿಇಡಿ, ಬಿಇಡಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್‌, ಮೆಡಿಕಲ್‌, ನರ್ಸಿಂಗ್‌, ಎಂಫಿಲ್‌, ಪಿಎಚ್‌ಡಿ ಹಾಗೂ ಅನೇಕ ತರಬೇತಿ ಕಾರ್ಯಕ್ರಮಗಳಲ್ಲಿ ಪ್ರವೇಶಾವಕಾಶ ದೊರೆತಿಲ್ಲ ಎಂದು ಮನವಿಯಲ್ಲಿ ಉಲ್ಲೇಖೀಸಿದ್ದಾರೆ.

ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಮೀಸಲಾತಿ ಪಡೆಯದೇ ಪರಿಶಿಷ್ಟ ಪಂಗಡದ ಜನರು ಸಂವಿಧಾನಬದ್ಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದರಿಂದ ಪರಿಶಿಷ್ಟ ಪಂಗಡದ ಜನರನ್ನು ಮೀಸಲಾತಿ ಮೂಲಕ ಅಭಿವೃದ್ಧಿಪಡಿಸಿ ಮುಖ್ಯವಾಹಿನಿಗೆ ತರಬೇಕೆಂದಿರುವ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗಿದೆ.

Advertisement

ಈ ಎಲ್ಲ ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಸಂವಿಧಾನದಲ್ಲಿ ಕಲ್ಪಿಸಿರುವ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಒದಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮನವಿ ಮಾಡಿಕೊಂಡರು. ಮನವಿ ಸಲ್ಲಿಕೆ ವೇಳೆ ಜಿಲ್ಲಾ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ, ಮುಖಂಡರಾದ ಪ್ರಕಾಶ ಹಾದಿಮನಿ, ಶ್ರೀಧರ

ದೊಡ್ಡಮನಿ, ಸಣ್ಣತಮ್ಮಪ್ಪ ಬಾರ್ಕಿ, ಮಂಜುಳಾ ಕರಬಸಮ್ಮನವರ, ಶೇಖರ ಕರಬಸಮ್ಮನವರ,ಬಸವರಾಜಪ್ಪ ಭೀಮನಾಯ್ಕರ, ಹನುಮಂತಪ್ಪ ಯಮಕ್ಕನವರ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next