ಬೆಂಗಳೂರು: ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ ಬಸವರಾಜ ಹೊರಟ್ಟಿ, ಸಭಾಪತಿ ಸ್ಥಾನ ಜೆಡಿಎಸ್ ಗೆ ಬಿಟ್ಟುಕೊಡುವಂತೆ ಮನವಿ ಮಾಡಿದರು.
ಜೆಡಿಎಸ್ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ ಬಿಎಸ್ ವೈ, ಇಂದು ಸಂಜೆ ಸಭೆ ನಡೆಸಿ ಪಕ್ಷದ ತೀರ್ಮಾನ ಮಾಡುತ್ತೇವೆಂದು ತಿಳಿಸಿದರು. ಆ ಮೂಲಕ ಜೆಡಿಎಸ್ ಗೆ ಸಭಾಪತಿ ಸ್ಥಾನ, ಬಿಜೆಪಿಗೆ ಉಪ ಸಭಾಪತಿ ಸ್ಥಾನ ಬಹುತೇಕ ಖಚಿತವಾದಂತಾಗಿದೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಬಸವರಾಜ ಹೊರಟ್ಟಿ, ಸಭಾಪತಿ ಸ್ಥಾನದ ವಿಚಾರವಾಗಿ ಸಿಎಂ ಭೇಟಿ ಮಾಡಿದ್ದೆ. ಈ ವೇಳೆ ಜೆಡಿಎಸ್ ಗೆ ಸಭಾಪತಿ ಸ್ಥಾನ ಬಿಟ್ಟು ಕೊಡುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇಂದು ಸಂಜೆ ಸಭೆ ಸೇರಿ ತೀರ್ಮಾನ ಮಾಡುತ್ತಾರೆ. ಉಪ ಸಭಾಪತಿ ಸ್ಥಾನ ಬಿಜೆಪಿಗೆ ಬಿಟ್ಟು ಕೊಡಲಿದ್ದೇವೆ ಎಂದರು.
ಇದನ್ನೂ ಓದಿ: ಪತ್ನಿ ದೂರವಾದಳೆಂದು 18 ಮಹಿಳೆಯರ ಸರಣಿ ಹತ್ಯೆ: ಪೊಲೀಸರಿಂದ ಆರೋಪಿಯ ಬಂಧನ
29 ರಂದು ಉಪ ಸಭಾಪತಿ ಚುನಾವಣೆ ಇದೆ. ಇದರ ಬಳಿಕ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಅವರು ಉಪ ಸಭಾಪತಿ ಅವರಿಗೆ ರಾಜೀನಾಮೆ ನೀಡಬಹುದು ! ನಂತರ ರಾಜ್ಯಪಾಲರು ಸಭಾಪತಿ ಚುನಾವಣೆಗೆ ದಿನ ನಿಗದಿ ಮಾಡಬೇಕಾಗುತ್ತದೆ.
ಅವರು ಇದೇ ಅಧಿವೇಶನದಲ್ಲಿ ಸಭಾಪತಿ ಚುನಾವಣೆಗೆ ದಿನ ನಿಗದಿ ಮಾಡಿದರೆ, ಸಭಾಪತಿಯಾಗಿ ಆಯ್ಕೆ ಆಗುತ್ತೇನೆ. ಇಲ್ಲದಿದ್ದರೆ ಮುಂದಿನ ಅಧಿವೇಶನದಲ್ಲಿ ಸಭಾಪತಿ ಆಯ್ಕೆ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: 4 ವರ್ಷದ ಜೈಲುವಾಸ ಅಂತ್ಯ; ಜ.27ರಂದು ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಬಿಡುಗಡೆ