Advertisement

ಹೋರಾಟ ಕೈಬಿಡಲು ಮನವಿ

11:30 AM May 31, 2019 | Team Udayavani |

ಅಥಣಿ: ಶಾಶ್ವತ ನೀರನ್ನು ಒದಗಿಸುವಂತೆ ಆಗ್ರಹಿಸಿ ಕೃಷ್ಣಾ ನದಿ ನೀರು ಹೋರಾಟ ಸಮಿತಿಯಿಂದ ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಅಥಣಿ ತಹಶೀಲ್ದಾರ್‌ ಎಂ.ಎನ್‌. ಬಳಿಗಾರ ಭೇಟಿ ನೀಡಿ ಹೋರಾಟ ಕೈ ಬೀಡುವಂತೆ ವಿನಂತಿಸಿದರು.

Advertisement

ಈ ವೇಳೆ ಹೋರಾಟ ಸಮಿತಿ ಬಸನಗೌಡ ಪಾಟೀಲ ಮಾತನಾಡಿ, ಶಾಶ್ವತ ನೀರಿಗಾಗಿ ಹೋರಾಟ ಮುಂದುವರೆಯಲಿದ್ದು, ಈ ಹೋರಾಟ ಮುಂಬರುವ ದಿನಗಳಲ್ಲಿ ತೀವ್ರಗೊಳ್ಳುವ ನಿರೀಕ್ಷೆ ಇದೆ. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಂದು ಭೇಟಿಯಾಗದೇ ಇರುವುದು ವಿಷಾದನೀಯವಾಗಿದೆ. ಕಳೆದ 12 ದಿನಗಳಿಂದ ನಡೆಸಿದ ಈ ಹೋರಾಟಕ್ಕೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಲ್ಲಿ ಭೀಕರ ಬರಗಾಲದಿಂದಾಗಿ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದ್ದರಿಂದ ಅಥಣಿ ಪಟ್ಟಣ ಸೇರಿದಂತೆ ಸುಮಾರು 120ಕ್ಕೂ ಹೆಚ್ಚು ಹಳ್ಳಿಗಳು ನೀರಿನ ಅಭಾವ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ತಾಲೂಕಾಡಳಿತದಿಂದ ಅಗತ್ಯಕ್ಕೆ ತಕ್ಕಂತೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹೋರಾಟಗಾರರ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ನ್ಯಾಯವಾದಿ ಎಸ್‌.ಎಸ್‌. ಪಾಟೀಲ, ಮಹಾದೇವ ಮಡಿವಾಳ, ಮುಖಂಡರಾದ ಶಬ್ಬೀರ ಸಾತಬಚ್ಚೆ, ಮಹಾಂತೇಶ ಬಾಡಗಿ, ಬಳವಂತ ಪತ್ತಾರ, ಮಂಜು ಹೋಳಿಕಟ್ಟಿ, ಪತ್ರಕರ್ತ ವೆಂಕಟೇಶ ದೇಶಪಾಂಡೆ, ಪ್ರಕಾಶ ಕಾಂಬಳೆ, ರಾಕೇಶ ಮೈಗೂರ, ರಮೇಶ ಬಾದವಾಡಗಿ, ಶ್ರೀನಿವಾಸ ಪಟ್ಟಣ, ಸದಾಶಿವ ಕಾಂಬಳೆ, ಮಹಾದೇವಿ ಹೋಳಿಕಟ್ಟಿ, ಚಿದಾನಂದ ಶೇಗುಣಸಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next