Advertisement

ಕಬ್ಬಿನ ಬಾಕಿ ಬಿಲ್‌ ಪಾವತಿಗೆ ಒತ್ತಾಯಿಸಿ ಡಿಸಿಗೆ ಮನವಿ 

05:37 PM May 30, 2018 | |

ಬೆಳಗಾವಿ: ಕಬ್ಬು ಬೆಳೆಗಾರರ ಬಾಕಿ ಬಿಲ್‌ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜದ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಉಳಿದಿರುವ ಬಿಲ್‌ ಹಲವಾರು ವರ್ಷಗಳಿಂದ ನೀಡಿಲ್ಲ. ಕಬ್ಬು ಬೆಳೆಗಾರರು ತೀರಾ ನಿರಾಶರಾಗಿದ್ದು, ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ. ಮುಂಗಾರು ಹಂಗಾಮಿನ ಕೃಷಿ ಚಟುಟವಟಿಕೆಗೆ ಬೀಜ, ಗೊಬ್ಬರ ಖರೀದಿಸಲು ಹಣದ ಕೊರತೆ ಎದುರಾಗಿದೆ. ಕೇಂದ್ರ ಸರಕಾರ ನಿಗದಿ ಪಡಿಸಿದ ಎಫ್‌ಆರ್‌ಪಿಯಂತೆ ಒಂದು ಟನ್‌ ಕಬ್ಬಿಗೆ 3,200 ರೂ. ಪಾವತಿಸುವಂತೆ ಸಾಕಷ್ಟು ಬಾರಿ ಹೋರಾಟ ಮಾಡಿದರೂ ಯಾವುದೇ ಕಾರ್ಖಾನೆ ಇನ್ನೂ ಬಾಕಿ ಪಾವತಿಸಿಲ್ಲ. ಕೂಡಲೇ ಬಿಲ್‌ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳ ವಿರುದ್ಧ
ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯ ಅಧ್ಯಕ್ಷ ಲಿಂಗರಾಜ ಪಾಟೀಲ, ಉಪಾಧ್ಯಕ್ಷ ಮಹಾದೇವ ದಾನಣ್ಣನವರ, ಜಿಲ್ಲಾ ಅಧ್ಯಕ್ಷ ಗುರುಗೌಡ ಪಾಟೀಲ, ನಾರಾಯಣ ಪಾಟೀಲ, ಮಹಾದೇವ ರಾಠೊಡ, ಶಿವಾನಂದ ಬಳಗಾನೂರ, ರಾಮಲಿಂಗ ಕಾಡಪ್ಪನವರ, ವಿರೂಪಾಕ್ಷ
ಶೀನನ್ನವರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next