Advertisement

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕರಿಸಲು ಮನವಿ

12:54 PM May 09, 2018 | Team Udayavani |

ಮಹದೇವಪುರ: ಸರ್ಕಾರಗಳು ಬದಲಾದರೂ ಮಹದೇವಪುರ ಕ್ಷೇತ್ರದ ನಾಗರಿಕರು ವಸತಿ, ಮೂಲ ಸೌಕರ್ಯಕ್ಕೆ ಪರಿತಪಿಸುತ್ತಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆಶೀರ್ವದಿಸುವಂತೆ ಪಕ್ಷೇತರ ಅಭ್ಯರ್ಥಿ ನಲ್ಲೂರಹಳ್ಳಿ ಟಿ.ನಾಗೇಶ್‌ ಮತದಾರರಲ್ಲಿ ಮನವಿ ಮಾಡಿದರು.

Advertisement

ಕ್ಷೇತ್ರದ ಬಿದರಹಳ್ಳಿ ಹೋಬಳಿ ವ್ಯಾಪ್ತಿಯ ಮಂಡೂರು, ಜ್ಯೋತಿಪುರ, ಬೊಮ್ಮೆನಹಳ್ಳಿ, ಕಣ್ಣೂರು, ನಾಡಗೌಡ ಗೊಲ್ಲಹಳ್ಳಿ ಸೇರಿದಂತೆ ವಿವಿಧೆಡೆ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಪರಿಹಾರವಾಗದೆ ಉಳಿದಿವೆ. ರಸ್ತೆ, ಚರಂಡಿ, ಯುಜಿಡಿ, ಕುಡಿಯುವ ನೀರು, ವಸತಿ ಸೌಲಭ್ಯಗಳು, ಆಸ್ಪತ್ರೆ, ಶಾಲಾ ಕಾಲೇಜುಗಳ ಕೊರತೆಯಿಂದ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಸರ್ಕಾರಗಳು 60 ವರ್ಷಗಳ ಕಾಲ ಆಡಳಿತ ನಡೆಸಿದರೂ ಕ್ಷೇತ್ರದಲ್ಲಿ ಟ್ರಾಫಿಕ್‌, ಕುಡಿಯುವ ನೀರು, ಕೆರೆಗಳ ರಕ್ಷಣೆ, ವಸತಿ ಸೌಲಭ್ಯ ಸೇರಿ ಇತರೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ನಿರಾಸಕ್ತಿ ತೋರಿಸಿ ಕ್ಷೇತ್ರವನ್ನು ಹಿಂದುಳಿಯುವಂತೆ ಮಾಡಲಾಗಿದೆ ಎಂದರು.

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ವಲಸಿಗರಾಗಿದ್ದು ಕ್ಷೇತ್ರದ ಅಭಿವೃದ್ಧಿಯಲ್ಲಿ ಇಚ್ಚೆ ಇಲ್ಲ. ನಾನು ಕ್ಷೇತ್ರದ ಮಗನಾಗಿದ್ದು ಜನತೆಯ ಒಡನಾಟ ಸಾಧಿಸಿದ್ದೇನೆ. ಮತದಾರರು ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಬೇಸತ್ತಿದ್ದು ಪರ್ಯಾಯ ವ್ಯವಸ್ಥೆಗೆ ಹಾತೋರೆಯುತ್ತಿದ್ದಾರೆ.

ಮೇ.12ರಂದು ನಡೆಯುವ ಚುನಾವಣೆಯಲ್ಲಿ ಹಾಕಿ ಬ್ಯಾಟ್‌ ಮತ್ತು ಚೆಂಡಿನ ಗುರುತಿಗೆ ಮತದಾನ ಮಾಡುವ ಮೂಲಕ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು. ಸೊರಹುಣಸೆ ವೆಂಕಟೇಶ್‌, ಗೋವರ್ಧನ್‌, ವಿವೇಕ್‌, ಗುಂಡೂರು ಕೃಷ್ಣಪ್ಪ, ಬಿಡಿಎ ನಾರಾಯಣಪ್ಪ, ಪಿ.ಎಂ ನಾಗರಾಜ್‌ ಮತ್ತಿತರರು ಸೇರಿದಂತೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next