Advertisement

ಅಂಬೇಡ್ಕರ್‌ ಭವನ ಮೀಸಲು ಸ್ಥಳ ಸ್ವಚ್ಛಗೊಳಿಸಲು ಮನವಿ

05:55 AM Jun 19, 2020 | Lakshmi GovindaRaj |

ಶ್ರೀನಿವಾಸಪುರ: ಪಟ್ಟಣದ ಡಿಗ್ರಿ ಹಾಸ್ಟೆಲ್‌ಗೆ ಹೊಂದಿಕೊಂಡಿರುವ ಅಂಬೇಡ್ಕರ್‌ ಭವನಕ್ಕೆ ಮೀಸಲಿಟ್ಟ ಜಮೀನಿನಲ್ಲಿ ಬೆಳೆದಿರುವ ಮುಳ್ಳಿನ ಗಿಡ, ಕಸ ಕಡ್ಡಿಯನ್ನು ಜೆಸಿಬಿ ಯಂತ್ರದಿಂದ ಸ್ವಚ್ಛಗೊಳಿಸಲು ತಹಶೀಲ್ದಾರ್‌  ಎಸ್‌.ಎಂ.ಶ್ರೀನಿ  ವಾಸ್‌ ಜೊತೆ ದಲಿತ ಸಂಘಟನೆಗಳ ಮುಖಂಡರು ಚರ್ಚೆ ನಡೆಸಿದರು.

Advertisement

ಪಟ್ಟಣದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಭವನಕ್ಕೆಂದು ಸರ್ವೆ ನಂಬರ್‌ 49ರಲ್ಲಿ 2 ಎಕರೆ ಜಮೀನು ಮೀಸಲಿರಿಸಲಾಗಿದೆ. ಈ ಜಮೀನಿನಲ್ಲಿ  ಅಂಬೇಡ್ಕರ್‌ ಭಾವಚಿತ್ರವನ್ನು ಚಪ್ಪಡಿಯ ಮೇಲೆ ಬರೆದು ನೆಡಲಾಗಿತ್ತು. ಅದನ್ನು ಬುಧವಾರ ಜೆಸಿಬಿ ಯಂತ್ರದಿಂದ ಒಡೆದುಹಾಕಲಾಗಿತ್ತು. ಈ ಕೃತ್ಯ ಖಂಡಿಸಿ ದಲಿತ ಸಂಘಟನೆಗಳ ಮುಖಂಡರು ತಾಲೂಕು ಕಚೇರಿ ಮುಂದೆ  ಪ್ರತಿಭಟನೆ ನಡೆಸಿದ್ದರು.

ಈ ಜಮೀನಿನಲ್ಲಿ ಒಂದಿಬ್ಬರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವುದನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ಈ ಬೆಳವಣಿಗೆಯಲ್ಲಿ ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಗುರುವಾರ ಭವ ನಕ್ಕೆ ಮೀಸಲಾದ  ಜಮೀನಿನಲ್ಲಿ ಅಕ್ರಮವಾಗಿ ವಾಸವಿದ್ದವರ ಬಗ್ಗೆ ಮಾಹಿತಿ ಪಡೆದು, ಈ ಜಾಗ ಮೀಸಲಿಡಲಾಗಿದೆ, ಕಂದಾಯ ಇಲಾಖೆಗೆ ಸೇರಿದ್ದು, ಗ್ರಾಮ ಪಂಚಾಯ್ತಿ ಕೊಡುವುದಕ್ಕೆ ಬರುವುದಿಲ್ಲ.

ಆದರೂ ತಮ್ಮಲ್ಲಿ ಯಾವುದೇ ದಾಖಲೆಗಳಿದ್ದರೂ  ಕಚೇರಿಗೆ ಬನ್ನಿ ಪರಿಶೀಲಿಸೋಣ, ನ್ಯಾಯಾಲಯಕ್ಕೆ ನಾನು ಬರುತ್ತೆನೆ ಎಂದು ತಿಳಿಸಿದರು. ಒತ್ತುವರಿ ಮಾಡಿದ್ದವರು ನಾವುಬಹಳ ವರ್ಷದಿಂದ ಇದ್ದೇವೆ, ಇದನ್ನು ಬಿಟ್ಟುಕೊಡಿ ಎಂದು ಮನವಿ ಮಾಡಿದರು. ಆದರೂ ದಾಖಲೆಗಳನ್ನು ಪರಿಶೀಲಿಸೋಣ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next