Advertisement
ಶನಿವಾರ ದೇವರಾಜ ಅರಸು ಬಡಾವಣೆ ಶ್ರೀ ಬೀರಲಿಂಗೇಶ್ವರ ಭವನದಲ್ಲಿ ನಡೆದ ಕುರುಬ ಎಸ್‌ಟಿ ಹೋರಾಟ ಸಮಿತಿ ಪೂರ್ವಭಾವಿ ಸಭೆಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಎಲ್ಲಾನಾಯಕರು ರಾಜಕೀಯ ಪಕ್ಷಕ್ಕೆ ಅಂಟಿಕೊಂಡುಹುಟ್ಟಿರುವುದಿಲ್ಲ. ಜಾತಿ, ಸಮುದಾಯದಲ್ಲಿಹುಟ್ಟಿರುತ್ತಾರೆ. ಜಾತಿಯ ಋಣ ತೀರಿಸಲು ಮುಂದಾಗಬೇಕು. ಈಶ್ವರಪ್ಪ ಅವರು ಸಹ ಹುಟ್ಟತ್ತಲೇ ಬಿಜೆಪಿಯವರಾಗಿ ಹುಟ್ಟಿಲ್ಲ.ಹೋರಾಟಕ್ಕೆ ಬಲ ತುಂಬುವ ಮೂಲಕ ಜಾತಿ ಋಣ ತೀರಿಸಲು ಮುಂದೆ ಬಂದಿದ್ದಾರೆ ಎಂದರು. ಸಮಾಜಕ್ಕೆ ಸಂಬಂಧಿಸಿದ ಹೋರಾಟಗಳಿಗೆ ಅಧಿಕಾರ ಮತ್ತು ಜಾಗೃತಿ ಅವಶ್ಯಕ. ಈಶ್ವರಪ್ಪ ಅವರು ತಮಗಿರುವ ಅಧಿಕಾರದ ಮೂಲಕ ಈ ಹೋರಾಟದ ಹೊಣೆ ಹೊರಬೇಕು ಎಂದು ತಿಳಿಸಿದರು.
Related Articles
Advertisement
ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಕೊಡುವಂತೆ ಕಳೆದ 30 ವರ್ಷಗಳಿಂದ ಹೋರಾಟ ನಡೆಸಿದ್ದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ಈಗ ಕಾಗಿನೆಲೆಯ ಮತ್ತು ಹೊಸದುರ್ಗ ಶಾಖಾ ಮಠದ ಶ್ರೀಗಳು ಮುಂದಾಳತ್ವ ವಹಿಸಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನಕ್ಕೆ ತೆಗೆದುಕೊಂಡಿವೆ. ಕುಲಶಾಸ್ತ್ರ ಅಧ್ಯಯನ ಮುಗಿದ ನಂತರ ರಾಜ್ಯ ಸರ್ಕಾರದ ಒಪ್ಪಿಗೆ ಪಡೆದು, ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಕುರುಬ ಸಮಾಜ ಅತ್ಯಂತ ಹಿಂದುಳಿದ ಸಮಾಜ ಎಂದು ಬ್ರಿಟಿಷರ ಕಾಲದಲ್ಲಿ ಎಸ್‌ಟಿಯಲ್ಲಿತ್ತು ಎಂದು ಹೇಳಿದರು.
ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿ.ಎಂ. ಸತೀಶ್, ಮುಕುಡಪ್ಪ, ಜೀಹೆÌàಶ್ವರಿ, ಎಚ್.ಸಿ. ಜಯಮ್ಮ, ಪ್ರಸನ್ನಕುಮಾರ್, ಜಿಪಂಮಾಜಿ ಅಧ್ಯಕ್ಷೆ ಕೆ.ಆರ್. ಜಯಶೀಲ, ನಾಗೇಂದ್ರಪ್ಪ, ಹದಡಿ ಲಿಂಗಣ್ಣ, ಶಂಕರಪ್ಪ, ರಾಜುಗೌಡ, ಪ್ರಭಾವತಿ, ಶಶಿಕಲಾ ಇದ್ದರು.
ಪಾದಯಾತ್ರೆಗೆ ತೀರ್ಮಾನ : ಕುರುಬ ಸಮಾಜದ ಎಸ್‌ಟಿ ಮೀಸಲಾತಿಗಾಗಿ ಆಗ್ರಹಿಸಿ ದಾವಣಗೆರೆ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳ ವಿಭಾಗ ಮಟ್ಟದ ಸಮಾವೇಶವನ್ನು ಜ. 6 ರಂದು ದಾವಣಗೆರೆಯಲ್ಲಿ ಆಯೋಜಿಸಲು ಮತ್ತು ಜ.15 ರಿಂದ ಕಾಗಿನೆಲೆಯಿಂದ ಬೆಂಗಳೂರು ವರೆಗೆ ಪಾದಯಾತ್ರೆ ಕೈಗೊಳ್ಳಲು ತೀರ್ಮಾನಿಸಲಾಯಿತು.