Advertisement

ಸಕಾಲಕ್ಕೆ ಸಾರಿಗೆ ಬಸ್‌ ವ್ಯವಸ್ಥೆ ಕಲ್ಪಿಸಲು ಮನವಿ

01:52 PM Nov 12, 2019 | Suhan S |

ಭಾಲ್ಕಿ: ಬೀದರದಿಂದ ಉದಗೀರ ಮತ್ತು ಭಾಲ್ಕಿಯಿಂದ ಬೀದರಗೆ ಸರಿಯಾದ ಸಮಯಕ್ಕೆ ಸಾರಿಗೆ ಬಸ್‌ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಪದಾಧಿಕಾರಿಗಳು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಬೀದರ ವಿಭಾಗೀಯ ನಿಯಂತ್ರಣಾ ಧಿಕಾರಿಗಳಿಗೆ ಸಲ್ಲಿಸಿದರು.

Advertisement

ಗಡಿ ಜಿಲ್ಲೆಯಾದ ಬೀದರದಿಂದ ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೆ ನೂರಾರು ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಆದರೆ ಜಿಲ್ಲೆಯ ಕೇಂದ್ರವಾದ ಬೀದರಿನಿಂದ ಈ ಭಾಗಗಳಿಗೆ ಸಂಚರಿಸಲು ಸರಿಯಾದ ಸಮಯದಲ್ಲಿ ಬಸ್‌ ವ್ಯವಸ್ಥೆ ಇಲ್ಲ. ಭಾಲ್ಕಿಯಿಂದ ಬೀದರಗೆ ಮಧ್ಯಾಹ್ನ ಪ್ರಯಾಣಿಕರು ಪ್ರಯಾಣ ಮಾಡದಿದ್ದರೂ, ಬಸ್‌ಗಳ ಓಡಾಟ ಅತಿಯಾಗಿರುತ್ತದೆ. ಆದರೆ ಸಂಜೆ ವಿದ್ಯಾರ್ಥಿಗಳು, ನೌಕರಸ್ಥರು, ಸಾರ್ವಜನಿಕರು ಭಾಲ್ಕಿಯಿಂದಬೀದರಗೆ ಮತ್ತು ಮಾರ್ಗ ಮಧ್ಯದ ಹೋಬಳಿ ಕೇಂದ್ರಗಳಿಗೆ ದಟ್ಟಣೆಯಲ್ಲಿ ಪ್ರಯಾಣಿಸುತ್ತಾರೆ.

ಕಾರಣ ಮಧ್ಯಾಹ್ನದ ಅವಧಿಯಲ್ಲಿ ಖಾಲಿ ಓಡಿಸುವ ಬಸ್‌ ಗಳ ಸಂಖ್ಯೆ ಕಡಿಮೆ ಮಾಡಿ ಬೆಳಗ್ಗೆ ಮತ್ತು ಸಂಜೆ ಹೆಚ್ಚು ಸಂಖ್ಯೆ ಬಸ್‌ಗಳ ವ್ಯವಸ್ಥೆ ಮಾಡಬೇಕು. ಬೀದರದಿಂದ ಬ್ಯಾಲಹಳ್ಳ(ಕೆ) ಗ್ರಾಮಕ್ಕೆ ಬಸ್‌ ಕಲ್ಪಿಸುವ ಕುರಿತು ವಾಯಾ ಹಲಬರ್ಗಾ/ ಜ್ಯಾಂತಿಯಿಂದ ಬಸ್‌ ವ್ಯವಸ್ಥೆ ಕಲ್ಪಿಸಲು ಮನವಿ ಸಲ್ಲಿಸಿದಾಗ, ಸಾರಿಗೆ ಸೌಕರ್ಯ ಕಲ್ಪಿಸಿ, ಸಂಬಂಧಿಸಿದ ಫಾರಂ-04ಗಳನ್ನು ಮಾರ್ಪಡಿಸಿದ ಮಾಹಿತಿ ದೊರಕಿದೆ. ಆದರೆ ಅದು ಕಾಗದದಲ್ಲಿ ಮಾತ್ರ ಉಳಿದಿದೆ. ಬಸ್‌ ಸೌಕರ್ಯ ಮಾತ್ರ ಕಲ್ಪಿಸಿಕೊಡಲು ಆಗಿಲಿಲ್ಲ. ಕಾರಣ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಒದಗಿಸಬೇಕೆಂದು ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ವಿಳಂಬ ನೀತಿ ಅನುಸರಿಸಿದರೆ ಕರವೇ ವತಿಯಿಂದ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕರವೇ ತಾಲೂಕು ಅಧ್ಯಕ್ಷ ಗಣೇಶ ಪಾಟೀಲ, ಜಿಲ್ಲಾಧ್ಯಕ್ಷ ಸೋಮನಾಥ ಮುಧೊಳ, ಖಂಡಪ್ಪಾ ಪಾತರಪಳ್ಳಿ, ಸಂತೋಷ ಚಟ್ಟಿ, ಶಿವರುದ್ರ ತೀರ್ಥ, ವಿಶ್ವನಾಥ ಗೌಡ, ಸಂಜು ಯಾದವ ಮತ್ತಿತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next