Advertisement

ಸೇವೆ ಖಾಯಂ ಗೊಳಿಸುವಂತೆ ಪೌರ ಸೇವಾ ಸಂಘದಿಂದ ಡಿಸಿಎಂಗೆ ಮನವಿ

05:23 PM Jan 28, 2020 | Suhan S |

ರಾಮನಗರ: ನಗರಸಭೆ, ಪುರಸಭೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ (ಕ್ಷೇಮಾಭಿವೃದ್ದಿ) ನೌಕರರನ್ನು ಖಾಯಂಗೊಳಿಸಿ ಸೇವಾ ಭದ್ರತೆ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌. ಅಶ್ವಥ ನಾರಾಯಣ ಅವರಿಗೆ ಮನವಿ ಸಲ್ಲಿಸಿದರು.

Advertisement

ನಗರದಲ್ಲಿ 71ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿದ್ದ ಸಚಿವಅವರನ್ನು ಭೇಟಿ ಮಾಡಿದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಶಾಖೆಯ ಅಧ್ಯಕ್ಷ ಆರ್‌.ನಾಗರಾಜು, ನಗರಸಭೆ,ಪುರಸಭೆಗಳಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ (ಕ್ಷೇಮಾಭಿವೃದ್ದಿ) ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರ್ಯಾರು ಖಾಯಂ ನೌಕರರಲ್ಲ. ಸರ್ಕಾರ ತನ್ನ ಹಂತದಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ 15, 20, 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿ ಸೇವಾ ಭದ್ರತೆ ಒದಗಿಸಬೇಕು ಎಂದು ಡಿಸಿಎಂಗೆ ಮನವಿ ಮಾಡಲಾಗಿದೆ ಎಂದರು.

ಈ ನೌಕರರಿಗೆ ಸರ್ಕಾರಿ ನೌಕರರ ಮಾದರಿಯಲ್ಲಿ 3 ಹಂತದ ಬಡ್ತಿಯನ್ನು ನೀಡಲು ವೃಂದ ನೇಮಕಾತಿಯ ನಿಯಮಾವಳಿಗಳನ್ನು ಬದಲಾಯಿಸಬೇಕು. ಈ ನೌಕರರು ಮೃತ ಪಟ್ಟರೆ ಅವರ ಕುಟುಂಬದ ಪೈಕಿ ಒಬ್ಬರಿಗೆ ಉದ್ಯೋಗ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು. ಡಿ.ಗ್ರೂಪ್‌ ನೌಕರರು, ವಾಹನ ಚಾಲಕರು, ನೀರು ಸರಬರಾಜು ನೌಕರರನ್ನು ಖಾಯಂ ಗೊಳಿಸಲು ಜಿಲ್ಲಾಧಿಕಾರಿಗಳೇ ಸಕ್ಷಮ ಪ್ರಾಧಿಕಾರ ಆಗಿರುವುದರಿಂದ ಈ ನೌಕರರನ್ನು ಖಾಯಂ ಮಾಡುವಂತೆ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವಡಾ.ಸಿ.ಎನ್‌. ಅಶ್ವಥನಾರಾಯಣ್‌ ಅವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next