Advertisement

ವಿದ್ಯುತ್‌ ಸೌಲಭ್ಯ ಕಲ್ಪಿಸಲು ಎಸ್ಪಿಗೆ ಮನವಿ

02:36 PM Oct 04, 2019 | Team Udayavani |

ಬೆಳಗಾವಿ: ಗೋಕಾಕ ಫಾಲ್ಸ್‌ನ ದನದ ಓಣಿಗೆ ಸೌಭಾಗ್ಯ ಯೋಜನೆ ಅಡಿ ವಿದ್ಯುತ್‌ ಸೌಲಭ್ಯ ಕಲ್ಪಿಸುವಂತೆ ಹಾಗೂ ಪೂರ್ವಾನುಮತಿ ಪಡೆದು ಶಾಂತಿಯುತ ಪಾದಯಾತ್ರೆ ನಡೆಸಿದವರ ವಿರುದ್ಧ ವಿನಾಕಾರಣ ದಾಖಲಿಸಿರುವ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

Advertisement

ಬಿಜೆಪಿ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಪರಿಶಿಷ್ಟ ಜಾತಿ-ಜನಾಂಗದ ಸುಮಾರು 500 ಕುಟುಂಬಗಳು ವಾಸಿಸುತ್ತಿರುವ ಗೋಕಾಕ ಫಾಲ್ಸ್‌ನ ದನದ ಓಣಿಗೆ ಇಂದಿನವರೆಗೂ ವಿದ್ಯುತ್‌ ಸೌಲಭ್ಯ ಇಲ್ಲ. ಅಲ್ಲಿಯ ಬಡ ಜನರು ಕತ್ತಲಲ್ಲಿಯೇ ಬದುಕುತ್ತಿದ್ದಾರೆ. ಆ ಓಣಿಗೆ ಸೌಭಾಗ್ಯ ಯೋಜನೆ ಮಂಜೂರಾಗಿದ್ದರೂ ಅಧಿ ಕಾರಿಗಳು ಯೋಜನೆ ಜಾರಿಗೊಳಿಸದಿರುವುದನ್ನು ಖಂಡಿಸಿ ಹಾಗೂ ವಿದ್ಯುತ್‌ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು. ತಾಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆಯ ಪೂರ್ವಾನುಮತಿ ಪಡೆದು ಪಾದಯಾತ್ರೆ ನಡೆಸಲಾಗಿತ್ತು. ಪಾದಯಾತ್ರೆಯ ಆರಂಭದಿಂದ ಮುಕ್ತಾಯದವರೆಗೆ ಮತ್ತು ತಹಶೀಲ್ದಾರರಿಗೆ ಮನವಿ ಸಲ್ಲಿಸುವವರೆಗೂ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಮತ್ತು ಅವರ ಅಳಿಯ ಅಂಬಿರಾವ್‌ ಪಾಟೀಲ ಅವರ ಬೆಂಬಲಿಗರು ನಿರಂತರವಾಗಿ ಅಡ್ಡಿಪಡಿಸಿದ್ದರು. ಘೋಷಣೆ ಕೂಗಿದ್ದರು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸುವ ಸಂಚು ರೂಪಿಸಿದ್ದರು. ಈ ಎಲ್ಲ ಕಿರುಕುಳ ಸಹಿಸಿಕೊಂಡು ಪ್ರತಿಭಟನಾಕಾರರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು.

ಈಗ ಪೋಲಿಸರು ಪ್ರತಿಭಟನಾಕಾರರ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದರು. ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಅನುಮತಿ ಪಡೆದು ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿರುವುದು ಅಚ್ಚರಿ ಮೂಡಿಸಿದೆ. ಗೋಕಾಕ ತಾಲೂಕಿನಲ್ಲಿ ಪೋಲಿಸ್‌ ಇಲಾಖೆಯೂ ಮುಕ್ತವಾಗಿ ಆಡಳಿತ ನಡೆಸದಂತಹ ಪರಿಸ್ಥಿತಿ ಇದೆ ಎಂಬುದು ಮತ್ತೂಮ್ಮೆ ಸಾಬೀತಾಗಿದೆ ಎಂದರು.

ಪಾದಯಾತ್ರೆ ನಡೆಸಿದವರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಗೋಕಾಕದಲ್ಲಿ ರಾಜಕೀಯ ಒತ್ತಡ ರಹಿತ ಆಡಳಿತ ನಿರ್ವಹಿಸುವ ವಾತಾವರಣ ನಿರ್ಮಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಪ್ರವೀಣ ಪಾಟೀಲ, ಎಂ.ಟಿ. ಪಾಟೀಲ, ರಾಜು ಜಾಧವ, ದೀಪಕ ರಾಯನ್ನವರ, ಸುನಿಲ ಮುರಕಿಬಾವಿ, ನಿಂಗಪ್ಪ ನಾಯಕ, ವಿಠಲ ಬೋರನ್ನವರ, ಸುಭಾಷ ಕವಲಗಿ, ಪ್ರೇಮಾ ಚಿಕ್ಕೋಡಿ, ಮಂಜುನಾಥ ಮರೆನ್ನವರ, ದಶರಥ ಪೂಜಾರಿ, ಶ್ರೀಕಾಂತ ಪೂಜಾರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next