Advertisement

ಕುಡಿಯುವ ನೀರು ಪೂರೈಸಲು ಸದಸ್ಯರ ಮನವಿ

07:46 PM Mar 04, 2021 | Team Udayavani |

ಹೊಳಲ್ಕೆರೆ: ಪಟ್ಟಣ ನಿವಾಸಿಗಳಿಗೆ ಸಕಾಲಕ್ಕೆ ಕುಡಿಯುವ ನೀರು ಸಿಗುತ್ತಿಲ್ಲ. ಚರಂಡಿ ಸ್ವತ್ಛತೆ ಇಲ್ಲ, ಬೀದಿ ದೀಪಗಳಿಲ್ಲದೆ ಎಲ್ಲೆಡೆ ಕತ್ತಲೆ, ತಿಂಗಳು ಕಳೆದರೂ ಕಸದ ವಿಲೇವಾರಿ ಇಲ್ಲ. ಹೀಗೆ ಪುರಸಭೆ ಸದಸ್ಯರು ಶಾಸಕ ಎಂ.ಚಂದ್ರಪ್ಪ ಮುಂದೆ ಅಳಲು ತೋಡಿಕೊಂಡರು. ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಜನರ ಕೆಲಸವನ್ನುಜನಪ್ರತಿನಿ ಧಿಗಳೇ ಹೊಣೆಗಾರಿಕೆ ಹೊತ್ತು  ಮಾಡಬೇಕು. ಸಿಬ್ಬಂದಿ ಬೆನ್ನು ಬಿದ್ದು ಕೆಲಸ ತೆಗೆದುಕೊಳ್ಳಬೇಕು. ಕೆಲಸ ಮಾಡದವರನ್ನುಶಾಶ್ವತವಾಗಿ ಮನೆಗೆ ಕಳುಹಿಸಿ ಎಂದು ಖಡಕ್‌ ಉತ್ತರ ನೀಡಿದರು.

Advertisement

ಕುಡಿಯುವ ನೀರಿನ ಸಮಸ್ಯೆ ಇದೆ. ನೀರಿನ ಸಿಬ್ಬಂದಿ ವಾರದಲ್ಲಿ 2 ದಿನ ನೀರು ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಮನೆ ಕಳುಹಿಸಿ ಎಂದ ಶಾಸಕರು, ಇಲ್ಲಿನ ಸಮಸ್ಯೆಅರಿತು 300 ಕೋಟಿ ಅನುದಾನದಲ್ಲಿ ಕುಡಿಯುವ ನೀರಿನ ಶಾಶ್ವತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮಾರಿಕಣಿವೆಯಿಂದ ನೀರು ತರಲಾಗುತ್ತದೆ. ಅದಕ್ಕಾಗಿ 5 ಲಕ್ಷ ಲೀ ನೀರಿನ ಸಾಮರ್ಥ್ಯವಿರುವ 1 ಟ್ಯಾಂಕ್‌ ಕಟ್ಟಲಾಗಿದೆ. ಇನ್ನೊಂದು ಕಟ್ಟಲಿದ್ದೇವೆ. 50 ಲಕ್ಷ ಹಣದಲ್ಲಿ ಹೊಂಡವನ್ನು ಅಭಿವೃದ್ಧಿಗೊಳಿಸಿ ನೀರು ಶೇಖರಣೆ ಮಾಡಲಾಗುತ್ತದೆ. ಕೆರೆಗಳಿಗೆ ನೀರು ತುಂಬಿಸಿ ಬೋರ್‌ ನೀರಿನ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.

ಸದಸ್ಯ ಬಿ.ಎಸ್‌.ರುದ್ರಪ್ಪ ಮಾತನಾಡಿ, ಕಳೆದ ಸಭೆಯಲ್ಲಿ ನಡೆದ ಯಾವುದೇ ರೆಗ್ಯೂಲೆಶನ್‌ ಬರೆಯುತ್ತಿಲ್ಲ. ಕಳೆದ ಸಭೆಯಲ್ಲಿಮಂಡಿಸಿದ ವಿಷಯಗಳೇ ಪ್ರಸ್ತಾವವಾಗುತ್ತಿಲ್ಲ  ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯ ವಿಜಯಸಿಂಹ ಖಾಟ್ರೋತ್‌ ಮಾತನಾಡಿ, ಸಭೆಯಲ್ಲಿ ಅಜಂಡವೇ ಇಲ್ಲ. ಸರಿಯಾಗಿ ಮಾಹಿತಿ ಇಲ್ಲದೆ ಸಭೆನಡೆಸಿ ಸದಸ್ಯರಿಗೆ ಮಾಹಿತಿ  ನೀಡುವಲ್ಲಿಇಲ್ಲಿನ ಸಿಬ್ಬಂದಿ ವಂಚಿಸುತ್ತಿದ್ದಾರೆ ಎಂದು ದೂರಿದರು.

ಸೈಯದ್‌ ಸಜೀಲ್‌ ಮಾತನಾಡಿ, ಜಮೀನುಗಳನ್ನು ನಿವೇಶನಗಳಾಗಿ ಪರಿವರ್ತಿಸುವ ಬೆಂಗಳೂರಿನ ಉದ್ಯಮಿಗಳು ಬಡಾವಣೆಗಳಿಗೆ ಬೇಕಾದ ಸೌಲಭ್ಯ ಕಲ್ಪಿಸುತ್ತಿಲ್ಲ. ಪೈಲ್‌ಲೈನ್‌, ವಿದ್ಯುತ್‌ ದೀಪ ಹಾಕಿರುವ ಮಾಹಿತಿ ನಕಾಶೆಯಲ್ಲಿ ಇರಲಿದ್ದು, ಮೂಲ ಸೌಲಭ್ಯಗಳಿಲ್ಲದ ಬಡಾವಣೆಗೆ ಖಾತೆ ನೀಡಬಾರದು ಎಂದು ತಿಳಿಸಿದರು. ಉಪಾಧ್ಯಕ್ಷ ಕೆ.ಸಿ.ರಮೇಶ್‌ ಪಟ್ಟಣದ ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು. ಯಾವ ವಾರ್ಡ್‌ಗಳಲ್ಲಿ ಯಾವೆಲ್ಲ ಸಮಸ್ಯೆಗಳಿವೆ ಎನ್ನುವ ಕಡತ ಸಿದ್ಧಪಡಿಸಬೇಕು ಎಂದರು.

ಪುರಸಭೆ ಅಧ್ಯಕ್ಷ ಆರ್‌.ಎ.ಅಶೋಕ್‌ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಪಿ.ಎಚ್‌. ಮುರುಗೇಶ್‌, ಸೈಯದ್‌ ಮನ್ಸೂರ್‌, ಡಿ.ಎಸ್‌. ವಿಜಯ್‌, ಪಿ.ಆರ್‌.ಮಲ್ಲಿಕಾರ್ಜುನ್‌, ಎಚ್‌. ಆರ್‌.ನಾಗರತ್ನವೇದಮೂರ್ತಿ, ಸುಧಾ ಬಸವರಾಜ್‌, ಸವಿತ ನರಸಿಂಹ ಖಾಟ್ರೋತ್‌, ಮಮತ ಜಯಸಿಂಹ ಖಾಟ್ರೋತ್‌, ಶಭೀನ ಆಶ್ರಫ್‌ವುಲ್ಲಾ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next