Advertisement

ತುಮಕೂರು ಪಡೆಯುವಂತೆ ಹೈಕಮಾಂಡ್‌ಗೆ ಮನವಿ

02:10 AM Mar 22, 2019 | Team Udayavani |

ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್‌ ಸಂಸದರಿರುವ ಕಾರಣ ಆ ಕ್ಷೇತ್ರ ಕಾಂಗ್ರೆಸ್‌ಗೆ ಪಡೆಯುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಸಂಸದರಿಗೆ ಟಿಕೆಟ್‌ ನೀಡಲು ಪರಿಶೀಲನಾ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ತುಮಕೂರು ಕ್ಷೇತ್ರವು ಜೆಡಿಎಸ್‌ ಪಾಲಾಗಿದೆ. ಆದರೆ, ನಾವು ಕಾಂಗ್ರೆಸ್‌ಗೆ ಬಿಟ್ಟುಕೊಡುವಂತೆ ಹೈಕಮಾಂಡ್‌ನ‌ಲ್ಲಿ ಕೋರಿದ್ದು,ಯಾವ ನಿರ್ಧಾರ ಕೈಗೊಳ್ಳುತ್ತಾರೆಂದು ಕಾದು ನೋಡಬೇಕಾಗಿದೆ ಎಂದರು.

Advertisement

ಜೆಡಿಎಸ್‌ಗೆ ಸಂಪೂರ್ಣ ಬೆಂಬಲ: ಮಂಡ್ಯದಲ್ಲಿ ಸುಮಲತಾ ಅಂಬರೀಶ್‌ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಬೆಂಬಲ ಸೂಚಿಸಿಲ್ಲ. ವೈಯಕ್ತಿಕವಾಗಿ ಅಂಬರೀಶ್‌ ಅಭಿಮಾನಿಗಳಾಗಿರುವ ಕೆಲವರು ಹೋಗಿರಬಹುದು. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದು, ಒಪ್ಪಂದದಂತೆ ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಈ ಸಂಬಂಧ ಜೆಡಿಎಸ್‌ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ನೀಡುವಂತೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದರು.

ದೇವೇಗೌಡರ ಸ್ಪರ್ಧೆಗೆ ಮೂಡದ ಒಮ್ಮತ

ತುಮಕೂರು : ಎಚ್‌.ಡಿ.ದೇವೇಗೌಡರು ಮಾ.25ರಂದು ತುಮಕೂರು ಲೋಕಸಭಾ ಕ್ಷೇತ್ರಕ್ಕೆ
ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದ್ದು, ಜೆಡಿಎಸ್‌ ಮುಖಂಡರು ದೋಸ್ತಿ ಪಕ್ಷದ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಆದರೆ, ಈ ಬಗ್ಗೆ ಎರಡೂ ಪಕ್ಷಗಳಲ್ಲಿ ಒಮ್ಮತ ಮೂಡಿಲ್ಲ ಎನ್ನಲಾಗಿದೆ. ಗುರುವಾರವೂ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಬೆಂಗಳೂರಿಗೆ ಕಾರ್ಯಕರ್ತರೊಂದಿಗೆ ಹೋಗಿ ಒತ್ತಡ ಹಾಕಿಸಿದ್ದಾರೆ. ತುಮಕೂರಿನಲ್ಲಿ ಸಚಿವ ಎಸ್‌. ಆರ್‌.ಶ್ರೀನಿವಾಸ್‌ ಕಾಂಗ್ರೆಸ್‌ ಮುಖಂಡರನ್ನುಭೇಟಿ ಮಾಡಿ ಚರ್ಚಿಸಿದ್ದಾರೆ. ಮಾಜಿ ಶಾಸಕ ಎಸ್‌.ರಫೀಕ್‌ ಅಹಮದ್‌ ಮನೆಯಲ್ಲಿ ಜೆಡಿಎಸ್‌ ಮುಖಂಡರು ಮತ್ತು ಕಾಂಗ್ರೆಸ್‌ ಮುಖಂಡರು ಸೇರಿ ಸಭೆ ಮಾಡಿದ್ದು, ಈ ಸಭೆ ಒಮ್ಮತಕ್ಕೆ ಬಂದಿಲ್ಲ. ಸಂಸದ ಮುದ್ದಹನುಮೇಗೌಡರಿಗೆ ಬಿಟ್ಟುಕೊಡಬೇಕೆಂದು ಪರಮೇಶ್ವರ್‌ ಒತ್ತಾಯ ಹಾಕುತ್ತಿದ್ದಾರೆ. ಜೆಡಿಎಸ್‌ಗೆ ನಾವು ಬೆಂಬಲಿಸುವ ಬಗ್ಗೆ ವರಿಷ್ಠರಿಂದ ಯಾವುದೇ ಆದೇಶ ಬಂದಿಲ್ಲ. ಅಲ್ಲಿಂದ ಆದೇಶ ಬಂದ ನಂತರ ನಾವು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆಂದು ತಿಳಿದುಬಂದಿದೆ.

ದೇವೇಗೌಡರದ್ದು ರಾಕ್ಷಸ ಕುಟುಂಬ. ಅವರು ಯಾವುದಕ್ಕೂ, ಯಾರಿಗೂ ಹೆದರುವುದಿಲ್ಲ. ಅವರು ಜೀವನದಲ್ಲಿ ಗೆಲ್ಲಲಿ, ಸೋಲಲಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ತುಮಕೂರಿನಲ್ಲಿಯೂ ಹೋರಾಟ ಮಾಡಿ ಗೆಲ್ಲುತ್ತಾರೆ.
● ಎಸ್‌.ಆರ್‌. ಶ್ರೀನಿವಾಸ್‌, ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next