Advertisement

ಮಹಿಳಾ ಸಂಘಗಳ ಸಾಲಮನ್ನಾ ಮಾಡಲು ಆಗ್ರಹ

02:30 PM Oct 04, 2019 | Suhan S |

ಗೋಕಾಕ: ನೆರೆ ಸಂತ್ರಸ್ತರಿಗೆ ಪರಿಹಾರ ಧನದ ಚೆಕ್‌ ಮತ್ತು ಸಹಾಯಧನ ನೀಡಬೇಕು ಮತ್ತು ಮಹಿಳಾ ಸಂಘಗಳಸಾಲ ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿ ಗುರುವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗೋಕಾಕ ತಾಲೂಕು ಘಟಕ ವತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

Advertisement

ರೈತ ಸಂಘದ ರಾಜ್ಯ ಸಂಚಾಲಕ ಗಣಪತಿ ಇಳಿಗೇರ ಮಾತನಾಡಿ, ಗೋಕಾಕ ತಾಲೂಕಿನಲ್ಲಿ ಅತಿಯಾದ ಮಳೆಯಿಂದಾಗಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾಳಾಗಿದ್ದು ಜನರು ಪರದಾಡುವಂತಾಗಿದೆ. ಇನ್ನೂವರೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಯಾವುದೇ ಪರಿಹಾರ ಧನ ನೀಡದೇ ಇರುವುದು ಖಂಡನೀಯ. ಶೀಘ್ರಸರ್ಕಾರ ಎಚ್ಚೇತ್ತು ನೆರೆ ಪೀಡಿತ ಸಂತ್ರಸ್ತರಿಗೆ ಪರಿಹಾರಧನದ ಚೆಕ್‌ನೀಡಬೇಕೆಂದು ಒತ್ತಾಯಿಸಿದರು. ಮಹಿಳೆಯರು ಹಲವಾರು ಸಂಘಗಳಲ್ಲಿ ಸಾಲ ಮಾಡಿದ್ದು ಅದನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿದರು. ಒಂದು ವೇಳೆ ಈ ಬೇಡಿಕೆಗಳು ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸತ್ತೇಪ್ಪ ಮಲ್ಲಾಪೂರೆ, ಪ್ರಕಾಶ ಹಾಲನ್ನವರ, ಮುತ್ತೇಪ್ಪ ಬಾಗನ್ನವರ, ಕುಮಾರ ತಿಗಡಿ, ಶಂಕರ ಮದಿಹಳ್ಳಿ, ಮಹಾದೇವ ಗುಡೇರ, ಮಲ್ಲಿಕಾರ್ಜುನ ಇಳಿಗೇರ, ಮುತ್ತೇಪ್ಪ ಗುರಬನ್ನವರ, ಶಿವು ಪಾಟೀಲ, ಮಂಜುನಾಥ ಪೂಜೇರಿ, ಭರಮು ಖೇಮಲಾಪೂರೆ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next