Advertisement

ಗೋಶಾಲೆ ಕಾರ್ಮಿಕರಿಗೆ ಕೂಲಿ ನೀಡಲು ಮನವಿ

11:59 AM Jun 02, 2020 | mahesh |

ಮೊಳಕಾಲ್ಮೂರು: ತಾಲೂಕಿನ ಮುತ್ತಿಗಾರಹಳ್ಳಿ ಮತ್ತು ಮಾರಮ್ಮನಹಳ್ಳಿ ಗೋಶಾಲೆಗಳಲ್ಲಿ ಕಳೆದ ಬಾರಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಕೂಲಿ ಹಣ
ನೀಡಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷವು ತಾಲೂಕು ಕಚೇರಿ ಆವರಣದಲ್ಲಿ ತಹಶೀಲ್ದಾರ್‌ ಎಂ.ಬಸವರಾಜ್‌ ಅವರಿಗೆ ಮನವಿ ಸಲ್ಲಿಸಿತು.
ಸಿಪಿಐನ ತಾಲೂಕು ಪ್ರಧಾನ ಕಾರ್ಯದರ್ಶಿ ಜಾಫರ್‌ ಷರೀಫ್‌ ಮಾತನಾಡಿ, ಬಡ ಕೂಲಿ ಕಾರ್ಮಿಕರು ಗೋಶಾಲೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಅನುಮತಿಯ ಮೇರೆಗೆ ಸಗಣಿ ಎತ್ತುವ ಕೆಲಸ ಮಾಡಿರುತ್ತಾರೆ. ಮುತ್ತಿಗಾರಹಳ್ಳಿ ಮತ್ತು ಮಾರಮ್ಮನಹಳ್ಳಿ ಗೋಶಾಲೆಗಳಲ್ಲಿ ಒಟ್ಟು 36 ದಿನಗೂಲಿಗಳು 3 ತಿಂಗಳು 16 ದಿನಗಳವರೆಗೂ ಗೋಶಾಲೆಗಳಲ್ಲಿನ ಸಗಣಿ ಗೊಬ್ಬರ ಎತ್ತುವುದು ಮತ್ತು ಗೋವುಗಳು ಕುಡಿಯುವ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿಸಿಕೊಂಡು ಎರಡು ವರ್ಷಗಳು ಕಳೆದರೂ ಈವರೆಗೂ ಈ ಕೂಲಿ ಕಾರ್ಮಿಕರಿಗೆ ಕೂಲಿ ಹಣ ನೀಡದೆ ವಂಚಿಸಲಾಗಿದೆ ಎಂದು ದೂರಿದರು.

Advertisement

ಕೂಲಿ ಹಣಕ್ಕಾಗಿ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳ ಕಚೇರಿಗಳಿಗೆ ಅಲೆದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಪ್ರಸ್ತುತ
ಈ ಕೆಲಸಗಾರರು ಕೊರೊನಾದಿಂದ ಯಾವುದೇ ಕೆಲಸವಿಲ್ಲದೆ ಸಂಕಷ್ಟದಲ್ಲಿ ಜೀವನ ಸಾಗಿಸಲಾಗುತ್ತಿದೆ.  ಈ ಕೂಲಿಕಾರ್ಮಿಕರ ಜೀವನೋಪಾಯಕ್ಕಾಗಿ ಕೂಡಲೇ ನಿಲುಗಡೆಯಾದ ಕೂಲಿ ಹಣವನ್ನು ನೀಡಬೇಕಾಗಿದೆ. ಮುಂದಿನ ದಿನಗಳಲ್ಲಿ ಕೂಲಿ ಹಣವನ್ನು ನೀಡದಿದ್ದಲ್ಲಿ ತಾಲೂಕು ಕಚೇರಿಯ ಆವರಣದಲ್ಲಿ ಧರಣಿ ಸತ್ಯಾಗ್ರಹ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.  ಪದಾ ಕಾರಿಗಳಾದ ಮಲ್ಲಯ್ಯ, ಪೂಜಾರಿತಿಪ್ಪೇಸ್ವಾಮಿ, ರಾಜಣ್ಣ ಮೊದಲಾದವರು
ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next