Advertisement

ಅಂಡರ್‌ಪಾಸ್‌ ನಿರ್ಮಾಣಕ್ಕೆ ಆಗ್ರಹ

07:33 AM Jun 05, 2020 | Lakshmi GovindaRaj |

ಚನ್ನಪಟ್ಟಣ: ತಾಲೂಕಿನ ಪಟ್ಲು ಮೂಲಕ ಕೋಮನಹಳ್ಳಿ, ದೇವರಹೊಸಹಳ್ಳಿಗೆ ಸಾಗುವ ರಸ್ತೆ ಬಂದ್‌ ಮಾಡಿ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ ಅಂಡರ್‌ಪಾಸ್‌ ನಿರ್ಮಾಣಕ್ಕೆ  ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ನಿತ್ಯ ನೂರಾರು ಮಂದಿ ಈ ರಸ್ತೆಯಿಂದಲೇ ಸಂಚರಿಸುತ್ತಿದ್ದು, ಇದೀಗ ರಸ್ತೆ ಮುಚ್ಚಿ ಹೆದ್ದಾರಿ ಕಾಮಗಾರಿ ನಡೆಸಲಾಗುತ್ತಿದೆ.

Advertisement

ಪಟ್ಲು ಭಾಗದಿಂದ ರಾಮನಗರ ಬೆಂಗಳೂರು ಕಡೆಗೆ ಈ ರಸ್ತೆ  ಬಳಕೆಯಾಗುತ್ತಿದೆ. ರಸ್ತೆಯಿದ್ದರೂ ಮುಂದಾಲೋಚನೆಯಿಲ್ಲದೇ ಕಾಮಗಾರಿ ನಡೆಸುತ್ತಿರುವ ಸಂಸ್ಥೆಯ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿ ಭೂಮಿ ಅಕ್ಕಪಕ್ಕದಲ್ಲಿದ್ದು ನಿತ್ಯ ಈ ರಸ್ತೆ ಅವಶ್ಯವಾಗಿದೆ. ಇಲ್ಲಿ  ಅಂಡರ್‌ಪಾಸ್‌ ಮಾಡದಿದ್ದರೆ ನಾಲ್ಕೈದು ಕಿ.ಮೀ. ಬಳಸಿ ಹೋಗಬೇಕು.

ಹೀಗಾಗಿ ಕಾಮಗಾರಿ ನಿಲ್ಲಿಸಿ, ಯೋಜನೆಯಲ್ಲಿ ಅಂಡರ್‌ಪಾಸ್‌ ಸೇರ್ಪಡೆ ಮಾಡಿ, ನಂತರ ಕಾಮಗಾರಿ ಆರಂಭಿಸ ಬೇಕೆಂದು ಸಂದರ್ಭದಲ್ಲಿ ಗ್ರಾಮಸ್ಥರು ಒತ್ತಾಯಿಸಿದರು. ಕಾಮಗಾರಿ ನಿರ್ವಹಿಸುತ್ತಿದ್ದ ಸಂಸ್ಥೆಯ ವ್ಯವಸ್ಥಾಪಕರು ಸ್ಥಳಕ್ಕೆ ಭೇಟಿ ನೀಡಿ, ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಆದರೆ ಪ್ರತಿಭಟನಾಕಾರರು  ಮಣಿಯಲಿಲ್ಲ. ಅಂಡರ್‌ಪಾಸ್‌ ಮಾಡಲೇಬೇಕು.

ಜತೆಗೆ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ ವಾಪಾಸಾಗಿದ್ದಾರೆ. ದೇವರಹೊಸಹಳ್ಳಿ ಚೇತನ್‌, ಗಿರೀಶ್‌, ರಾಂಪುರ ರಾಜಣ್ಣ,  ಸ್ವಾಮಿ, ಕೋಮನಹಳ್ಳಿ  ಜಯರಾಜ್‌, ಗುರು, ಪಟ್ಲು ನಾಗೇಂದ್ರ, ಕಾಂತರಾಜು ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next