Advertisement

ಪಾರ್ಕ್‌ಗಳಲ್ಲಿ ರಂಗತಾಲೀಮಿಗೆ ಮನವಿ

11:30 AM Aug 11, 2018 | |

ಬೆಂಗಳೂರು: ರಾಜಧಾನಿಯಲ್ಲೀಗ ರಂಗ ಚಟುವಟಿಕೆಗೆ ಜಾಗದ ಕೊರತೆ ಎದುರಾಗಿದೆ. ರವೀಂದ್ರ ಕಲಾಕ್ಷೇತ್ರ ಬಿಟ್ಟರೆ ಉಳಿದು ಕಡೆಗಳಲ್ಲಿ ನಾಟಕಗಳ ತಾಲೀಮಿಗೂ ಸ್ಥಳವಕಾಶ ಇಲ್ಲ. ಹೀಗಾಗಿ, ಇದು ರಂಗಭೂಮಿ ಕಲಾವಿದರನ್ನು ಚಿಂತೆಗೀಡು ಮಾಡಿದೆ.

Advertisement

ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ನಾಟಕ ಅಕಾಡೆಮಿ, 198 ವಾರ್ಡ್‌ಗಳ ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ಪಾರ್ಕ್‌ಗಳಲ್ಲಿ ಚಿಕ್ಕ ವೇದಿಕೆಗಳಿದ್ದು, ಇವುಗಳನ್ನು ರಂಗತಾಲೀಮು ಬಳಕೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದೆ. ಸಿಲಿಕಾನ್‌ ಸಿಟಿಯಲ್ಲಿ ರಂಗ ಚಟುವಟಿಕೆಗಳಿಗೆ ಬರವಿಲ್ಲ. ಹಲವು ತಂಡಗಳಿದ್ದು, ಚಟುವಟಿಕೆಗಳು ನಿರಂತರವಾಗಿರುತ್ತವೆ. ಆದರೆ, ಈ ತಂಡಗಳಿಗೆ ತಾಲೀಮು ನಡೆಸುವುದೆಲ್ಲಿ ಎನ್ನುವುದೇ ಸಮಸ್ಯೆಯಾಗಿದೆ.

ಕಲಾಕ್ಷೇತ್ರಕ್ಕೆ ಭಾರೀ ಬೇಡಿಕೆ: ಕನ್ನಡ ಭವನಕ್ಕೆ ಹೊಂದಿಕೊಂಡಿರುವ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಅಕಾಡೆಮಿಯ ಮೂರು ತಾಲೀಮು ಕೊಠಡಿಗಳಿವೆ. ಆದರೆ ಈ ಕೊಠಡಿಗಳಿಗೆ ಬೇಡಿಕೆ ಜಾಸ್ತಿ. ನಗರದಲ್ಲಿ ಅಂದಾಜು 200ಕ್ಕೂ ಅಧಿಕ ರಂಗ ತಂಡಗಳಿದ್ದು, ಎಲ್ಲವೂ ಇದನ್ನೇ ಅವಲಂಬಿಸಬೇಕೆನ್ನುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ನಗರದ ಹಲವು ಬಡಾವಣೆಗಳ ಉದ್ಯಾನವನಗಳಲ್ಲಿರುವ ವೇದಿಕೆಗಳನ್ನು ಬಳಸಿಕೊಳ್ಳುವ ಬಗ್ಗೆ ಅಕಾಡೆಮಿ ಮನವಿಗೆ ಮುಂದಾಗಿದೆ.

ಸಂಜೆ ವೇಳೆ ಅವಕಾಶ ನೀಡಿ: ಬಿಬಿಎಂಪಿ ನಿರ್ಮಾಣ ಮಾಡಿರುವ ಬಹುತೇಕ ಉದ್ಯಾನವನಗಳಲ್ಲಿನ ವೇದಿಕೆಗಳಲ್ಲಿ ವಿದ್ಯುತ್‌ ಸಂಪರ್ಕವಿಲ್ಲ. ಕನಿಷ್ಠ ಲೈಟ್‌ಗಳನ್ನಾದರೂ ಅಳವಡಿಸಿ, ಸಂಜೆ ಸಮಯದಲ್ಲಿ ರಂಗತಾಲೀಮು ಮತ್ತು ಪೂರ್ವಸಿದ್ಧತೆ ನಡೆಸಲು ಅವಕಾಶ ನೀಡಿದರೆ ಸಾಕು. ರಂಗ ಬೆಳವಣಿಗೆಗೂ ಪೂರಕವಾಗಲಿದೆ ಎಂದು ಅಕಾಡೆಮಿ ಅಧಿಕಾರಿಗಳು ಹೇಳುತ್ತಾರೆ.

ರಂಗಾಸಕ್ತಿ ಬೆಳೆಸಲೂ ಸಹಕಾರಿ: ಉದ್ಯಾನವನದಲ್ಲಿರುವ ವೇದಿಕೆಗಳನ್ನು ರಂಗತಾಲೀಮು ಬಳಕೆಗೆ ನೀಡಿದರೆ, ಸಾರ್ವಜನಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ನಾಟಕ ನೋಡುವ ಅಭಿರುಚಿ ಹೆಚ್ಚಾಗಲಿದೆ. ರಂಗಸಕ್ತಿಯೂ ಹೆಚ್ಚಲಿದೆ. ವಾಯು ವಿಹಾರಕ್ಕೆ ಹಿರಿಯರ ಜತೆ ಪುಟ್ಟ ಮಕ್ಕಳು ಬರುತ್ತಾರೆ. ಮಕ್ಕಳಿಗೂ ರಂಗತಾಲೀಮು ನೋಡುವ ಅವಕಾಶ ಸಿಗದಲಿದೆ. ಮುಂದೊಂದು ದಿನ ಈ ಮಕ್ಕಳು ರಂಗಭೂಮಿಯಲ್ಲಿ ಮತ್ತು ಸಿನಿಮಾರಂಗದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯುವ ಅವಕಾಶವು ಸಿಗಲಿದೆ ಎಂದು ಹಿರಿಯ ರಂಗ ನಿರ್ದೇಶಕ ಬಿ.ವಿ.ರಾಜರಾಂ ಹೇಳುತ್ತಾರೆ.

Advertisement

ನಗರದಲ್ಲಿ ಹಲವು ರಂಗ ತಂಡಗಳಿದ್ದು, ಅವುಗಳಿಗೆ ರಂಗ ತಾಲೀಮು ನಡೆಸಲು ಜಾಗದ ಕೊರತೆ ಉಂಟಾಗಿದೆ. ಹೀಗಾಗಿ ಬಿಬಿಎಂಪಿ ಪಾರ್ಕ್‌ಗಳಲ್ಲಿರುವ ಪುಟ್ಟ ಉದ್ಯಾನವನದ ಬಳಕೆಗಾಗಿ, ಅಕಾಡೆಮಿ ಮೇಯರ್‌ ಅವರಿಗೆ ಪತ್ರಬರೆದಿದೆ.
-ಲೋಕೇಶ್‌, ನಾಟಕ ಅಕಾಡೆಮಿ ಅಧ್ಯಕ್ಷ

ಉದ್ಯಾವನಗಳಲ್ಲಿರುವ ಪುಟ್ಟ ವೇದಿಕೆಗಳ ಬಳಕೆ ಮಾಡಿಕೊಳ್ಳುವ ಸಂಬಂಧ ನಾಟಕ ಅಕಾಡೆಮಿ ಮೇಯರ್‌ ಅವರಿಗೆ ಮನವಿ ಮಾಡಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಇವುಗಳ ನಿರ್ವಹಣೆ ಜವಾªರಿಯನ್ನು ಕೂಡ ಒಂದು ಇಲಾಖೆಗೆ ವಹಿಸಬೇಕು.
-ಶ್ರೀನಿವಾಸ್‌ ಜಿ ಕಪ್ಪಣ್ಣ, ಹಿರಿಯ ರಂಗಕರ್ಮಿ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next