Advertisement

ಬಗರ್‌ಹುಕುಂ ಅರ್ಜಿ ಶೀಘ್ರ ವಿಲೇವಾರಿ ಮಾಡಲು ಆಗ್ರಹ

05:02 PM Apr 01, 2022 | Team Udayavani |

ಚಿಕ್ಕಮಗಳೂರು: ಸರ್ಕಾರಿ ಜಾಗದ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿರುವ ಕುಟುಂಬಗಳಿಗೆ 94(ಸಿ) ಅಡಿಯಲ್ಲಿ ಹಕ್ಕುಪತ್ರ ನೀಡಬೇಕು ಹಾಗೂ ಫಾರಂ ನಂ.53,57ರಲ್ಲಿ ಬಗರ್‌ಹುಕುಂ ಜಮೀನು ಸಕ್ರಮಕ್ಕೆ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಿ ಸಕ್ರಮಕ್ಕೆ ಕ್ರಮ ವಹಿಸಬೇಕೆಂದು ಆಗ್ರಹಿಸಿ ಜಾಗರ ಹೋಬಳಿ ಹೊಸಂಬಳ ಗ್ರಾಮದ ಪರಿಶಿಷ್ಟ ಸಮುದಾಯದ ನಿವಾಸಿಗಳು ಗುರುವಾರ ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ಗುರುವಾರ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ಬಳಿಕ ಕೆ.ಟಿ. ರಾಧಾಕೃಷ್ಣ ಮಾತನಾಡಿ, ತಾಲೂಕಿನ ಜಾಗರ ಹೋಳಿಯ ಹೊಸಂಬಳ ಗ್ರಾಮ ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮವಾಗಿದೆ. ಆದರೆ ಗ್ರಾಮಕ್ಕೆ ಸರಿಯಾದ ಮೂಲ ಸೌಕರ್ಯಗಳಿಲ್ಲ, ಪರಿಶಿಷ್ಟ ಜಾತಿಯ ಸುಮಾರು 50 ಕುಟುಂಬಗಳು ಇಲ್ಲಿದ್ದು, ಸುಗಡವಾನಿ ಗ್ರಾಮದ ಸರ್ವೆ ನಂಬರ್‌ 173, 183 ಮತ್ತು ಶಿರವಾಸೆ ಗ್ರಾಮದ ಸರ್ವೆ ನಂಬರ್‌ 305, 306ರಲ್ಲಿ ವಾಸದ ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಅಲ್ಲದೇ ಕೆಲ ನಿವಾಸಿಗಳು ಜೀವನೋಪಾಯಕ್ಕಾಗಿ 1-2 ಎಕರೆ ಜಮೀನು ಕೃಷಿ ಮಾಡಿದ್ದು, ಇಲ್ಲಿನ ಮನೆ ಹಾಗೂ ಜಮೀನುಗಳಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ. ನಿವಾಸಿಗಳು ಸಲ್ಲಿಸಿದ ಅರ್ಜಿಗಳಿಗೆ ಇದುವರೆಗೂ ಕಂದಾಯ ಇಲಾಖೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು. ನಿವಾಸಿಗಳು ಜಮೀನು ಸಕ್ರಮಗೊಳಿಸಲು ಸರ್ಕಾರ ನಿಗ ದಿಪಡಿಸಿದ ಫಾರಂ. ನಂ.50, 53, 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ವಾಸದ ಮನೆಗಳನ್ನು ಸಕ್ರಮಗೊಳಿಸಲು 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಗ್ರಾಮಸ್ಥರಿಗೆ ಪರಿಹಾರ ಸಿಕ್ಕಿಲ್ಲ, ಸರ್ಕಾರಿ ಕಚೇರಿಗಳಿಗೆ ಅನೇಕ ವರ್ಷಗಳಿಂದ ಅಲೆಯುತ್ತಿದ್ದಾರೆ. ಭೂಮಿ, ಮನೆ ಮಂಜೂರಾಗಲಿ ಅಥವಾ ಮೂಲ ಸೌಕರ್ಯಗಳಾಗಲಿ ಗ್ರಾಮಕ್ಕೆ ಸಿಕ್ಕಿಲ್ಲ. ಆ ನಿಟ್ಟಿನಲ್ಲಿ ಗ್ರಾಮದ ಜನರಿಗೆ ಅಕ್ರಮ ಸಕ್ರಮದಡಿ ಮನೆ ಹಾಗೂ ಬಗರ್‌ ಹುಕುಂ ಅಡಿಯಲ್ಲಿ ಭೂಮಿ ಮಂಜೂರುಗೊಳಿಸುವಂತೆ ಮನವಿ ಮಾಡಿದರು.

ಗ್ರಾಮಸ್ಥರಾದ ದೇವರಾಜ್‌, ಮಂಜುನಾಥ, ರವಿ, ಧರ್ಮೇಶ, ಹರೀಶ್‌ ಮಿತ್ರಾ, ಚಂದ್ರು, ಕೆ.ಬಿ. ಸುಧಾ, ಕರ್ನಾಟಕ ಕ್ರಿಶ್ಚಿಯನ್‌ನ ಘಟಕದ ಜಿಲ್ಲಾಧ್ಯಕ್ಷ ಜೋಸೆಫ್‌, ಮೀನಾಕ್ಷಿ, ಮಂಜುಳಾ, ಮೋಹನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next