Advertisement

ಉದ್ಯೋಗ ಸಾಲ ಸಬ್ಸಿಡಿ ಬಿಡುಗಡೆಗೆ ಮನವಿ

05:03 PM Jun 16, 2020 | Suhan S |

ಬೈಲಹೊಂಗಲ: ಎಸ್‌.ಸಿ, ಎಸ್‌.ಟಿ ಜನಾಂಗದ ಸ್ವಯಂ ಉದ್ಯೋಗ ಕೈಗೊಳ್ಳುವ ಫಲಾನುಭವಿಗಳ 2019-20 ನೇ ಸಾಲಿನ ಸಬ್ಸಿಡಿ ಹಣ ರಾಜ್ಯದ ಆಯಾ ಜಿಲ್ಲೆಗಳ ನಿಗಮಕ್ಕೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಅಂಬೇಡ್ಕರ್‌ ಯುವ ಸೇನೆ ಪದಾಧಿಕಾರಿಗಳು ಸೋಮವಾರ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

ಎಸ್‌.ಸಿ,ಎಸ್‌.ಟಿ ಜನಾಂಗದವರು 2019-20 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಪಡೆಯಲು ಅಂಬೇಡ್ಕರ್‌ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದು, ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆ ಮಾಡಿ, ಫಲಾನುಭವಿಗಳ ಅರ್ಜಿಯು ನಿಗಮದಿಂದ ಮಂಜೂರಾಗಿ ಬ್ಯಾಂಕಿಗೆ ಬಂದಿವೆ. ಸಬ್ಸಿಡಿ ಹಣಕ್ಕಾಗಿ ಬ್ಯಾಂಕಿನವರು ಹಣ ಮಂಜೂರಾತಿಗೆ ಜಿಲ್ಲಾ ನಿಗಮಕ್ಕೆ ಕಳಿಸಿದರೂ ಈ ವರೆಗೆ ಬ್ಯಾಂಕಿಗೆ ಯಾವುದೇ ರೀತಿಯ ಮಾಹಿತಿ ಬಂದಿಲ್ಲ. ಇದರಿಂದ ಬಡ ಕುಟುಂಬದಿಂದ ಬಂದಿರುವ ಫಲಾನುಭವಿಗಳಿಗೆ ತೊಂದರೆಯಾಗಿದೆ. ಕೂಡಲೇ ನಿರ್ದೇಶನ ನೀಡಿ ಸಬ್ಸಿಡಿ ಮಂಜೂರಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಪರಶುರಾಮ ರಾಯಬಾಗ, ವಿನೋದ ಸವದತ್ತಿ, ರಾಜೇಶ ತೊರಗಲ್ಲ, ಉಮೇಶ ದೊಡಮನಿ, ರಾಜು ರಾಯಬಾಗ, ವಿಶಾಲ ಸವದತ್ತಿ, ಪರಶುರಾಮ ಬನ್ನಿಗಿಡದ, ನಾಗರಾಜ ಅಗಾಸಿ, ಬಸವರಾಜ ಕಿತ್ತೂರ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next