ಬೆಂಗಳೂರು: ಮುಂಬರುವ ಬಜೆಟ್‌ನಲ್ಲಿ 3000 ಹೊಸ ಬಿಎಂಟಿಸಿ ಬಸ್‌ಗಳ ಖರೀದಿಗೆ ಒಪ್ಪಿಗೆ ನೀಡುವಂತೆ ಮುಖ್ಯಮಂತ್ರಿ ಯವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬಿಎಂಟಿಸಿ ಕರ್ತವ್ಯದಲ್ಲಿ ದಕ್ಷತೆ- ಪ್ರಾಮಾಣಿಕತೆ ತೋರಿದ 50 ಮಂದಿ ಚಾಲಕರು- ನಿರ್ವಾಹಕರಿಗೆ ನಗರದಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, “”ಬೆಂಗಳೂರು ನಗರ ವ್ಯಾಪ್ತಿ ಈಗ 25 ಕಿಮೀ ದೂರಕ್ಕೆ ವಿಸ್ತಾ¤ರಗೊಂಡಿದೆ. ಇನ್ನೂ ಉತ್ತಮ ಗುಣಮಟ್ಟದ ಸಂಚಾರ ಸೇವೆ ಕಲ್ಪಿಸುವ ಸಲುವಾಗಿ ಹೊಸದಾಗಿ 3000 ಬಸ್‌ಗಳ ಖರೀದಿಗೆ ಒಪ್ಪಿಗೆ ನೀಡಲು ಮನವಿ ಮಾಡಲಾಗುವುದು,” ಎಂದು ಹೇಳಿದರು.
ರಸ್ತೆಗಳಿಯಲಿವೆ 1650 ಬಸ್‌ಗಳು: “ಪ್ರಸ್ತುತ ಬಹುತೇಕ ಕಡೆ ಬಿಎಂಟಿಸಿ ಬಸ್‌ಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಹಸಿರು ಪೀಠ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿರುವುದರಿಂದ ಸುಮಾರು 1650 ಬಸ್‌ಗಳ ಸಂಚಾರಕ್ಕೆ ಎದುರಾಗಿದ್ದ ತೊಡಕು ನಿವಾರಣೆಗೊಂಡಿದೆ. ಮುಂದಿನ ತಿಂಗಳು ಈ ಬಸ್‌ಗಳು ನಗರದಲ್ಲಿ ರಸ್ತೆಗಿಳಿಯಲಿವೆ,” ಎಂದು ರಾಮಲಿಂಗಾರೆಡ್ಡಿ ತಿಳಿಸಿದರು. ಬಿಎಂಟಿಸಿ ಅಧ್ಯಕ್ಷ ನಾಗರಾಜು ಯಾದವ್ ಮಾತನಾಡಿ, “ಬಿಎಂಟಿಸಿ ಸಂಸ್ಥೆಯು ಬೆಂಗಳೂರು ನಗರದ ಜೀವನಾಡಿಯಾಗಿ ಬೆಳೆದಿದೆ.
ಬಸ್‌ನಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಕಡೆಗೆ ಹೆಚ್ಚಿನ ಗಮನಹರಿಸಲಾಗುವುದು. ತಮ್ಮ ಅಧಿಕಾರಾವಧಿ ಮುಗಿಯುವುದರೊಳಗೆ ಬಿಎಂಟಿಸಿಯನ್ನು ಹೆಚ್ಚಿನ ಲಾಭದಾಯಕ ಸಂಸ್ಥೆಯಾಗಿ ಬದಲಿಸಲಾಗುವುದು,” ಎಂದು ತಿಳಿಸಿದರು. ಬಿಎಂಟಿಸಿಯು ತನ್ನ 20ನೇ ವರ್ಷಾಚರಣೆ ಪ್ರಯುಕ್ತ ಹೊರತಂದಿರುವ ವಿಶೇಷ ಸಂಚಿಕೆ “ಸಂಚಾರ’ ರಾಮಲಿಂಗಾರೆಡ್ಡಿ ಬಿಡುಗಡೆ ಗೊಳಿಸಿದರು. ಬಿಎಂಟಿಸಿ ಉಪಾಧ್ಯಕ್ಷ ಗೋವಿಂದರಾಜು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್ ಕೌರ್ ಇದ್ದರು.
ಸ್ಮಾರ್ಟ್ ಕಾಡ್ ಫೆಬ್ರವರಿಯಿಂದ ಜಾರಿ
ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಸ್ಮಾರ್ಟ್‌ಕಾರ್ಡ್ ಸಿದ್ಧಪಡಿಸ ಲಾಗಿದ್ದು, ಫೆಬ್ರವರಿ ತಿಂಗಳಿನಿಂದ ಈ ಕಾರ್ಡ್‌ಗಳು ಚಲಾವಣೆಗೆ ಬರಲಿವೆ. ಆ ಮೂಲಕ, ಇಡೀ ದೇಶದಲ್ಲೇ ಮೊದಲ ಬಾರಿಗೆ ಸ್ಮಾರ್ಟ್ ಕಾರ್ಡ್ ಪ್ರಾರಂಭಿಸಿದ ಹೆಗ್ಗಳಿಕೆಗೆ ಬಿಎಂಟಿಸಿ ಪಾತ್ರವಾಗಲಿದೆ. ಸ್ಮಾರ್ಟ್ ಕಾರ್ಡ್ ಅಳವಡಿಕೆಯಿಂದ ನಗದು, ಚಿಲ್ಲರೆ ಸೇರಿದಂತೆ ಹಲವು ಸಮಸ್ಯೆ ದೂರವಾಗಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.