Advertisement

ಬಾಕಿ ವೇತನ ಪಾವತಿಗೆ ಆಗ್ರಹ

11:13 AM Oct 22, 2019 | Team Udayavani |

ಜಗಳೂರು: ಏಳು ತಿಂಗಳು ಕಳೆದರೂ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ದಿನಗೂಲಿ ನೌಕರರು ಸಂಜೆ ಕಚೇರಿ ಮುಂಭಾಗದಲ್ಲಿ ದಿಢೀರ್‌ ಪ್ರತಿಭಟನೆ ನಡೆಸಿದರು.

Advertisement

ಸೋಮವಾರ ಬೆಳಗ್ಗೆಯಿಂದ ವಲಯ ಅರಣ್ಯಾ ಧಿಕಾರಿಗಾಗಿ ನೌಕರರು ಕಾದರೂ ಸಹ ಈಗ ಬರುತ್ತೇನೆ, ಆಗ ಬರುತ್ತೇನೆ ಎಂದು ಹೇಳುತ್ತ ಸಂಜಾಯದರೂ ಅಧಿಕಾರಿ ಬಾರದ್ದರಿಂದ ನೌಕರರು ದಿಢೀರ್‌ ಪ್ರತಿಭಟನೆ ನಡೆಸಿದರು.

ಇಲಾಖೆಯ ಸುಮಾರು 30 ದಿನಗೂಲಿ ನೌಕರರರಿಗೆ ಕಳೆದ ಏಳು ತಿಂಗಳುಗಳಿಂದ ಸರಿಯಾಗಿ ವೇತನ ದೊರೆತಿಲ್ಲ. ಈ ಬಗ್ಗೆ ಕೇಳಿದರೆ ಅಧಿಕಾರಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಸಂಬಳ ಇಲ್ಲದೇ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ನೌಕರರು ದೂರಿದರು. ಅರಣ್ಯದಲ್ಲಿ ಮತ್ತು ಸಸ್ಯ ಕ್ಷೇತ್ರಗಳಲ್ಲಿ ಹಗಲಿರುಳೆನ್ನೆದೆ ಕಷ್ಟ ಪಟ್ಟು ದುಡಿಯುತ್ತಿದ್ದರೂ ಸಹ ವೇತನ ನೀಡದೇ ಇರುವುದರಿಂದ ಊಟಕ್ಕೂ ಸಹ ಕಷ್ಟಪಡುತ್ತಿದ್ದೇವೆ.

ಇಲಾಖೆಯ ನಿಯಮದಂತೆ 9600 ರೂ. ಸಂಬಳವಿದ್ದರೂ ಕೂಡ ವಲಯ ಅರಣ್ಯ ಅಧಿಕಾರಿಗಳು 7 ಸಾವಿರ ರೂ. ನೀಡುತ್ತಿದ್ದಾರೆ. ಈ ವೇತನವನ್ನೂ ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next