Advertisement
ಸಂಘಟನೆ ತಾಲೂಕು ಅಧ್ಯಕ್ಷೆ ಸರ್ದಾರ್ ಹುಲಿಗೆಮ್ಮ ಮಾತನಾಡಿ, ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಯಡಿ ನೀಡುವ ಮಾಸಾಶನಸೌಲಭ್ಯವನ್ನು ಫಲಾನುಭವಿಗಳಿಗೆ ಮರು ಮಂಜೂರು ಮಾಡಬೇಕು. ಅಧಿಕಾರಿಗಳು ಫಲಾನುಭವಿಗಳ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಸೌಲಭ್ಯವನ್ನು ರದ್ದು ಮಾಡಿರುವುದು ಅಧಿಕಾರಿಗಳ ನಿರ್ಲಕ್ಷತನವನ್ನು ಎತ್ತಿ ತೋರಿಸುತ್ತದೆ. ಪುನಃ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು
ಕಚೇರಿಗಳನ್ನು ಅಲೆದಾಡುವಂತಾಗಿದ್ದು, ಮಧ್ಯವರ್ತಿಗಳಿಗೆ ಸಾವಿರಾರು ರೂಗಳನ್ನು ಭರಿಸುವಂತಾಗಿದೆ. ವಿಧವೆಯರು, ವೃದ್ಧರು ಸೇರಿದಂತೆ ವಿವಿಧ ಅಶಕ್ತರಿಗೆ ಸಾಮಾಜಿಕ ಭದ್ರತೆ ಯೋಜನೆಯಡಿ ಕಲ್ಪಿಸುವುದು ಸರ್ಕಾರದ ಹೊಣೆಯಾಗಿದೆ. ನಾಡ ಕಚೇರಿ ಮತ್ತು ತಾಲೂಕು ಕಚೇರಿಗಳಲ್ಲಿ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗಾಗಲೇ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ ನೀಡಿದ್ದರೂ ಮಾಸಾಶನ
ಒದಗಿಲ್ಲ. ಕೂಡಲೇ ಸೌಲಭ್ಯ ವಂಚಿತರಿಗೆ ಮಾಸಾಶನ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.