Advertisement

ಅಕ್ರಮ ಮನೆ-ನಿವೇಶನ ಕಬ್ಜೆ ತೆರವಿಗೆ ಆಗ್ರಹ

12:47 PM Jun 01, 2022 | Team Udayavani |

ಕಲಬುರಗಿ: ನಗರದಲ್ಲಿ ಕೆಲವು ಜನ, ಸಂಘ, ಸಂಸ್ಥೆಗಳು ಮುಂಗೈ ಜೋರಿನಿಂದ ಖಾಲಿ ನಿವೇಶನ ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅಲ್ಲದೇ, ಸರಕಾರಿ ಜಾಗೆ ಕಬ್ಜೆ ಮಾಡಿಕೊಂಡು ದೊಡ್ಡ ಕಟ್ಟಡ, ಮಾಲ್‌ಗ‌ಳನ್ನು ಮಾಡಿಕೊಂಡಿದ್ದಾರೆ. ಕೂಡಲೇ ಅವುಗಳನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿ ಮಂಗಳವಾರ ಭಾರತೀಯ ಯುವ ಸೈನ್ಯದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಈಗಾಗಲೇ ಈ ಕುರಿತು ಪಾಲಿಕೆ ಕಮಿಷನರ್‌ಗೆ ಮನವಿ ಸಲ್ಲಿಸಲಾಗಿದೆ. ಆದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಸರಕಾರಿ ಆಸ್ತಿ, ನಿವೇಶನ ಒತ್ತುವರಿ ಮಾಡಿಕೊಂಡು ಮನೆ, ಅಂಗಡಿ, ಮಾಲ್‌ಗ‌ಳನ್ನು ಕಟ್ಟಿಸಿಕೊಂಡಿದ್ದಾರೆ. ಇದರಿಂದ ಸರಕಾರಕ್ಕೂ ನಷ್ಟ, ಬರಬೇಕಾಗಿ ರುವ ತೆರಿಗೆ ಮತ್ತು ಇತರೆ ಆದಾಯವೂ ನಷ್ಟವಾಗಿದೆ. ಸ್ವಾಮಿ ವಿವೇಕಾನಂದ ನಗರ, ಸಂತೋಷ ಕಾಲೋನಿ ಸೇರಿದಂತೆ ಹಲವೆಡೆಗಳಲ್ಲಿ ಖುದ್ದು ಅಧಿಕಾರಿಗಳೇ ಭೂಮಿ ಲೂಟಿ ಮಾಡುವ ಜನರಿಗೆ ನಕಲಿ ದಾಖಲೆಗಳನ್ನು ಅಸಲಿ ಎನ್ನುವಂತೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಹಲವಾರು ಕಡೆಗಳಲ್ಲಿ ನಿವೇಶನ, ಜಮೀನು ಪರಭಾರೆಯಾಗಿವೆ ಎಂದು ದೂರಿದರು.

ಸೈನ್ಯದ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ ಡೊಣ್ಣಿಗೇರಿ, ಅಧ್ಯಕ್ಷ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರು, ರವಿ ದೇಗಾಂವ್‌ ಹಾಗೂ ಮಹಿಳೆಯರು, ಅನ್ಯಾಯಕ್ಕೊಳಗಾಗಿರುವ ಜನರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next