Advertisement

ಕೃಷಿ ಪತ್ತಿನ ಸಹಕಾರ ಸಂಘದ ಅವ್ಯವಹಾರ ತನಿಖೆಗೆ ಆಗ್ರಹ

02:32 PM Jan 24, 2020 | Suhan S |

ಪಿರಿಯಾಪಟ್ಟಣ: ತಾಲೂಕಿನ ದೊಡ್ಡ ಬ್ಯಾಲಾಳು ಪ್ರಾಥಮಿಕ ಕೃಷಿ ಪತ್ತಿನ ಸಹ ಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರ ಸಂಬಂಧ ಸಂಘದ ಮುಖ್ಯಕಾರ್ಯದರ್ಶಿ ರಮೇಶ್‌ ಅವರನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಸಂಘದ ಅಧ್ಯಕ್ಷ ಶಿವಣ್ಣ ಆಗ್ರಹಿಸಿದರು.

Advertisement

ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹ ಕಾರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 2015ನೇ ಸಾಲಿನಲ್ಲಿ ಆಯ್ಕೆಯಾದ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್‌ ಹಾಗೂ ಮುಖ್ಯಕಾರ್ಯದರ್ಶಿ ರಮೇಶ್‌ 23 ಲಕ್ಷ ರೂ. ಅವ್ಯವಹಾರ ನಡೆಸಿದ್ದರು. ಈ ಸಂಬಂಧ ಸಿಇಒ ರಮೇಶ್‌ರನ್ನು ಅಮಾನತುಪಡಿಸಲಾಗಿತ್ತು. 15ದಿನ ಗಳ ನಂತರ ಅಂದಿನ ಅಧ್ಯಕ್ಷರಾಗಿದ್ದ ರಮೇಶ್‌ ಅವರು ಇನ್ನು ಮುಂದೆ ಸಂಘ ದಲ್ಲಿ ಏನೇ ಅವ್ಯವಹಾರ ನಡೆದರೂ ನಾನೇ ನೇರ ಹೊಣೆಗಾರನಾಗಿರುತ್ತೇನೆ ಎಂದು ಸಭೆಯಲ್ಲಿ ನಡಾವಳಿ ಮಾಡಿ ಸಹಿ ಹಾಕಿ ಮತ್ತೆ ಸಿಇಒ ರಮೇಶ್‌ರನ್ನು ಕೆಲಸಕ್ಕೆ ತೆಗೆದು ಕೊಂಡಿದ್ದರು.

ಹಿಂದಿನ ತಪ್ಪು ತಿದ್ದಿಕೊಳ್ಳದ ಸಿಇಒ ರಮೇಶ್‌ ಫ‌ಲಾನುಭವಿಗಳ ಹಣ ಲಪಟಾಯಿಸಿದ್ದಾರೆ. ಇದರಲ್ಲಿ ಮಾಜಿ ಅಧ್ಯಕ್ಷರಾದ ರಮೇಶ್‌ ಹಾಗೂ ಕುಭೇರ ಭಾಗಿಯಾಗಿದ್ದಾರೆ. ಈ ಕುರಿತು ಸಹ ಕಾರ ಸಂಘಗಳ ನಿಬಂಧಕರು ಹಾಗೂ ಲೆಕ್ಕಾಧಿ ಕಾರಿಗಳು ತನಿಖೆ ನಡೆಸಿದಾಗ ಇದುವರೆಗೆ ಸಂಘದಲ್ಲಿ 80 ಲಕ್ಷ ರೂ. ದುರುಪಯೋಗ ವಾಗಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅವರನ್ನು ಹೈಕೋರ್ಟ್‌ ಇವರನ್ನು ಅನರ್ಹ ಗೊಳಿಸಿತು. ನಂತರ ನಡೆದ ಚುನಾವಣೆ ಯಲ್ಲಿ ತಾವು ಆಯ್ಕೆಯಾಗಿದ್ದು, ಈ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸ ದರು. ಗೋಷ್ಠಿಯಲ್ಲಿ ಸಂಘದ

ಉಪಾಧ್ಯಕ್ಷ ಆರ್‌.ಬಿ.ಮಹೇಂದ್ರ, ನಿರ್ದೆಶಕರಾದ ಅಪ್ಪಾಜೀ ಗೌಡ, ಬಸವ ರಾಜೇ ಅರಸ್‌, ರುಕ್ಮಿಣಿ, ಕನಕಮ್ಮ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next