Advertisement

ಗೊಂಬೆ ಕ್ಲಸ್ಟರ್‌ಗೆ ಸ್ಥಾಪನೆಗೆ ಆಗ್ರಹ

01:06 PM Sep 26, 2020 | Suhan S |

ರಾಮನಗರ: ಚನ್ನಪಟ್ಟಣದಲ್ಲೇ ಆಟಿಕೆ ಉತ್ಪಾದನಾ ಕ್ಲಸ್ಟರ್‌ ಸ್ಥಾಪಿಸಬೇಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

Advertisement

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ನೇತೃತ್ವದಲ್ಲಿ ನೂರಾರು ಅಟಿಕೆತಯಾರಕರು ಮತ್ತು ವೇದಿಕೆ ಕಾರ್ಯಕರ್ತರು ಚನ್ನಪಟ್ಟಣದಿಂದ ರಾಮನಗರಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ ಗೌಡ, ಇತ್ತೀಚೆಗೆ ಪ್ರಧಾನಿ ಮೋದಿಯವರು ಚನ್ನಪಟ್ಟಣದ ಗೊಂಬೆ ಉದ್ಯ ಮದ ಬಗ್ಗೆ ಮಾತನಾಡಿದ್ದಾರೆ. ಆದರೆ ಚನ್ನಪಟ್ಟಣದ ಗೊಂಬೆ ಉದ್ಯಮ ನಶಿಸುತ್ತಿದೆ. ಇದಕ್ಕೆ ಚೀನಾದಿಂದ ಆಮದು ಆಗುತ್ತಿರುವ ಆಟಿಕೆಗಳೆ ಕಾರಣ. ಚೀನಾದ ಆಟಿಕೆಗಳು ಲಕ್ಷ ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿವೆ.ಕೇಂದ್ರ ಸರ್ಕಾರ ತಕ್ಷಣ ಚೀನಾದ ಆಟಿ ಕೆಗಳಿಗೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದರು.

ಜಿಎಸ್‌ಟಿ ತಗೆದು ಹಾಕಿ: ದೆಹಲಿ ಮತ್ತು ಬಾಂಬೆಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಕರಕುಶಲ ಪ್ರದರ್ಶನ ಮೈಸೂರು ಅಥವಾ ಬೆಂಗಳೂರಿ ನಲ್ಲಿ ನಡೆಸಬೇಕು. ಹಾಗೂ ಗೊಂಬೆಗಳ ಮಾರಾಟದ ಮೇಲೆ ವಿಧಿಸಿರುವ ಶೇ.12 ಜಿಎಸ್‌ಟಿ ತೆಗೆದುಹಾಕಿ ಗೊಂಬೆ ಉದ್ಯಮಕ್ಕೆ ಪ್ರೋತ್ಸಾಹಕೊಡ ಬೇಕು ಎಂದರು.

ಮಾರಾಟ ಕೇಂದ್ರ ಸ್ಥಾಪಿಸಿ: ಚನ್ನಪಟ್ಟಣದಲ್ಲಿರುವ ಕ್ರಾಫ್ಟ್ ಪಾರ್ಕ್‌ ಬೆಂಗಳೂರು, ಮೈಸೂರಿನ ಬಹು ದೊಡ್ಡ ಉದ್ಯಮಿಗಳಿಗೆ ಹೆಚ್ಚು ಅನುಕೂಲವಾಗುತ್ತಿದ್ದು, ಸ್ಥಳೀಯ ಕರಕುಶಲ ಕರ್ಮಿಗಳಿಗೆ ಸವಲತ್ತು ಉಪಯೋಗಿಸಿಕೊಳ್ಳಲು ಅವಕಾಶಗಳನ್ನು ಜಿಲ್ಲಾಡ ಳಿತ ಕಲ್ಪಿಸಬೇಕು. ಆಟಿಕೆಗಳ ಮಾರಾಟಕ್ಕೆ ವಿಶ್ವ ದರ್ಜೆಯ ಮಾರಾಟ ಕೇಂದ್ರ ಸ್ಥಾಪಿಸಬೇಕೆಂದರು. ಬಿಐಎಸ್‌ಕಾನೂನು ಬೇಡ: ದೇಶದಲ್ಲಿ ತಯಾರಾಗುವ ಗೊಂಬೆಗಳಿಗೆ ಬಿಐಎಸ್‌ ಕಾನೂನು ಅನ್ವಿಯಿಸುವಂತೆಕೇಂದ್ರ ಸರ್ಕಾರ ಇತ್ತೀಚೆಗೆ ನಿರ್ಧರಿಸಿದ್ದು,ಗೊಂಬೆ ತಯಾರಕರು 5ರಿಂದ 6 ಲಕ್ಷ ರೂ. ನೀಡಿ ಹೆಸರು ನೋಂದಾಯಿಸಿಕೊಂಡು ನಂತರ ಮಾರುಕಟ್ಟೆಗೆ ಗೊಂಬೆ ಬಿಡುಗಡೆ ಮಾಡುವ ಮುನ್ನ ಪರೀಕ್ಷೆಗೆ ಒಳಪಡಿಸಬೇಕು. ಇದಕ್ಕೂ ಕನಿಷ್ಠ 30 ಸಾವಿರ ಹಣ ತೆರಬೇಕು. ವಾಸ್ತವದಲ್ಲಿ ಈ ಕಾನೂನು ಜಾರಿಯಾದರೆ ಚನ್ನಪಟ್ಟಣದ ಗೊಂಬೆ ಉದ್ಯಮಕ್ಕೆ ಮಗದಷ್ಟು ಹೊಡೆತ ಬೀಳಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

Advertisement

ಅರಣ್ಯ ಇಲಾಖೆ ವಿರುದ್ಧ ಕಿಡಿ: ಚನ್ನಪಟ್ಟಣದ ಗೊಂಬೆಗಳನ್ನು ತಯಾರಿಸಲು ಮುಖ್ಯವಾಗಿ ಆಲೆ ಮರ ಬೇಕು. ಆದರೆ ಆಲೆಮರ ಸಾಗಾಟಕ್ಕೆ ಅರಣ್ಯ ಇಲಾಖೆಯಿಂದ ಕಿರುಕುಳ ತಪ್ಪಿಸಬೇಕು. ತಮ್ಮ ಬೇಡಿಕೆಗಳು ತಕ್ಷಣ ಈಡೇರದಿದ್ದರೆ, ವಿಧಾನಸೌಧದ ಮುಂಭಾಗ ನಂತರ ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.ಕಕಜವೇ ಜಿಲ್ಲಾಧ್ಯಕ್ಷ ಯೋಗೇಶ್‌ ಗೌಡ, ಪ್ರಮುಖರಾದ ಎನ್‌.ರಮೇಶ್‌, ಶ್ರೀನಿವಾಸ್‌, ಕುಮಾರ್‌, ಮುಸ್ತಾಫ್ ಭಾಷ, ಭೂಪತಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next