ಜೋಯಿಡಾ: ತಾಲೂಕಿನಾದ್ಯಂತನಡೆಯುತ್ತಿರುವ ಲೋಕೋಪಯೋಗಿ ಇಲಾಖೆ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಬಗ್ಗೆ ಸರ್ಕಾರ ಕೂಡಲೆ ಕ್ರಮಕೈಗೊಂಡು ಗುತ್ತಿಗೆದಾರರಿಗೆ ಮತ್ತು ಸಂಬಂಧಿಸಿದ ಇಂಜೀನಿಯರ್‌ಗಳ ವಿರುದ್ಧ ಕ್ರಮಕೈಗೊಂಡು, ಕಪ್ಪುಪಟ್ಟಿಗೆ ಸೇರಿಸಬೇಕೆಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ತಹಶೀಲ್ದಾರ್‌ಗೆ ಮನವಿ ನೀಡಿ ಮಾತನಾಡಿದ ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ, ಜೋಯಿಡಾ ತಾಲೂಕು ಹಿಂದುಳಿದಿದ್ದು, ಇದರ ಅಭಿವೃದ್ಧಿಗಾಗಿ ಶಾಸಕ ಆರ್.ವಿ. ದೇಶಪಾಂಡೆ ಪ್ರಯತ್ನದಿಂದಕೋಟ್ಯಾಂತರ ಅನುದಾನ ಸರಕಾರದಿಂದ ತಂದಿದ್ದಾರೆ. ಆದರೆ ಈ ಹಣದಿಂದನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳು ಸರಿಯಾಗಿ ನಡೆಯದೆ, ಕಟ್ಟಡ, ರಸ್ತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿದ್ದು ಕಂಡುಬರುತ್ತಿದೆ. ಇಲ್ಲಿ ಗುತ್ತಿಗೆದಾರರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಭಿವೃದ್ಧಿ ಹೆಸರಲ್ಲಿಬೇಜವಾಬ್ದಾರಿ ತೋರಿದ್ದು ಹಣ ನುಂಗಾಯಣ ಮಾಡಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ಸದ್ಯದಲ್ಲೆ ಉದ್ಘಾಟನೆ ಗೊಳ್ಳಬೇಕಾಗಿದ್ದಜೋಯಿಡಾ ಮಿನಿ ವಿಧಾನ ಸೌಧ ಮೋದಲೆ ಸೋರುತ್ತಿದೆ. ಪಾಲಿಟೆಕ್ನಿಕ್
ಕಾಲೇಜಿನ ವರಾಂಡಾದ ಕಾಮಗಾರಿಗೆ ಕಳಪೆ ಮಟ್ಟದ ಕಬ್ಬಿಣ ಬಳಸಲಾಗಿದೆ. ಸಿಂಗರಗಾಂವ ದತ್ತ ಮಂದಿರದ ಕಾಂಕ್ರೀಟ ರಸ್ತೆ ಸಂಪೂರ್ಣ ಕಳಪೆಯಾಗಿದೆ. ಇನ್ನೂ ಹಲವಾರು ಕಾಮಗಾರಿಗಳು ಕೆಲಸ ಮಾಡದೆ ಬಿಲ್ ಮಾಡಲಾಗಿದೆ. ಈಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮಾತನಾಡಿದರೆಅವರಿಂದ ಸಮರ್ಪಕ ಉತ್ತರ ಸಿಗುತ್ತಿಲ್ಲ. ಈ ಬಗ್ಗೆ ಹಲವಾರು ದಿನದ ಹಿಂದೆಯೆ ಮನವಿ ಮಾಡಲಾಗಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ಡಿ.1 ರಂದು ಧಾರವಾಡದ ಮುಖ್ಯ ಇಂಜೀನಿಯರ್ ಕಚೇರಿ ಮುಂದೆನಮ್ಮ ಸಂಘಟನೆಯಿಂದ ಹೋರಾಟನಡೆಸಲಾಗುವುದು ಎಂದು ತಿಳಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಗಿರೀಶ ಎನ್. ಎಸ್., ಮಹಿಳಾ ಘಟಕದ ರಾಜ್ಯಉಪಾಧ್ಯಕ್ಷೆ ಸುಮನಾ ಹರಿಜನ, ಅಶೋಕ ಕಾಂಬಳೆ, ಮಂಜುನಾಥ ದೊಡ್ಮನಿ, ತುಕಾರಾಮ ಮೇತ್ರಿ,ಶ್ರೀಕಾಂತ ಮಾದರ, ದುರ್ಗಪ್ಪಾ ಮೇತ್ರಿ, ಗೋವಿಂದ ಮುನಿಸ್ವಾಮಿ ಇತರರು ಉಪಸ್ಥಿತರಿದ್ದರು.