Advertisement

ವೈದ್ಯರ ನೇಮಕಕ್ಕೆ ಒತ್ತಾಯಿಸಿ ಮನವಿ

02:28 PM Feb 07, 2020 | Suhan S |

ಸವಣೂರ: ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದ ಆರೋಗ್ಯ ವಿಸ್ತೀರ್ಣ ಘಟಕಕ್ಕೆ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಗ್ರಾಮದ ಸಾರ್ವಜನಿಕರು ಮನವಿ ಸಲ್ಲಿಸಿದರು.

Advertisement

ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಸುಮಾರು 3 ವರ್ಷಗಳ ಹಿಂದೆ ಮಂಜೂರಾಗಿದ್ದ ಆರೋಗ್ಯ ವಿಸ್ತೀರ್ಣ ಘಟಕ ಈ ವರೆಗೆ ಸುವ್ಯಸ್ತಿತವಾಗಿ ನಡೆಯುತ್ತಿತ್ತು. ಆದರೆ, 2 ಎರಡು ತಿಂಗಳಿಂದ ವೈದ್ಯರಿಲ್ಲದ ಕಾರಣ ರೋಗಿಗಳು ಪರದಾಡುವಂತಾಗಿದೆ. ಸುಮಾರು 8 ಸಾವಿರ ಜನಸಂಖ್ಯೆ ಹೊಂದಿದ ಹುರಳಿಕುಪ್ಪಿ ಗ್ರಾಪಂ ಹಾಗೂ ಅದರ ಸುತ್ತಮುತ್ತಲಿನ ಗ್ರಾಮಗಳಾದ ತೊಂಡುರ, ಹೊಸಳ್ಳಿ, ಮೆಳ್ಳಾಗಟ್ಟಿ, ಮೆಳ್ಳಾಗಟ್ಟಿ ಪ್ಲಾಟ್‌, ಕುರುಬರಮಲ್ಲೂರು ಹಾಗೂ ಕುರುಬರಮಲ್ಲೂರು ಪ್ಲಾಟ್‌ಗಳಿಂದ ಘಟಕಕ್ಕೆ ಬರುವ ರೋಗಿಗಳಿಗೆ ತುಂಬಾ ಅನುಕೂಲವಾಗಿತ್ತಿದ್ದು, ಇಂದು ವೈದ್ಯರಿಲ್ಲದ ಕಾರಣ ರೋಗಿಗಳು ಪರದಾಡುವಂತಾಗಿದೆ. ಆದ್ದರಿಂದ, ಈ ಹಿಂದಿನ ವೈದ್ಯರನ್ನು ತಕ್ಷಣವೇ ನಿಯೋಜನೆ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಗ್ರಾಮಪಂಚಾಯತ್‌ ಕಚೇರಿಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಮನವಿಯನ್ನು ಸ್ವೀಕರಿಸಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಭೋಜರಾಜ ಲಮಾಣಿ ಮಾತನಾಡಿ, ಈ ಕುರಿತು ಹುರಳಿಕುಪ್ಪಿ ಗ್ರಾಪಂನಿಂದ ಸಾರ್ವಜನಿಕರ ಮನವಿಯನ್ನು ತಾಲೂಕು ಆರೋಗ್ಯ ಅಧಿ ಕಾರಿಗಳಿಗೆ ಕಳುಹಿಸಿ ಕೊಡುವ ಮೂಲಕ ವೈದ್ಯರ ನಿಯೋಜನೆ ಮಾಡುವಂತೆ ಕೋರಲಾಗುವುದು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ನಿಂಗಪ್ಪ ತಿಪ್ಪಕ್ಕನವರ, ಸದಸ್ಯರಾದ ಉಡಚಪ್ಪ ದೊಡ್ಡುಡುಚಪ್ಪನವರ, ಕರಿಯಪ್ಪ ಮ್ಯಾಗೇರಿ, ಗಿರಿಜವ್ವ ವೈಯ್ನಾಳಿ, ಸುಶೀಲಾ ಕಡಕೋಳ, ನಿರ್ಮಲಾ ಹೊಸಳ್ಳಿ, ಶಾರದಾ ತಿಪ್ಪಕ್ಕನವರ, ಗ್ರಾಮಸ್ಥರಾದ ಚಂದ್ರು ಕೃಷ್ಣಣ್ಣನವರ, ಟಿ.ಪಿ. ಪಾಟೀಲ, ಉಮೇಶ ದೊಡ್ಡಮನಿ, ಚಂದ್ರು ಹುಲಗೂರ, ಫಕ್ಕಿರೇಶ ಪೂಜಾರ, ಫಕ್ಕಿರೇಶ ಬಿಜೂರ, ರತ್ನವ್ವ ಪೂಜಾರ, ಗೌರವ್ವ ಸುಬ್ಬಣ್ಣವರ, ಗುಡ್ಡಪ್ಪ ಯರೇಶಿಮಿ, ಬಸಪ್ಪ ಅಜ್ಜಣ್ಣವರ, ಗುಡ್ಡಪ್ಪ ಮರೆಮ್ಮನವರ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next