Advertisement

ಹಾಳಾದ ರಸ್ತೆ ಅಭಿವೃದ್ಧಿಗೆ ಮನವಿ

12:31 PM Mar 04, 2018 | |

ಬೀದರ: ಯುಜಿಡಿ ಕಾಮಗಾರಿಯಿಂದ ಹಾಳಾದ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಬೀದರ ಯೂಥ್‌ ಎಂಪಾವರಮೆಂಟ್‌ ಅಸೋಸಿಯೇಶನ್‌ ಆಗ್ರಹಿಸಿದೆ. 

Advertisement

ಸಂಘಟನೆ ಅಧ್ಯಕ್ಷ ಶಾಹೇದ್‌ ಅಲಿ ನೇತೃತ್ವದಲ್ಲಿ ಪ್ರಮುಖರು ಜಿಲ್ಲಾ ಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.ನಗರದಲ್ಲಿ ವಿಶೇಷವಾಗಿ ದರ್ಜಿ ಗಲ್ಲಿ ಮತ್ತು ಅಂಬೇಡ್ಕರ ವೃತ್ತ- ಗವಾನ್‌ ವೃತ್ತದ ವರೆಗಿನ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅದರಲ್ಲಿ ಅರ್ಧದಷ್ಟು ಮಾಡಿ ಕೈ ಬಿಡಲಾಗಿದೆ ಎಂದು ದೂರಲಾಗಿದೆ. ಹದಗೆಟ್ಟ ರಸ್ತೆಯಿಂದ ಧೂಳು ಹೆಚ್ಚಿ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. 

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next