Advertisement

ಬೆಳೆ ವಿಮಾ ಪರಿಹಾರಕೆ ಆಗ್ರಹಿಸಿ ಮನವಿ

03:44 PM Oct 19, 2019 | Suhan S |

ಕುಷ್ಟಗಿ: ಮಸಾರಿ (ಕೆಂಪು) ಜಮೀನಿನಲ್ಲಿ 2018-19ನೇ ಸಾಲಿನಲ್ಲಿ ಹಾನಿಯಾದ ಬೆಳೆಗೆ ವಿಮಾ ಪರಿಹಾರಕ್ಕಾಗಿ ಆಗ್ರಹಿಸಿ, ರೈತ ಸಂಘ ಮಾಲಗಿತ್ತಿ ಗ್ರಾಮ ಘಟಕದ ನೇತೃತ್ವದಲ್ಲಿ ರೈತರು ಶುಕ್ರವಾರ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರಗೆ ಮನವಿ ಸಲ್ಲಿಸಿದರು.

Advertisement

ಸಂಘದ ಅಧ್ಯಕ್ಷ ಶಿವಪುತ್ರಪ್ಪ ಹೊಸಮನಿ ಅವರು, 2018-19ನೇ ಸಾಲಿನಲ್ಲಿ ಪಾವತಿಯಾಗಬೇಕಾದ ವಿಮಾ ಪರಿಹಾರದ ಬಗ್ಗೆ ಸಂಬಂಧಿ ಸಿದ ಇಲಾಖೆಯಿಂದಸರಿಯಾದ ಮಾಹಿತಿ ಇಲ್ಲದೇ ಅಲೆದಾಡಿಸುತ್ತಿದ್ದಾರೆ. ರೈತರ ಕಪ್ಪು ಜಮೀನಿಗೆ ಅಷ್ಟೇ ಪರಿಹಾರ ಬಂದಿದ್ದು, ಕೆಂಪು (ಮಸಾರಿ) ಜಮೀಗೆ ಪರಿಹಾರ ನೀಡದೇ ರೈತರಲ್ಲಿ ತಾರತಮ್ಯ ಮಾಡುತ್ತಿದ್ದಾರೆ.

ಇದಕ್ಕೆ ಶಾಸಕರು ಲೋಪದೋಷ ಸರಿಪಡಿಸಿ, ಮಸಾರಿ ಜಮೀನು ಹೊಂದಿದ ರೈತರಿಗೆ ವಿಮಾ ಪರಿಹಾರ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರು ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದೆ. ಆಗಿರುವ ನ್ಯೂನ್ಯತೆ ಸರಿಪಡಿಸುವ ಭರವಸೆ ನೀಡಿದರು. ಯಂಕಪ್ಪ, ಅಂದಪ್ಪ ಬಳಿಗಾರ, ಯಮನಪ್ಪ ಮತ್ತೀತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next