ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀಣಾ ವಿಜಯಾನಂದ ಕಾಶಪ್ಪನವರ ಪರ ಮಾಜಿ ಶಾಸಕ ಎಚ್.ವೈ. ಮೇಟಿ, ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ಅಭ್ಯರ್ಥಿ ವೀಣಾ ಕಾಶಪ್ಪನವರ ಬಾಗಲಕೋಟೆ ನಗರದ ನಂದೀಶ್ವರನಗರದ, ಜ್ಯೋತಿ ಕಾಲೋನಿಯಲ್ಲಿ ಬೆಳಗ್ಗೆ ಮತಯಾಚನೆ ಮಾಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಅಭಿವೃದ್ಧಿ ಕಾರ್ಯಕ್ರಮಗಳ ಒಳಗೊಂಡ ಮತಪತ್ರಗಳನ್ನು ಹಂಚಿ ಬಾಗಲಕೋಟೆ ಲೋಕಸಭಾ ಅಭ್ಯರ್ಥಿವೀಣಾ ಕಾಶಪ್ಪನವರರಿಗೆ ಮತ ಹಾಕಿ ಜನಾಶೀರ್ವಾದ ಮಾಡಬೇಕು ಎಂದು ಮನವಿಸಿದರು.
ಅಭ್ಯರ್ಥಿ ವೀಣಾ ಕಾಶಪ್ಪನವರ ಮನೆ-ಮನೆಗಳಿಗೆ ಭೇಟಿ ನೀಡಿ ಬಾಗಲಕೋಟೆ ಅಭಿವೃದ್ಧಿಗೆ ಮತ ನೀಡಿ ಆಶೀರ್ವಾದ
ಮಾಡಬೇಕೆಂದು ಹಿರಿಯರಿಂದ ಆಶೀರ್ವಾದ ಪಡೆದರು. ಪ್ರಚಾರಕ್ಕೂ ಮೊದಲಿಗೆ ನೇರವಾಗಿ ವಿದ್ಯಾಗಿರಿಯ ಜ್ಯೋತಿ
ಕಾಲನಿಯ ಮಾರುತೇಶ್ವರ ದೇವಸ್ಥಾನಕ್ಕೆ ತೆರಳಿ ದರುಶನ ಪಡೆದು ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.
ವಿದ್ಯಾಗಿರಿಯ ನಂದೀಶ್ವರ ನಗರದ ಜಗದ್ಗುರು ಮಳೆರಾಜೇಂದ್ರಸ್ವಾಮಿಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದಪಡೆದರು. ಮನೆ-ಮನೆಗಳಿಗೆ ಹೋಗಿ ಮತವನ್ನು ನಿಮ್ಮ ಮನೆ ಮಗಳಾಗಿ ಬಂದಿದ್ದೇನೆ. ನಿಮ್ಮ ಮತ ನೀಡಿ ಆಶೀರ್ವಾದ ಎಂದು ಮನವಿ ಮಾಡಿದರು. ನಂದೀಶ್ವರ ನಗರದ ಮನೆಗಳಲ್ಲಿ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರಿಗೆ ಮಹಿಳೆಯರು ಆರತಿ ಮಾಡಿ, ಕುಂಕುಮ ನೀಡಿ ಚುನಾವಣೆಗೆ ಶುಭಾಶಯ ಕೋರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಸೌದಾಗರ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮುಖಂಡ ನಾಗರಾಜ ಹದ್ಲಿ, ನಗರದ ಸಭೆ
ಸದಸ್ಯ ಚನ್ನವೀರ ಅಂಗಡಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಜೆಡಿಎಸ್ ಸಲೀಂ ಮೋಮೀನ್, ಶರಣು ಹುರಕಡ್ಲಿ, ನಗರಸಭೆ ಸದಸ್ಯ ಹಾಜಿಸಾಬ ದಂಡಿನ, ವಿನೀತಕುಮಾರ ಮೇಲಿನಮನಿ, ಸಂಗನಗೌಡ ಪಾಟೀಲ, ಸಂಗಮೇಶ ದೊಡಮನಿ, ಶಿವಾನಂದ ಯಾಳಗಿ, ಭೀಮು ಪೂಜಾರಿ, ಸುನೀಲ ದೊಡಮನಿ, ಬಸವರಾಜ, ಶಶಿಕಲಾ ಯಾಳಗಿ, ಕಾರ್ಯಕರ್ತರು, ಮುಖಂಡರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.