Advertisement

ಸಿಂಡಿಕೇಟ್‌ ಸದಸ್ಯರ ನೇಮಕಾತಿ ಆದೇಶ ರದ್ದತಿಗೆ ಮನವಿ

11:08 PM Jul 24, 2019 | Lakshmi GovindaRaj |

ಬೆಂಗಳೂರು: 13 ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಗೆ ಸರ್ಕಾರದ ನಾಮನಿರ್ದೇಶಿಸತ ಸದಸ್ಯರನ್ನಾಗಿ ನೇಮಿಸಿರುವುದನ್ನು ರದ್ದು ಪಡಿಸುವಂತೆ ಕೋರಿ ವಿಧಾನ ಪರಿಷತ್‌ ಸದಸ್ಯರಾದ ಅರುಣ್‌ ಶಹಪುರ ಹಾಗೂ ಎಸ್‌.ವಿ. ಸಂಕನೂರ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರನ್ನು ಬುಧವಾರ ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

Advertisement

ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಧಾರವಾಡ ಸೇರಿದಂತೆ ರಾಜ್ಯದ 13 ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಸರ್ಕಾರದ ನಾಮನಿರ್ದೇಶಿತ ಸದಸ್ಯರನ್ನಾಗಿ ಮೈತ್ರಿ ಸರ್ಕಾರ ಪತನಕ್ಕೂ ಒಂದೆರೆಡು ದಿನ ಮೊದಲು ಆದೇಶ ಹೊರಡಿಸಿತ್ತು. ಸರ್ಕಾರದ ನಾಮನಿರ್ದೇಶಿತ ಸದಸ್ಯರಿಗೆ ಮೂರು ವರ್ಷಗಳ ಸೇವಾವಧಿ ಇರುವುದರಿಂದ ಮೈತ್ರಿ ಸರ್ಕಾರದ ತರಾತುರಿಯಲ್ಲಿ ನೇಮಕಾತಿ ನಡೆಸಿತ್ತು.

ಸರ್ಕಾರ ಅತಂತ್ರದಲ್ಲಿ ಇರುವಾಗ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳದಂತೆ ರಾಜ್ಯಪಾಲರು ಸೂಚಿಸಿದ್ದರೂ, ಸರ್ಕಾರ ಈ ಆದೇಶ ಹೊರಡಿಸಿದೆ. ಹೊಸ ಕಾಯ್ದೆಯಂತೆ ಸಿಂಡಿಕೇಟ್‌ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದೆ. ಆ ಕಾಯ್ದೆಗೆ ವಿಧಾನ ಮಂಡಲದ ಉಭಯ ಸದನ ಒಪ್ಪಿಗೆ ನೀಡಿದ್ದು, ರಾಜ್ಯಪಾಲರ ಅಂಕಿತಷ್ಟೇ ಭಾಕಿ ಇದೆ. ಈ ಮಧ್ಯೆ ಮೈತ್ರಿ ಸರ್ಕಾರ 13 ವಿವಿಗೆ ಸಿಂಡಿಕೇಟ್‌ ಸದಸ್ಯರ ನೇಮಕ ಮಾಡಿರುವುದು ಸರಿಯಲ್ಲ. ಅದನ್ನು ರದ್ದು ಮಾಡಬೇಕು ಎಂದು ಕೋರಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next