Advertisement

ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಹಂಚಿಕೆ ಆಗ್ರಹ

04:28 PM Jun 24, 2018 | Team Udayavani |

ಗದಗ: ನಗರಸಭೆಯಿಂದ ಫಾರಂ ನಂ.3 ವಿತರಿಸುವುದು ಮತ್ತು ವಸತಿರಹಿತ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಸ್ಲಂ ಜನಾಂದೋಲನ ಹಾಗೂ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ನೇತೃತ್ವದಲ್ಲಿ ನೂರಾರು ಸ್ಲಂ ನಿವಾಸಿಗಳು ಶುಕ್ರವಾರ ನಗರಸಭೆ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.

Advertisement

ಈ ವೇಳೆ ನಗರಾಡಳಿತದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ನಗರಸಭೆ ಸ್ಲಂ ನಿವಾಸಿಗಳ ವಿರೋ ಧಿನೀತಿ ಅನುಸರಿಸುತ್ತಿದೆ. ವಸತಿರಹಿತ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಹಂಚುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸ್ಲಂ ಪ್ರದೇಶದ ಕುಟುಂಬಗಳಿಗೆ ಫಾರಂ ನಂ.3 ವಿತರಿಸಬೇಕು, ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಅನುದಾನ ಮಂಜೂರು ಮಾಡಬೇಕು. ಸ್ಲಂ ಪ್ರದೇಶಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಅನುದಾನ ಮೀಸಲಿಡಬೇಕು, ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಆಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಗಂಗಿಮಡಿ ಪ್ರದೇಶದಲ್ಲಿ 3630 ವಸತಿ ರಹಿತ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಕಾಮಗಾರಿ ನಡೆಯುತ್ತಿದೆ. ಆದರೆ, 350 ಮೂಲ ವಸತಿ ರಹಿತ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ, ಉಳಿದವರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು. ನಗರಸಭೆ ಅಧಿಕಾರಿಗಳು ಕೊಳಚೆ ಪ್ರದೇಶ ನಿವಾಸಿಗಳ ಅಗತ್ಯ ಬೇಡಿಕೆ ಈಡೇರಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಗರಸಭೆ ಎದುರು ಕೊಳಚೆ ಪ್ರದೇಶದ ನೂರಾರು ನಿವಾಸಿಗಳೊಂದಿಗೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್‌ ಆರ್‌.ಮಾನ್ವಿ, ಯುಸೂಫ್‌ ನಮಾಜಿ, ಅಶೋಕ ಮ್ಯಾಗೇರಿ, ಅಶೋಕ ಕುಡತಿನ್ನಿ, ಇಮ್ತಿಯಾಜ್‌ ಮಾನ್ವಿ, ಅಬೂಬ್ಕರ್‌ ಮಕಾನದಾರ, ಇಬ್ರಾಹಿಂ ಮುಲ್ಲಾ, ಮುಮ್ತಾಜ್‌ ಮಕಾನದಾರ, ಮೆಹರುನ್ನೀಸಾ ಡಾಲಾಯತ್‌, ನಜೀರಸಾಬ್‌ ಹಾಳಕೇರಿ ಹಾಗೂ ಇತರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next